ಮಾಜಿ ಸಚಿವ ಎ.ಬಿ. ಪಾಟೀಲ ಹುಟ್ಟುಹಬ್ಬದ ನಿಮಿತ್ಯ ಹಣ್ಣು ಹಂಪಲ ವಿತರಣೆ
Fruit and vegetable distribution on the occasion of the birthday of former minister A.B. Patil
ಯಮಕನಮರಡಿ, 12 ; ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮಿನ ವಿಶೇಷ ಬುದ್ಧಿಮಾಂದ್ಯ ವಿಕಲಚೇತನ ಶಾಲೆಯಲ್ಲಿ ಮಾಜಿ ಸಚಿವರಾದ ಎ.ಬಿ.ಪಾಟೀಲ ಇವರ 73ನೇ ಜನ್ಮ ದಿನಾಚರಣೆಯ ಅಂಗವಾಗಿ ಹಿಡಕಲ್ ಡ್ಯಾಮಿನ ಗೆಳೆಯರ ಬಳಗ ಹಾಗೂ ಎಬಿ ಪಾಟೀಲ್ ಅಭಿಮಾನಿ ಬಳಗದ ವತಿಯಿಂದ ಸಿಹಿ ವಿತರಣೆ ಹಾಗೂ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಯುವಧುರೀಣರು ಹಾಗೂ ಸಮಾಜ ಸೇವಕರಾದ ರಾಜು ಗಲಾಟೆ, ಪ್ರಮೋದ ಚೌಗಲಾ, ರಾಜು ಮುಲ್ತಾನಿ, ಮಹೇಶ ಹಂಜಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾರುತಿ ಹೊಸಮನಿ, ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ ಪವಾರ, ಸದಾನಂದ ಮಾಳ್ಯಾಗೋಳ, ಶಿವಲಿಂಗ ನೇಸರ್ಗಿ, ಮಹೇಶ ಹಂಜಿ, ಶಾಮಲಾ ಹೊಸಮನಿ, ಗುರುಸಿದ್ಧ ಮೂಡಲಗಿ, ಅಲ್ಬರ್ಟ್ ಬ್ರುಟ್ಟೋ, ರಮೇಶ ಹುರುಳಿ, ನಿಸಾರ್ ಶೇಖ್, ಸಂಜು ಕಿಣಗಿ, ಅರ್ಜುನ ನೇಸರಗಿ, ದೀಪಾ ಪತ್ತಾರ, ಎ.ಎಮ್.ಇನಾಂದಾರ, ಹಿಡಕಲ್ ಡ್ಯಾಮ್, ಹೊಸಪೇಟೆ, ಹಟ್ಟಿ ಆಲೂರ ಮುಂತಾದ ಗ್ರಾಮಗಳ ಕಾರ್ಯಕರ್ತರು, ಹಾಗೂ ಬುದ್ಧಿಮಾಂದ್ಯ ವಿಶೇಷ ವಿಕಲಚೇತನ ಮಕ್ಕಳ ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಹಿಡಕಲ್ ಡ್ಯಾಮಿನ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕ ಎ.ವೈ.ಸೋನ್ಯಾಗೋಳ ಕಾರ್ಯಕ್ರಮ ನಿರೂಪಿಸಿದರು.
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ 