ರಮಜಾನ ಹಬ್ಬದ ಉಪವಾಸವನ್ನು ಬಿಡುವ ಮುಸ್ಲಿಂ ಭಾಂದವರಿಗೆ ಹಣ್ಣು ಹಂಪಲ ಹಂಚಿದ. ವಿವಿಧ ಪತ್ರಕರ್ತರ ಸಂಘಟನೆಯವರು
Fruit platters were distributed to Muslim brothers and sisters breaking the fast of the festival of
ಲೋಕದರ್ಶನ ವರದಿ
ಜಮಖಂಡಿ 16 : ನಗರದ ದೇಸಾಯಿ ಸರ್ಕಲ್ ಬಳಿ ಇರುವ ಜೋಗಿಮಡ್ಡಿ ಮಸೀದಿಯಲ್ಲಿ ರಮಜಾನ ಹಬ್ಬದ ಉಪವಾಸನೆಯನ್ನು ಬಿಡುವ ಮುಸ್ಲಿಂ ಭಾಂದವರಿಗೆ ಹಣ್ಣು ಹಂಪಲ, ಸಿಹಿ ಪದಾರ್ಥ, ತಂಪಾದ ಪಾನೀಯವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ವಿವಿಧ ಪತ್ರಕರ್ತರ ಸಂಘಟನೆಯವರು ಹಂಚಿದರು.
ಪವಿತ್ರವಾದ ರಮಜಾನ ಹಬ್ಬದ ಅಂಗವಾಗಿ ಮುಸ್ಲಿಂ ಸಮಾಜದ ಭಾಂದವರು ತಿಂಗಳ ಕಾಲ ಉಪವಾಸ ಮಾಡುತ್ತಾರೆ. ಸಾಯಂಕಾಲ ಪ್ರತಿಯೊಬ್ಬರು ಉಪವಾಸ ಬಿಡುತ್ತಾರೆ. ಜೋಗಿಮಡ್ಡಿ ಮಸೀದಿಯಲ್ಲಿ ಉಪವಾಸ ಬಿಡುವ ಎಲ್ಲ ಮುಸ್ಲಿಂ ಸಮಾಜ ಭಾಂದವರಿಗೆ ಹಣ್ಣು ಹಂಪಲ, ಸಿಹಿ ಪದಾರ್ಥ, ತಂಪಾದ ಪಾನೀಯವನ್ನು ಹಂಚಲಾಯಿತು.
ಕಾನಿಪ ಧ್ವನಿ ಸಂಘಟನೆಯ ತಾಲೂಕಾಧ್ಯಕ್ಷ ಕಿರಣ ಪವಾರ ಅವರ ನೇತೃತ್ವದಲ್ಲಿ ಉಪಾಧ್ಯಕ್ಷರಾದ ಗಜಾನಂದ ಕಾಂಬಳೆ, ರವಿ ಶಿಂಗೆ, ರಾಜ್ಯ ಸಮಿತಿ ಸದಸ್ಯ ಚಂದ್ರಶೇಖರ ಬಂಡಿವಡ್ಡರ ಹಾಗೂ ಕಾನಿಪ ರಕ್ಷಣಾ ಸಂಘದ ರಾಜ್ಯಾಧ್ಯಕ್ಷ ರವಿ ದೊಡಮನಿ, ಸದಸ್ಯ ಸಿದ್ದಲಿಂಗ ಕಾಂಬಳೆ, ಹಿರಿಯ ಪತ್ರಕರ್ತರಾದ ಶಶಿಕಾಂತ ತೇರದಾಳ ಮತ್ತು ಡಿ.ಬಿ.ಕೆ.ಎಸ್. ಸಂಘಟನೆ ಅಧ್ಯಕ್ಷ ಸುಭಾಸ ರಬಕವಿ, ಜಾನಪದ ಗಾಯಕ ಪ್ರಶಾಂತ ಕಲರ್ಬುಗಿ, ಪತ್ರಕರ್ತರ ಅಮೀರ ಅತ್ತಾರ ಸೇರಿದಂತೆ ಅನೇಕರು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 