ವಿವಿಧ ಬೇಡಿಕೆ ಈಡೇರಿಕೆಗೆ ಜಿ.ಪಿ.ಟಿ. ಶಿಕ್ಷಕರ ಮನವಿ
GPT for fulfilling various demands. Teacher's Appeal
ವಿವಿಧ ಬೇಡಿಕೆ ಈಡೇರಿಕೆಗೆ ಜಿ.ಪಿ.ಟಿ. ಶಿಕ್ಷಕರ ಮನವಿ
ಹೂವಿನ ಹಡಗಲಿ 19: ನೂತನವಾಗಿ ನೇಮಕ ಹೊಂದಿರುವ ತಾಲೂಕಿನ ಜಿ ಪಿ ಟಿ ಶಿಕ್ಷಕರ ವೇತನ ಬಾಕಿ ಮತ್ತು ವಾರ್ಷಿಕ ವೇತನ ಬಡ್ತಿ ವಿಚಾರವಾಗಿ ಸಂಘದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಬಾಕಿ ಇರುವ ವೇತನ,ವಾರ್ಷಿಕ ಬಡ್ತಿ ಮಂಜೂರಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸಲು ಅಧ್ಯಕ್ಷ ಯಂಕಾನಾಯ್ಕ್ ನೇತೃತ್ವದಲ್ಲಿ ಮನವಿ ಪತ್ರವನ್ನು ಕಚೇರಿ ಅಧೀಕ್ಷಕರಾದ ಮಂಜುನಾಥ ಗೌಡರಿಗೆ ಸಲ್ಲಿಸಿದರು.
ಅಧೀಕ್ಷಕರಾದ ಮಂಜುನಾಥ ಗೌಡರು ಸಕಾರಾತ್ಮಕವಾಗಿ ಸ್ಪಂದಿಸಿ ಆದಷ್ಟು ಬೇಗ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯು ಆನಂದ್ ಕಾರ್ಯದರ್ಶಿ ವಿ ಹೆಚ್ ಯೇಸು ಸರ್ಕಾರಿ ನೌಕರರ ಸಂಘದ ನೂತನ ನಿರ್ದೇಶಕರಾದ ಮಾದೇಶ್ವರ ಕೆ, ಇ ಸಿ ಒ ಮಿಟ್ಯಾನಾಯ್ಕ್ಜಿ ಪಿ ಟಿ ಶಿಕ್ಷಕರ ಸಂಘದ ಕಾರ್ಯದರ್ಶಿ ಜಿ ತಿರುಕನಗೌಡ, ಪದಾಧಿಕಾರಿಗಳಾದ ಯು ಸಿ ಚನ್ನವೀರ್ಪ, ಟಿ ಕೆ ಪುಷ್ಪಾ,ಬೆಟ್ಟನಗೌಡ, ಯಶೋಧರ,ಮಹಮದ್ ಆಸಿಫ್, ಚಂದ್ರಶೇಖರ ಎ, ಕೊಟ್ರೇಶ್ ಎನ್, ಪೂಜಾ, ಉಮೇಶ, ಮಹಾಂತೇಶ, ಫಕ್ಕೀರ್ಪ, ಬಸವರಾಜ, ನಾಗಪ್ಪ, ವಿದ್ಯಾಶ್ರೀ, ಶ್ರೀಧರ್, ಮಠದ ವೀರೇಶ್, ಹಾಲಪ್ಪ , ಮಂಜುಶ್ರೀ ಇತರರು ಭಾಗವಹಿಸಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 