ಲೋಕದರ್ಶನ ವರದಿ
ರಾಮದುರ್ಗ, 16: ಮನಸ್ಸಿನ ಶಕ್ತಿ ದೇಹದ ಶಕ್ತಿಗಿಂತ ಬಲಿಷ್ಟ, ವಿದ್ಯೆ ಒಂದು ಶಕ್ತಿ ಅದು ಇದ್ದರೆ ಜಗತ್ತಿನಲ್ಲಿ ಎಲ್ಲವನ್ನು ಸಾಧಿಸಬಹುದು ಅದಕ್ಕೆ ಬಡವ ಶ್ರೀಮಂತ ಎನ್ನುವ ಬೇದಭಾವ ಇರಲಾರದು, ಕೇವಲ ಪದವಿಧರರಾಗದೇ ವಿದ್ಯಾವಂತರಾಗಬೇಕು ಆದರೆ ಇಂದು ಸಮಾಜದಲ್ಲಿ ಪದವಿಧರರ ಸಂಖ್ಯೆ ಹೆಚ್ಚಾಗುತ್ತಿದೆ ಸುಸಂಸ್ಕೃತ ವಿದ್ಯಾವಂತರು ಕಡಿಮೆಯಾಗುತ್ತಿದ್ದಾರೆ. ಮಕ್ಕಳ ಜೀವನವನ್ನು ರೂಪಿಸುವವರು ಶಿಕ್ಷಕರು ಮತ್ತು ಹೆತ್ತ ತಂದೆತಾಯಂದಿರು ಅವರಿಗೆ ಸದಾ ಗೌರವವನ್ನು ನೀಡಬೇಕು. ಹಿಂದೆ ಪುಸ್ತಕ, ಬಟ್ಟೆ, ವಿದ್ಯುತ್, ಮುಂತಾದ ಸೌಲಭ್ಯಗಳು ಇಲ್ಲದ ಕಾಲದಲ್ಲಿ ಹಲವಾರು ಮಹಾನ ವ್ಯಕ್ತಿಗಳು ಸಾಧನೆಯನ್ನು ಮಾಡಿದ್ದಾರೆ. ಈ ಶಾಲೆ ಸರ್ವ ಸೌಲಭ್ಯಗಳನ್ನು ಹೊಂದಿದ್ದರಿಂದ ವಿದ್ಯಾಥರ್ಿಗಳು ಸತತ ಪ್ರಯತ್ನ ಏಕಾಗ್ರತೆಯನ್ನು ರೂಢಿಸಿಕೊಂಡು ಕಾರ್ಯಪ್ರವೃತ್ತರಾದರೆ ಮಾತ್ರ ಭವಿಷ್ಯದಲ್ಲಿ ವಿಶೇಷ ಸಾಧನೆಗೈಯಲು ಸಾಧ್ಯ ವಿದ್ಯಾಥರ್ಿಗಳ ಸವರ್ಾಂಗೀನ ಪ್ರಗತಿಗೆ ಶಾರೀರಿಕ, ಮಾನಸಿಕ ಹಾಗೂ ನೈತಿಕ ಶಿಕ್ಷಣದ ಅವಶ್ಯಕತೆ ಇಂದಿನ ದಿನದಲ್ಲಿ ಬಹಳಾ ಮುಖ್ಯವಾಗಿದೆ. ಕ್ರೀಡಾ ಶಾಲೆಯು ಸರ್ವ ವಿಧದಲ್ಲೂ ಉತ್ತಮ ಸಂಪನ್ಮೂಲಗಳನ್ನು ಹೊಂದಿದ್ದು, ಬೇರೆ ಶಾಲೆಗಳಿಗೆ ಇದು ಮಾದರಿಯಾಗಿದೆ ಎಂದು ಬೆಳಗಾವಿಯ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ|| ಶಿವಾನಂದ. ಬಿ. ಹೊಸಮನಿ ಅವರು ಹೇಳಿದರು.
