ಲೋಕದರ್ಶನ ವರದಿ
ಹಾವೇರಿ, 23: ದಿವಂಗತ ಮಾಜಿ ಪ್ರಧಾನಿ ರಾಜೀವ ಗಾಂಧೀಯವರ ಜನ್ಮ ದಿನ ಮತ್ತು ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸ ಅವರ ಜನ್ಮ ದಿನದ ನಿಮಿತ್ತ್ಯವಾಗಿ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ದಿ. ಭಾರತ ಸ್ಕೌಟ್ಸ ಮತ್ತು ಗೈಡ್ಸನ, ರೋವರ್ ಮತ್ತು ರೇಂಜರ್ ಘಟಕ ಮತ್ತು ದಿ. ಭಾರತ ಸ್ಕೌಟ್ಸ ಮತ್ತು ಗೈಡ್ಸ ಜಿಲ್ಲಾ ಸಂಸ್ಥೆ ಹಾವೇರಿ ಇವರ ಸಂಯುಕ್ತ ಆಶ್ರಯದಲ್ಲಿ ದಿ 21ರಂದು ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಸಭಾ ಭವನದಲ್ಲಿ ಸದ್ಭಾವನಾ ದಿನಾಚರಣೆಯನ್ನು ಆಚರಿಸಲಾಗಿತ್ತು.
ಕಾರ್ಯಕ್ರಮದ ಮೊದಲಿಗೆ ಅಗಲಿದ ಮಾಜಿ ಪ್ರಧಾನಿ ಭಾರತರತ್ನ ಅಟಲ ಬಿಹಾರಿ ವಾಜಪೇಯಿ ಅವರಿಗೆ ಮೌನಾಚರಣೆಯ ಮೂಲಕ ಶ್ರದ್ದಾಂಜಲಿ ಅಪರ್ಿಸಲಾಯಿತು. ಭಾರತ ಸ್ಕೌಟ್ಸ ಮತ್ತು ಗೈಡ್ಸನ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀಮತಿ. ಮಾಧುರಿ ದೇವಧರ ಅವರು ಮಾತನಾಡಿ ಮಕ್ಕಳಲ್ಲಿ ಶಿಸ್ತು ಸಾಮಾಜಿಕ ಕಳಕಳಿ ಪರಿಸರ ಪ್ರಜ್ಞೆ, ನೈತಿಕ ಪ್ರಜ್ಞೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.
ಹಾವೇರಿ ಜಿಲ್ಲಾ ಭಾರತ ಸ್ಕೌಟ್ಸ ಮತ್ತು ಗೈಡ್ಸನ ಕಾರ್ಯದಶರ್ಿಗಳಾದ ಶ್ರೀ. ಕಾಶಪ್ಪನವರ ಅವರು ಮಾತನಾಡಿ ನಾಗರೀಕ ಸೌಲಭ್ಯಗಳಿಂದ ನಾಗರೀಕರಾಗುವುದಿಲ್ಲ. ನಮ್ಮ ನಡುವಳಿಕೆಯಿಂದ ಮಾತ್ರ ನಾಗರೀಕರೆನಿಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಹಾವೇರಿ ಜಿಲ್ಲಾ ಭಾರತ ಸ್ಕೌಟ್ಸ ಮತ್ತು ಗೈಡ್ಸನ ಸಂಘಟಕರಾದ ಶ್ರೀ. ಶೇಖ ಸುರಣಗಿ ಅವರು ವಿದ್ಯಾಥರ್ಿಗಳಿಗೆ ಸದ್ಭಾವನಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಜಿ.ಎಮ್. ಯಣ್ಣಿಯವರು ವಹಿಸಿದ್ದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ರೋವರ್ಸ ಮತ್ತು ರೇಂಜರ್ಸಗಳಿಗೆ ಸೇವಾ ಶಿಬಿರಗಳಲ್ಲಿ ಅತ್ತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಹಾವೇರಿ ಶಹರದ ಕೆ.ಎಲ್.ಇ. ಆಂಗ್ಲ ಮಾಧ್ಯಮ ಶಾಲೆ, ಲಯನ್ಸ ಸ್ಕೂಲ್, ಜೆ.ಪಿ.ರೋಟರಿ ಶಾಲೆ, ಮತ್ತು ಇಜಾರಿ ಲಕಮಾಪುರದ ಶಾಲೆಯ ಸ್ಕೌಟ್ಸ ಮತ್ತು ಗೈಡ್ಡ ವಿದ್ಯಾಥರ್ಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಜಿ.ಎಚ್.ಮಹಾವಿದ್ಯಾಲಯದ ರೇಂಜರ ಅಧಿಕಾರಿ ಡಾ.ಎಮ್.ಪಿ.ಕಣವಿ ಸ್ವಾಗತಿಸಿದರು ಮತ್ತು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಪ್ರೊ.ಕೆ.ಎಚ್.ಬ್ಯಾಡಗಿ ರೇಂಜರ್ ಅಧಿಕಾರಿಗಳು ವಂದಿಸಿದರು.
ಇದೇ ಸಂದರ್ಭದಲ್ಲಿ ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಯಲ್ಲಿ ಸುರಿದ ಭೀಕರ ಮಳೆಯಿಂದಾಗಿ ಜಲಪ್ರವಾಹಕ್ಕೆ ಸಿಲುಕಿ ಆಸ್ತಿ, ಪಾಸ್ತಿ ಮತ್ತು ಪ್ರಾಣ ಹಾನಿಗೆ ಒಳಗಾದ ಜನರ ಸಹಾಯಕ್ಕಾಗಿ ಕಾಲೇಜು ವಿದ್ಯಾಥರ್ಿಗಳು ಮತ್ತು ಸಿಬ್ಬಂದಿಗಳಿಂದ ಸುಮಾರು 10,000/- ರೂ.ಗಳ ಪರಿಹಾರ ಸಂಗ್ರಹಿಸಿ ರಾಜ್ಯ ಸಂಸ್ಥೆಗೆ ಡಿ.ಡಿ. ಮುಖಾಂತರ ಜಮಾ ಮಾಡಲಾಗುವುದು.