ರಾಜ್ಯ ಮಟ್ಟದ ಇಂಜಿನಿಯರಿಂಗ್ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಜಿಐಟಿ ಸಾಧನೆ
ಬೆಳಗಾವಿ, 31: ಕನರ್ಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್ಸಿಎಸ್ಟಿ) ಪ್ರಾಯೋಜಿತ 42 ನೇ ರಾಜ್ಯ ಮಟ್ಟದ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಬೆಳಗಾವಿಯ ಕೆ ಎಲ್ ಎಸ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ (ಜಿಐಟಿ) ಜನರಲ್ ಚಾಂಪಿಯನಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಕೊಂಡಿದೆ. ಇತ್ತೀಚಿಗೆ ಬೆಳಗಾವಿಯ ಕೆಎಲ್ಇ ಇಂಜಿನಿಯರಿಂಗ್ ಕಾಲೇಜನಲ್ಲಿ ಹಮ್ಮಿಕೊಂಡಿದ್ದ ಈ ಸ್ಪಧರ್ೆಯಲ್ಲಿ ಜಿ ಐ ಟಿ ಈ ಸಾಧನೆ ಮಾಡಿದೆ. ಜಿ ಐ ಟಿಯ ವಿವಿಧ ವಿಭಾಗಗಳಿಂದ ಒಟ್ಟು 17 ಪ್ರಾಜೆಕ್ಟ್ ಗಳು ಪ್ರಾಯೋಜಕತ್ವಕ್ಕಾಗಿ ಆಯ್ಕೆ ಮಾಡಲಾಗಿದ್ದು, ಅದರಲ್ಲಿ 11 ರಾಜ್ಯಮಟ್ಟದ ಪ್ರದರ್ಶನಕ್ಕೆ ಆಯ್ಕೆಯಾಗಿದ್ದವು.
ಅಕ್ಷಯ್ಕುಮಾರ್ ಪಿ, ಹರೀಶ್ ಬಿ, ಅಕ್ಷಯ ಪಿ ಮತ್ತು ಗಿರೀಶ್ ಪಿ ವಿದ್ಯಾರ್ಥಿ ಗಳನ್ನ ಒಳಗೊಂಡ ಪ್ರಾಜೆಕ್ಟ್ ತಂಡ ಪ್ರಸ್ತುತ ಪಡಿಸಿದ "ಆನ್ ಎಕ್ಸ್ಪೆರಿಮೆಂಟಲ್ ಇನ್ವೆಸ್ಟಿಗೇಷನ್ ಆನ್ ಎಫೆಕ್ಟ್ ಆಫ್ ಯೂಸಿಂಗ್ ನಿಯರ್ ಡ್ರೈ ಮಸಿನಿಂಗ್ ಫಾರ್ ವಟರ್ಿಕಲ್ ಮಸಿನಿಂಗ್ ಸೆಂಟರ್ " ಪ್ರಾಜೆಕ್ಟ್ ಗೆ ವರ್ಷದ ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿ" ಅನ್ನು ಗೆದ್ದಿತು ಪ್ರೊ. ಹಷರ್ಿತ್ ಕುಲಕಣರ್ಿ ವಿದ್ಯಾಥರ್ಿಗಳಿಗೆ ಮಾರ್ಗದರ್ಶನ ನೀಡಿದ್ದರು.
ಸಂಕೇತ್ ಎಸ್, ಸಾಕ್ಷಿ ಕೆ, ಶ್ರವಣಕುಮಾರ್ ಕೆ ಮತ್ತು ಆದಶರ್್ ಪಾಟೀಲ್ ವಿದ್ಯಾಥರ್ಿಗಳನ್ನ ಒಳಗೊಂಡ ಮತ್ತೊಂದು ಪ್ರಾಜೆಕ್ಟ್ ತಂಡವು "ಎಕ್ಸಾಸ್ಟ್ ಹೀಟ್ನಿಂದ ಥಮರ್ೊಎಲೆಕ್ಟ್ರಿಕ್ ಪವರ್ ಜನರೇಷನ್ ಪ್ರಾಜೆಕ್ಟ್ ಗಾಗಿ "ವರ್ಷದ ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿ" ಯನ್ನು ಬಾಚಿಗೊಂಡಿತು. ಡಾ. ಸಚಿನ್ ಕುಲಕಣರ್ಿ ವಿದ್ಯಾಥರ್ಿಗಳಿಗೆ ಮಾರ್ಗದರ್ಶನ ನೀಡಿದ್ದರು.
ಈ ಪ್ರದರ್ಶನದಲ್ಲಿ ಸುಮಾರು 160 ಕ್ಕಿಂತ ಹೆಚ್ಚಿನ ಇಂಜಿನಿಯರಿಂಗ್ ಕಾಲೇಜಿನಿಂದ 1200 ವಿದ್ಯಾಥರ್ಿಗಳನ್ನ ಒಳಗೊಂಡ 400 ಕ್ಕಿಂತ ಹೆಚ್ಚು ಪ್ರಾಜೆಕ್ಟ್ ತಂಡಗಳು ಭಾಗವಹಿಸಿದ್ದವು.
ಕೆಎಲ್ಎಸ ಕಾರ್ಯಧ್ಯಕ್ಷ ಎಂ. ಆರ್. ಕುಲಕಣರ್ಿ, ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಯು. ಏನ್. ಕಾಲಕುಂದ್ರಿಕರ್, ಪ್ರಾಚಾರ್ಯ ಪ್ರೊ. ಡಿ. ಎ. ಕುಲಕಣರ್ಿ ಮತ್ತು ಸಿಬ್ಬಂದಿ ವರ್ಗ ಹಾಗೂ ವಿದ್ಯಾಥರ್ಿಗಳು ಸಾಧಕರನ್ನು ಅಭಿನಂದಿಸಿದ್ದಾರೆ.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 