ಅವರು ತಾಲೂಕಿನ ಚಂದರಗಿಯ ಕ್ರೀಡಾ ವಸತಿ ಶಾಲೆಯಲ್ಲಿ ವಾಷರ್ಿಕ ಸ್ನೇಹ ಸಮ್ಮೇಳನ ಹಾಗೂ ಪಾಲಕರ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿ, ತಂದೆ ತಾಯಂದಿರು ತಮ್ಮ ಮಕ್ಕಳಿಗಾಗಿ ತಮ್ಮ ಸರ್ವಸ್ವವನ್ನು ಧಾರೆ ಎರೆಯುತ್ತಾರೆ ಆದರೆ ಅವರಿಗೆ ಉತ್ತಮ ಸಾಧನೆಯ ಮೂಲಕ ಕಾಣಿಕೆಯ ಋಣವನ್ನು ಮಕ್ಕಳಾದ ನೀವು ನೀಡಬೇಕು. ಸಮಾಜ ಎಲ್ಲವನ್ನು ಕೊಟ್ಟಿದೆ ಶ್ರೇಷ್ಠ ಸಾಧನೆಯ ಮೂಲಕ ಸಮಾಜಕ್ಕೆ ಮರಳಿ ಕೊಡುಗೆ ನೀಡಬೇಕು. ಗ್ರಾಮೀಣ ವಿದ್ಯಾಥರ್ಿಗಳಲ್ಲಿ ಕೀಳಿರಿಮೆ ಭಾವನೆ ಹೆಚ್ಚಾಗಿದ್ದು ಅದನ್ನು ತೊಡೆದು ಹಾಕಬೇಕು ಯಶಸ್ಸು ಪ್ರಯತ್ನಶೀಲರಿಗೆ ಮಾತ್ರ ದೊರೆಯುತ್ತದೆ. ಅಮೇರಿಕಾದ ದೊಡ್ಡ ಸಂಸ್ಢೆಗಳಲ್ಲಿ ದುಡಿಯುವ ಯುವಕರು ಭಾರತೀಯರೇ ಇದರ ಅರ್ಥ ಭಾರತದಲ್ಲಿ ಪ್ರತಿಭಾವಂತೆರಿಗೆ ಕೊರತೆ ಇಲ್ಲ ಎಂದು. ಜ್ಞಾನ ಆಯುಧ ಇದ್ದ ಹಾಗೆ ಅದನ್ನು ಸಮರ್ಥ ರೀತಿಯಲ್ಲಿ ಬಳಸದ್ದಿದರೆ ವ್ಯರ್ಥವಾಗುತ್ತದೆ. ಗುರಿ ಮತ್ತು ಉದ್ದೇಶ ಚನ್ನಾಗಿದ್ದರೆ ಯಶಸ್ಸು ದೊರೆಯುವದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಮ್ಮ ಆಶಯ ವ್ಯಕ್ತ ಪಡಿಸಿದರು.
ಕಾರ್ಯಕ್ರಮದ ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಹಾರೂಗೇರಿಯ ಕನ್ನಡ ಪ್ರಾಧ್ಯಾಪಕರಾದ ಡಾ. ವಿ. ಎಸ್. ಮಾಳಿ ಅವರು ಮಾತನಾಡಿ ಆಟದೊಂದಿಗೆ ಪಾಠ ಎಂಬ ಪರಿಕಲ್ಪನೆ ಮಕ್ಕಳಿಗೆ ಸಂತೋಷವನ್ನು ತರುತ್ತದೆ, ಮಕ್ಕಳು ಆಡಾಡ್ತ ಶಿಕ್ಷಣವನ್ನು ಕಲಿಯಬೇಕು, ಮಕ್ಕಳ ಮನದಲ್ಲಿ ಶಾಲೆಗಳು ಮೊದಲು ಶೆರೆಮನೆಯಂತೆ ಕಂಡರು ನಂತರ ಅದು ತಮ್ಮ ಭವಿಷ್ಯ ರೂಪಿಸುವ ದೇವಾಯಲ ಎಂಬ ಅರಿವು ಮೂಡುತ್ತದೆ. