ಕೃಷಿಮೇಳಕ್ಕೆ ಸಕಲ ಸಿದ್ಧತೆ: ಪೊಲೀಸ್ ಅಧಿಕಾರಿಗಳ ಸಭೆ

ಕೃಷಿಮೇಳಕ್ಕೆ ಸಕಲ ಸಿದ್ಧತೆ: ಪೊಲೀಸ್ ಅಧಿಕಾರಿಗಳ ಸಭೆ  Full preparations for the agricultural fair: Meeting of police officials

ಲೋಕದರ್ಶನ ವರದಿ 

ಧಾರವಾಡ 9: ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಆವರಣದಲ್ಲಿ ಸೆ. 25ರಿಂದ 28ರವರೆಗೆ ನಡೆಯಲಿರುವ ಕೃಷಿಮೇಳ-2026ರ ಪೂರ್ವಸಿದ್ಧತೆ ಕುರಿತು ಕುಲಪತಿ ಡಾ. ಎನ್‌.ಬಿ. ಪ್ರಕಾಶ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.  

ಸಭೆಯಲ್ಲಿ ಕೃಷಿಮೇಳದ ಉದ್ಘಾಟನೆ, ಸಂಚಾರ ವ್ಯವಸ್ಥೆ, ವಾಹನ ನಿಲುಗಡೆ, ಜನದಟ್ಟಣೆ ನಿಯಂತ್ರಣ ಹಾಗೂ ಸಾರ್ವಜನಿಕರ ಸುರಕ್ಷತೆ ಕುರಿತು ಚರ್ಚಿಸಲಾಯಿತು. ಲಕ್ಷಾಂತರ ರೈತರು ಮತ್ತು ಸಾರ್ವಜನಿಕರು ಆಗಮಿಸುವ ನೀರೀಕ್ಷೆಯ ಹಿನ್ನೆಲೆಯಲ್ಲಿ ಸೂಕ್ತ ಮಾರ್ಗಸೂಚಿ ಹಾಗೂ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸುವಂತೆ ಪೊಲೀಸ್ ಅಧಿಕಾರಿಗಳು ತಿಳಿಸಿದರು.  

ಜನದಟ್ಟಣೆ ನಿಯಂತ್ರಣಕ್ಕಾಗಿ ಅಗತ್ಯ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಕೆ, ಹೆಚ್ಚುವರಿ ವಾಹನ ನಿಲುಗಡೆ ವ್ಯವಸ್ಥೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಾಟ್ಸ್‌ಆ್ಯಪ್ ಗುಂಪು ರಚಿಸಿ ಸಮನ್ವಯದಿಂದ ಕಾರ್ಯನಿರ್ವಹಿಸಲು ನಿರ್ಧರಿಸಲಾಯಿತು.  

ಕೃಷಿಮೇಳದ ಅವಧಿಯಲ್ಲಿ ತಾತ್ಕಾಲಿಕ ಮೊಬೈಲ್ ಟವರ್ ಸ್ಥಾಪಿಸುವಂತೆ ಕೃಷಿ ಸಮಾಜದ ಅಧ್ಯಕ್ಷರು ಮನವಿ ಮಾಡಿದರು. ಸಭೆಯಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಆಕಾಶವಾಣಿ ಧಾರವಾಡ ಕೇಂದ್ರದ ಪ್ರತಿನಿಧಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿ ಸಲಹೆ-ಸೂಚನೆ ನೀಡಿದರು.