ಗಡೇದಗೆ ಕಾಯಕಯೋಗಿ ಪ್ರಶಸ್ತಿಯ ಗರಿ
Gaded wins Kayakayogi award
ವಿಜಯಪುರ 30: ಜಿಲ್ಲೆಯ ಮುದ್ದೇಬಿಹಾಳದ ಹಸಿರು ತೋರಣ ಗೆಳೆಯರ ಬಳಗದ ಸಂಚಾಲಕ ಮಹಾಬಲೇಶ್ವರ ಶಿವಲಿಂಗಪ್ಪ ಗಡೇದ ಅವರಿಗೆ 2026 ನೇ ಸಾಲಿನ "ಕಾಯಕ ಯೋಗಿ" ರಾಜ್ಯ ಪ್ರಶಸ್ತಿ ಲಭಿಸಿದೆ. ಪವಾಡ ಬಯಲು ಆಂದೋಲನದ ಮೂಲಕ ರಾಜ್ಯಾದ್ಯಂತ ಹೆಸರಾಗಿರುವ ಡಾ.ಹುಲಿಕಲ್ಲ ನಟರಾಜ ಸಂಸ್ಥಾಪಕ ಅಧ್ಯಕ್ಷರಾಗಿರುವ ’ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು (ರಿ) ದೊಡ್ಡಬಳ್ಳಾಪುರ ಇವರು ಪ್ರತೀ ಜಿಲ್ಲೆಗೆ ಒಬ್ಬರಂತೆ ನೀಡುವ "ಕಾಯಕ ಯೋಗಿ-2026" ಪ್ರಶಸ್ತಿ ಗೆ ವಿಜಯಪುರ ಜಿಲ್ಲೆಯ ವತಿಯಿಂದ ಮಹಾಬಲೇಶ್ವರ ಗಡೇದ ಆಯ್ಕೆಯಾಗಿದ್ದಾರೆ.
ಸದ್ಯ ಹೂವಿನ ಹಿಪ್ಪರಗಿ ಅಂಚೆ ಇಲಾಖೆಯಲ್ಲಿ ಸಬ್ ಪೋಸ್ಟ್ ಮಾಸ್ಟರ್ ಆಗಿರುವ ಮಹಾಬಲೇಶ್ವರ ಗಡೇದ ಇವರಿಗೆ ರಾಜ್ಯ ಮಟ್ಟದ ಕಾಯಕಯೋಗಿ ಪ್ರಶಸ್ತಿ ದೊರೆತಿರುವುದು ಸಂತಸದ ಸಂಗತಿ ಎಂದು ವಿಜಯಪುರ ಜಿಲ್ಲಾ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಅಧ್ಯಕ್ಷರಾದ ಸಂಗಮೇಶ. ವಿ.ಬುರ್ಲಿ ತಿಳಿಸಿದ್ದಾರೆ.
ಪರಿಸರ ಸಂರಕ್ಷಣೆ ಉದ್ದೇಶದಿಂದ ಹತ್ತು ವರ್ಷಗಳ ಹಿಂದೆ ಆರಂಭಿಸಲಾದ" ಹಸಿರು ತೋರಣ ಗೆಳೆಯರ ಬಳಗ" ಮುದ್ದೇಬಿಹಾಳ ಇದರ ಸಂಚಾಲಕರಾಗಿ, ಅರಣ್ಯ ಇಲಾಖೆ, ಪುರಸಭೆ ಹಾಗೂ ಹಸಿರು ತೋರಣ ಬಳಗದ ಸಹಯೋಗದೊಂದಿಗೆ ಅಂದಾಜು ಹತ್ತು ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಅಭಿಯಾನ, ನೀರು ಉಳಿಸಿ ಅಭಿಯಾನ,ಸ್ವಚ್ಚತಾ ಅಭಿಯಾನ, ಮುದ್ದೇಬಿಹಾಳ ಕೆರೆ ಸ್ವಚ್ಚತಾ ಅಭಿಯಾನ ಮಾಡಿದ ಇವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ ಎಂದವರು ತಿಳಿಸಿದರು.
ಮೇ 1, ಕಾರ್ಮಿಕರ ದಿನಾಚರಣೆಯ ಅಂಗವಾಗಿ ರಾಜ್ಯಾಧ್ಯಕ್ಷರಾದ ಡಾ.ಹುಲಿಕಲ್ ನಟರಾಜ ಇವರ ಅಧ್ಯಕ್ಷತೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ, ಸೂಲಿಬೆಲೆಯಲ್ಲಿ ಕಾಯಕಯೋಗಿ-26 ಪ್ರಶಸ್ತಿ ಪಧಾನ ನಡೆಯಲಿದೆ.
ಕಾಯಕಯೋಗಿ ರಾಜ್ಯ ಪ್ರಶಸ್ತಿ ಪಡೆದಿರುವ ಮಹಾಬಲೇಶ್ವರ ಗಡೇದ ಅವರಿಗೆ ಹಸಿರು ತೋರಣ ಗೆಳೆಯರ ಬಳಗ, ಪತ್ರಕರ್ತರ ಸಂಘ, ಮಹಾಮನೆ ಬಳಗ, ಜೇಸಿ ಸಂಸ್ಥೆ, ಬಸವ ವಿದ್ಯಾಪ್ರಸಾರಕ ಸಂಸ್ಥೆಯ ಪ್ರಾರ್ಥನಾ ವಿದ್ಯಾಮಂದಿರ, ಅಂಚೆ ನೌಕರರು ಅಭಿನಂದನೆ ಸಲ್ಲಿಸಿದ್ದಾರೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 