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ನೆನಪನ್ನು ಈ ಶಾಲೆ ತಮ್ಮ ಕಣ್ಣ ಮುಂದೆ ತರುತ್ತಿದೆ ಆ ಮಾದರಿಯಲ್ಲಿದೆ. ಇಲ್ಲಿ ಕಲಿತ ವಿದ್ಯಾಥರ್ಿಗಳು ಸಮಾಜಕ್ಕೆ ಶ್ರೇಷ್ಠ ಕೊಡುಗೆಯನ್ನು ನೀಡಿದಾಗ ಮಾತ್ರ ಶಾಲೆ ಕಟ್ಟಿದ ಮಹನೀಯರ ಕಾರ್ಯ ಸಾರ್ಥಕ ಎಂದರು. ಈ ಸಂಸ್ಥೆಯ ಸಂಸ್ಥಾಪಕರು ಶಿಸ್ತು ಸಮಯ ಪ್ರಜ್ಞೆ ಮತ್ತು ಸರಳ ಜೀವನವನ್ನು ಅಳವಡಿಸಿಕೊಂಡು ನಮ್ಮೆಲ್ಲರಿಗೆ ಮಾದರಿಯಾಗಿದ್ದಾರೆ, ಅವರಿಗೆ ಕನಾಟಕ ಸಕರ್ಾರ ಕೊಟ್ಟಿರುವ ಸಹಕಾರ ರತ್ನ ಪ್ರಶಸ್ತಿ ತನ್ನ ಮೌಲ್ಯವನ್ನು ಇವರಿಂದ ಹೆಚ್ಚಿಸಿಕೊಂಡಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಾಗಲಕೋಟ ಜಿಲ್ಲೆ ಬದಾಮಿ ತಾಲೂಕಿನ ಕೆರೂರಿನ ಚರಂತಿಮಠದ ಡಾ. ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ ವಿದ್ಯಾಥರ್ಿಗಳಲ್ಲಿ ಇರಬೇಕಾದ ಐದು ಶಕ್ತಿಗಳೆಂದರೆ ಉತ್ತಮ ಆರೋಗ್ಯ, ಮನಸ್ಸು, ಜ್ಞಾನ, ಸಂಸ್ಕಾರ, ಚಾರಿತ್ರ್ಯಗಳಾಗಿದ್ದು, ಇಂದ್ರಿಯಗಳಿಗೆ ಲಗಾಮು ಹಾಕಿ ಯಾರು ನಿಯಂತ್ರಿಸುತ್ತಾರೊ ಆ ವಿದ್ಯಾಥರ್ಿಗಳು ಮಹಾನ ಸಾಧಕರಾಗುತ್ತಾರೆ. ಗುರಿ ಮತ್ತು ಗುರು ಮಕ್ಕಳಿಗೆ ಬೇಕೆ ಬೇಕು, ಕೆಟ್ಟ ಚಟಗಳಿಂದ ಮಕ್ಕಳು ದೂರವಿರಬೇಕು ನಮ್ಮ ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು, ಸಮಾಜದಿಂದ ನಾವು ತೆಗೆದುಕೊಳ್ಳುವುದಕ್ಕಿಂತ ಕೊಡುವುದನ್ನು ಕಲಿಯಬೇಕು, ಸೌಲಭ್ಯಗಳು ಮನುಷ್ಯನನ್ನು ಬೆಳಸಲಾರವು ಬದಲಾಗಿ ಕಷ್ಟಗಳು ಮನುಷ್ಯನನ್ನು ಬೆಳೆಸುತ್ತವೆ ಎಂದರು. ಅಭ್ಯಾಸದ ಜೊತೆಗೆ ಉತ್ತಮ ಕ್ರೀಡಾಪಟುಗಳು ತಾವಾಗಬೇಕೆಂದು ಮಕ್ಕಳಿಗೆ ಕರೆ ನೀಡಿದರು. ನಮ್ಮಲ್ಲಿ ಪ್ರೀತಿ ಮತ್ತು ಭಕ್ತಿ ಇದ್ದರೆ ದೇವರು ಎಲ್ಲವನ್ನು ದಯಪಾಲಿಸುತ್ತಾನೆ. ವಿದ್ಯೆ ಮತ್ತು ಸಂಸ್ಕೃತಿಯನ್ನು ಕಳವುಮಾಡಲಿಕ್ಕಾಗದು ಹಣ, ಸಂಪತನ್ನು ಕಳೆದುಕೊಳ್ಳಬಹುದು ಆದರೆ ವಿದ್ಯೆಯನ್ನು ಯಾರು ಕಿತ್ತುಕೊಳ್ಳುವದಿಲ್ಲ. ಗುರು ಶಿಷ್ಯ ಪರಂಪರೆಯಲ್ಲಿ ಹಿಂದಿನ ಗುರುಕುಲವನ್ನು ಹೋಲುವ ಈ ಶಾಲೆ ನಿಜಕ್ಕೂ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.
