ನಶೆಯಿಂದ ಜಾಗೃತಿಯವರೆಗೆ ಮಾದಕ ದ್ರವ್ಯ ಮುಕ್ತ ಭಾರತಕ್ಕಾಗಿ ನಮ್ಮ ಸಂಕಲ್ಪ: ಶ್ರೀಶೈಲ್ ಜಿ.ಹುಲಗೇರಿ

ನಶೆಯಿಂದ ಜಾಗೃತಿಯವರೆಗೆ ಮಾದಕ ದ್ರವ್ಯ ಮುಕ್ತ ಭಾರತಕ್ಕಾಗಿ ನಮ್ಮ ಸಂಕಲ್ಪ: ಶ್ರೀಶೈಲ್ ಜಿ.ಹುಲಗೇರಿ  From addiction to awareness, our resolve for a drug-free India: Srishail G. Hulageri

ಬೆಳಗಾವಿ 18: ಸಮಾಜದಲ್ಲಿ ಇಂದು ಮಾದಕ ವಸ್ತುಗಳ ದುರುಪಯೋಗವು ಗಮನಾರ್ಹ ಸಮಸ್ಯೆಯಾಗಿದೆ. ಇತ್ತಿಚಿನ ದಿನಗಳಲ್ಲಿ ಹೆಚ್ಚಾಗಿ ಯುವ ಪೀಳಿಗೆಗಳು ಇದಕ್ಕೆ ತುತ್ತಾಗುತ್ತಿದ್ದು ಇದನ್ನು ತಡೆಗಟ್ಟುವಂತಹ   ಜಾಗೃತಿ ಚಟುವಟಿಕೆಗಳನ್ನು ಶಿಕ್ಷಣ ಸಂಸ್ಥೆಗಳು ಅಳವಡಿಸಿಕೊಳ್ಳುವುದು ಅವಶ್ಯಕ.ಇದರ ಕುರಿತಾಗಿ ತಮ್ಮ ಸುತ್ತ-ಮುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಮಾದಕ ವಸ್ತುಗಳ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಕಾಲೇಜು ಆಡಳಿತ ಮಂಡಳಿ ಜೊತೆಗೆ ವಿದ್ಯಾರ್ಥಿಗಳು ಪೋಲಿಸರಿಗೆ ಮಾಹಿತಿ ನೀಡುವುದರ ಮೂಲಕ ಸಹಕರಿಸಬೇಕು ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಗಾವಿ ಜಿಲ್ಲೆಯ ಮಾಳಮಾರುತಿ ಪೊಲೀಸ್  ಠಾಣೆಯ ಪೊಲೀಸ್ ಉಪನೀರೀಕ್ಷಕರಾದ ಶ್ರೀಶೈಲ್ ಜಿ.ಹುಲಗೇರಿ ಹೇಳಿದರು. 

ಅವರು ಎಸ್‌.ಜಿ.ಬಿ.ಐ.ಟಿ ಯ ಕಾಯಕ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾದ “ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮ”ದಲ್ಲಿ ಮಾತನಾಡಿ “ನಶೆಯಿಂದ ಜಾಗೃತಿಯವರೆಗೆ ಮಾದಕ  ದ್ರವ್ಯ ಮುಕ್ತ ಭಾರತಕ್ಕಾಗಿ ನಮ್ಮ ಸಂಕಲ್ಪ”ಘೋಷಣೆಯೊಂದಿಗೆ ವಿದ್ಯಾರ್ಥಿಗಳನ್ನು ಜಾಗೃತಗೊಳಿಸಿದರು ಹಾಗೂ  ಮಾದಕ ವಸ್ತುಗಳ ಜಾಲಗಳನ್ನು ಪತ್ತೆಹಚ್ಚಲು ಸಹಾಯ ಮಾಡುವ ವಿದ್ಯಾರ್ಥಿಗಳು  ಅಥವಾ ಕಾಲೇಜುಗಳ ಗುರುತನ್ನು ಕಟ್ಟುನಿಟ್ಟಾಗಿ ಗೌಪ್ಯವಾಗಿಡಲಾಗುವುದು ಎಂದು ಭರವಸೆ ನೀಡಿದರು.   

ಕಾರ್ಯಕ್ರಮದಲ್ಲಿ ಕಾಲೇಜಿನ. ಪ್ರಾಚಾರ್ಯರಾದ  ಡಾ. ಬಿ.ಆರ್‌.ಪಟಗುಂದಿ ಸ್ವಾಗತ ನುಡಿಗಳನ್ನಾಡುವುದರ ಮೂಲಕ ಮಾದಕ ವಸ್ತುಗಳ ಹಾದಿಯಿಂದ ಯುವ ಮನಸ್ಸುಗಳನ್ನು ದೂರವಿಡುವಂತೆ ಈ ಪಿಡುಗಿನ ವಿರುದ್ಧ ಹೋರಾಡಲು ವಿದ್ಯಾರ್ಥಿಗಗಳು ಶಿಕ್ಷಕರು ಹಾಗೂ ಪೊಲೀಸರು ಒಟ್ಟುಗೂಡಬೇಕು ಎಂದು ಹೇಳಿದರು. ಕಾರ್ಯಕ್ರಮಕ್ಕೆ ಮಹಾವಿದ್ಯಾಲಯದ ಎಲ್ಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.ಡಾ. ರಾಜೇಂದ್ರ ಗಲಗಲಿ ವಂದಿಸಿದರು.