ಇಂದಿನಿಂದ ಇತಿಹಾಸ ಪ್ರಸಿದ್ಧ ಲಕ್ಷ್ಮೇಶ್ವರ ಪಟ್ಟಣದ ದೂದಪೀರಾಂ ಮಹಾತ್ಮರ ಗಂಧ ದ ಉರುಸ್ ವಾಜ ಬಯಾನ
From today, the historical town of Lakshmeshwar, Doodapiram Mahatma's Gandha Urus Vaja Bayana will b
ಲಕ್ಷೇಶ್ವರ 31: ಪಟ್ಟಣದ ಇತಿಹಾಸ ಪ್ರಸಿದ್ಧ ಸಂತ ದೂದಪೀರಾಂ ಮಹಾತ್ಮರ 137ನೇ ಉರುಸ್ ಮಾರ್ಚ್ 31ರಿಂದ ಏ.5ರವರೆಗೆ ಜರುಗಲಿದೆ ಎಂದು ದರ್ಗಾ ಸಮಿತಿ ಕಾರ್ಯದರ್ಶಿ ಸಾಯಿಬ್ಜಾನ್ ಹವಾಲ್ದಾರ ತಿಳಿಸಿದರು.ದರ್ಗಾ ಆಡಳಿತ ಕಚೇರಿಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ’ಪ್ರ-ತಿವರ್ಷದಂತೆ ಈ ವರ್ಷ ದೂದಪೀರಾಂ ಮಹಾತ್ಮರ ಉರುಸ್ ವಿಜೃಂಭಣೆಯಿಂದ ನಡೆಯಲಿದ್ದು, ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮಾರ್ಚ್ 31ರಂದು ಸಂದಲ್ ಗಂಧ ನಡೆಯಲಿದ್ದು ಅಂದು ಸರ್ಕಾರಿ ಆಸ್ಪತ್ರೆ ಪಕ್ಕದಲ್ಲಿನ ಖಾದರ್ಬಾಷಾ ದರ್ಗಾದಿಂದ ಮೆರವಣಿಗೆ ಮೂಲಕ ಗಂಧ ತರಲಾಗುವುದು’ ಎಂದರು.’ಏ.1ರಂದು ಗಲೀಫ ದೂದಪೀರಾಂ ಮಹಾತ್ಮರ ಉರುಸ್ ತಾಜ್ಮಹಲ್ ಮೆರವಣಿಗೆ ನಡೆಯಲಿದು ಸವಣೂರಿನ ರಬ್ಬಾನಿ ಮತ್ತು ಬೆಳಗಾವಿ ಬ್ಯಾಂಡ್ ಕಂಪನಿ ವತಿಯಿಂದ ದೂದ ಪೀರಾ ಮಹಾತ್ಮರ ಸಂದೇಶ ಸಾರುವ ಭಾವಗೀತೆ ಮನರಂಜನಾ ಕಾರ್ಯಕ್ರಮ ನಡೆಯುವವು.’ಏ.5ರಂದು ಖವಾಲಿ ಮುಂಬಯಿ ಇಪ್ತೆಕಾರಿ ಬ್ರದರ್ಸ್ ಸೂಪಿ ಮುಜಿಭಾ ಅಜೀಜಿ ನಾಜಾ ಅವರಿಂದ ನಡೆಯುವುದು ಏ.4ರಂದು ವಾಜ ಬಯಾನ್ ಜರುಗಲಿದ್ದು ರಾತ್ರಿ 9ಕ್ಕೆ ಹಾಶೀಮಿಯಾ ಆಶ್ರಫಿ ಮತ್ತು ಮುಯೀಜ್ ಆಶ್ರಫ್ ಆಶ್ರಫಿ ಅವರಿಂದ ಧಾರ್ಮಿಕ ಕಾರ್ಯಕ್ರಮ ನೆರವೇರುವುದು’ ಎಂದು ತಿಳಿಸಿದರು.
ಇಪೈಕಾರಿ ಬ್ರದರ್ಸ್ ಮತ್ತು ಸೂಫಿ ಮುಜ್ವಭಾ ಅಜೀಜ್ ನಾಜಾ ಅವರು ನಡೆಸಿಕೊಡಲಿದ್ದಾರೆ. ಈ ವರ್ಷ ಶಾಲೆಗಳಿಗೆ ರಜೆ ಇರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನೀರೀಕ್ಷೆ ಇದೆ’ ಎಂದು ಹೇಳಿದರು. ಸಚಿವ ಎಚ್.ಕೆ. ಪಾಟೀಲ, ಜಮೀರ್ ಅಹಮ್ಮದ್, ಶ್ರೀನಿವಾಸ ಮಾನೆ, ಜಿ.ಎಸ್.ಪಾಟೀಲ ಸೇರಿದಂತೆ ಮಾಜಿ ಶಾಸಕರು ಪಾಲ್ಗೊಳ್ಳುವರು’ ಎಂದರು.’ಹೆಚ್ಚಿನ ಜನ ಆಗಮಿಸುವಹಿನ್ನೆಲೆಯಲ್ಲಿ ಆರೋಗ್ಯ, ಸ್ವಚ್ಛತೆ, ಕುಡಿಯುವ ನೀರು, ಅನ್ನದಾಸೋಹ ನಡೆಯುವುದು ದಾದಾಪೀರ್ ಮುಚ್ಚಾಲೆ ಮಾತನಾಡಿ ’ಈ ವರ್ಷ ಹೆಚ್ಚು ಬಿಸಿಲು ಇರುವ ಕಾರಣ ಪೆಂಡಾಲ್ ಹಾಗೂ ವಾಹನದಟ್ಟಣೆ ಆಗದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.ದರ್ಗಾ ಸಮಿತಿ ಅಧ್ಯಕ್ಷ ಸುಲೇಮಾನ್ಸಾಬ್ ಕಣಕೆ, ಉಪಾಧ್ಯಕ್ಷ ಇರ್ಫಾನ್ ಬೇಗಮ್ ಮಿರ್ಜಾ ದಾದಾಪೀರ್ ಕಾರಡಗಿ, ನೂರ ಹಮ್ಮದ ಸಿದ್ದಿ, ಕಲಂದರ್ ಸೂರಣಗಿ, ಪಹಿಮುಲ್ಲಾ ಪಲ್ಲಿ ಮಹಮ್ಮದ್ರಫೀಕ್ ಸಿದ್ದಾಪುರ, ಅಕ್ಬರ್ ಸಾಬ್ ಸೂರಣಗಿ, ಮಾಬುಸಾಬ್ ಮುಳಗುಂದ ಇದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 