ಶ್ರೇಷ್ಟ ಸಹಕಾರ ರತ್ನ ಪ್ರಶಸ್ತಿ ಪಡೆದ ಎಸ್.ಎಂ.ಕಲೂತಿಯವರು ಸಂಸ್ಥಯವರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ನಮ್ಮ ವಿದ್ಯಾಲಯವು ಉತ್ತಮ ಆರೋಗ್ಯ, ಒಳ್ಳೆಯ ಜ್ಞಾನ, ಉತ್ತಮ ಚಾರಿತ್ರ್ಯವಂತ ಮಕ್ಕಳನ್ನು ತಯಾರಿಸಿ ದೇಶಕ್ಕೆ ನೀಡುವ ಘನ ಉದ್ದೇಶವನ್ನು ಹೊಂದಿದೆ. ನನಗೆ ದೊರೆತ ಪ್ರಶಸ್ತಿಯು ನನ್ನ ಜೊತೆಗೆ ಕೆಲಸಮಾಡಿದ ಎಲ್ಲರಿಗೂ ಇದರ ಪಾಲು ಸಲ್ಲಬೇಕು ಎಂದರು.
ಇದೇ ಸಂದರ್ಭದಲ್ಲಿ ಕನರ್ಾಟಕ ಸಕರ್ಾರದಿಂದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು, ಸಹಕಾರ ಇಲಾಖೆಯ ನಿವೃತ್ತ ಅಪರ ನಿಬಂಧಕರು ಮತ್ತು ಸ್ಪೋಕೋ ಸಂಸ್ಥೆಯ ಸಂಸ್ಥಾಪಕರಾದ ಎಸ್. ಎಂ. ಕಲೂತಿಯವರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ವಿಶೇಷ ಸಾಧನೆಗೈದ ವಿದ್ಯಾಲಯದ ಹಳೆಯ ವಿದ್ಯಾಥರ್ಿಗಳಾದ ಬೆಲ್ಟ್ ಕುಸ್ತಿ ವಿಭಾಗದ ಥೈಲ್ಯಾಂಡ ಅಂತರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಕಂಚಿನ ಪದಕ ವಿಜೇತ ಮಹೇಶ ತಬಾಜ, ವಾಲಿಬಾಲ್ ಕ್ರೀಡಾಪಟು ಹೇಮಚಂದ್ರ ಹೂಲಿಕಟ್ಟಿ, ವೈದ್ಯರಾದ ಡಾ|| ವೀರೇಶ ಪಟ್ಟಣಶಟ್ಟಿ ಹಾಗೂ ಅಂತರಾಷ್ಟ್ರೀಯ ಕುಸ್ತಿ ಪಟು ಐಶ್ವರ್ಯ ದಳವಾಯಿ ಅವರನ್ನು ಸತ್ಕರಿಸಲಾಯಿತು.
ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಸಾಧನೆ ತೋರಿದ ವಿದ್ಯಾಥರ್ಿಗಳಿಗೆ ಹಾಗೂ ವಿವಿಧ ತರಗತಿಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾಥರ್ಿಗಳಿಗೆ ಹಾಗೂ ಉತ್ತಮ ಸಾಧನೆಗೈದ ವಿಷಯ ಶಿಕ್ಷಕರಾದ ಎ. ಎನ್. ಮೋದಗಿ, ಎಸ್. ಎ. ಹಿರೇಮಠ, ಈರಣ್ಣ ಎಸ್. ಸೂಳಿಭಾವಿ, ಐ. ಜಿ. ಅಂಕಲಿ, ಎಸ್. ಎಸ್. ಉಮಚಗಿ, ಎಂ.ಎಂ. ಗೋರಿಖಾನ, ಎಮ್. ಬಿ. ಗಡಾದ, ತರಬೇತುದಾರರಾದ ಲಕ್ಷ್ಮಣ ಲಮಾಣಿ, ಹಾಕಿ ತರಬೇತುದಾರ ಹಾಲೇಶ, ಪುಟ್ಬಾಲ್ ತರಬೇತುದಾರ ಮಾರುತಿ ಮತ್ತೂರ, ಸೈಕ್ಲಿಂಗ್ ತರಬೇತುದಾರರಾದ ನಾಗಪ್ಪ ಮರಡಿ ಅವರನ್ನು ಸತ್ಕರಿಸಲಾಯಿತು.
ಸ್ಪೋಕೋ ಸಂಸ್ಥೆಯ ಅಧ್ಯಕ್ಷ ಆರ್ ಎ ಪಾಟೀಲ(ಮುರಕೀಭಾಂವಿ), ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಕೆ ಎಸ್ ಉಮರಾಣಿ, ಸಂಸ್ಥೆಯ ಆಡಳಿತ ಮಂಡಳಿಯ ನಿದರ್ೇಶಕರಾದ ಬಿ.ಆರ್. ಪಾಟೀಲ, ಎಂ ಎಸ್ ಮನೋಳಿ, ಎಂ ಜೆ ತೇರಣೇಕರ, ಎಸ್.ಆರ್.ನವರಕ್ಕಿ, ಆರ್.ಸಿ.ಯಕ್ಕುಂಡಿ, ಬಿ.ಜಿ.ಮರನೂರ, ಎಸ್.ಬಿ ಯರಗಣವಿ, ಶ್ರೀಮತಿ ಆರ್.ಎಸ್.ಯಾದವಾಡ, ಹಾಗೂ ಬಿ. ವಿ ಗುಂಜಿಕರ, ಕಾಲೇಜು ವಿಭಾಗದ ಪ್ರಾಚಾರ್ಯರಾದ ವಿ. ಟಿ. ಪಾಟೀಲ ಉಪಸ್ಥಿತರಿದ್ದರು.
ಕನ್ನಡ ಮಾಧ್ಯಮ ಪ್ರಾಚಾರ್ಯರಾದ ಎ ಎನ್ ಮೋದಗಿ, ಅತಿಥಿಗಳನ್ನು ಸಭೆಗೆ ಪರಿಚಯಿಸಿ ಸ್ವಾಗತಿಸಿದರು, ಎಸ್. ಎ. ಹಿರೇಮಠ ವಾಷರ್ಿಕ ವರದಿ ವಾಚನ ಮಾಡಿದರು. ಶಿಕ್ಷಕರಾದ ಎಸ್.ಎ.ಹಿರೇಮಠ ನಿರೂಪಿಸಿದರು ಹಾಗೂ ಆಂಗ್ಲ ಮಾಧ್ಯಮ ಪ್ರಾಚಾರ್ಯರಾದ ಎಸ್. ಜಿ. ಕಡೆಮನಿ ವಂದಿಸಿದರು.
ಇದಕ್ಕೂ ಮೊದಲು ಬೆಳಿಗ್ಗೆ ಮುಖ್ಯ ಅತಿಥಿಗಳಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಅತಿಥಿಗಳು ವಿದ್ಯಾಥರ್ಿಗಳ ಆಕರ್ಷಕ ಪಥಚಲನೆ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾಥರ್ಿಗಳಿಂದ ರೋಮಾಂಚನಕಾರಿ ಕುದುರೆ ಸವಾರಿ ಹಾಗೂ ಸೈಕಲಿಂಗ್ ಪ್ರದರ್ಶನ ಜರುಗಿತು. ಸಂಜೆ ವಿದ್ಯಾಥರ್ಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರುಗಿದವು.