ಅಂಕೋಲಾ : ಮತ್ಸ್ಯ ಪ್ರಿಯರ ಸ್ವರ್ಗವೆಂದೇ ಕರೆಯಿಸಿಕೊಳ್ಳುವ ಕರವಾಳಿಯ ಪ್ರಸಿದ್ದ ನೆಲ ಅಂಕೋಲಾದ ಮೀನು ಮಾರುಕಟ್ಟೆಗೆ ಹತ್ತಾರು ಜಾತಿಯ ತಾಜಾ ಮೀನಿನ ಬರಪೂರ ಪೂರೈಕೆಯಾಗಿ ಅಕ್ಷರಶಃ ಮೀನು ಪ್ರಿಯರಿಗೆ ಶ್ರಾವಣಕ್ಕೂ ಮೊದಲೇ ಹಬ್ಬದೂಟ ದೊರೆತಂತಾಯಿತು. ಭಾನುವಾರ ಪೇಟಿಗೆ ಬಂದವರೆಲ್ಲರೂ ಮುಗಿಬಿದ್ದು, ಮೀನನ್ನು ಖರಿಧಿಸಿದ್ದಲ್ಲದೇ ತಮ್ಮ ಪರಿಚಿತರು ಸಂಬಂಧಿಗಳಿಗೆ ಕರೆ ಮಾಡಿ ಮೀನು ಬಂದ ಸುದ್ದಿಯನ್ನು ಹೇಳುತ್ತಿರುವುದು ಸಾಮಾನ್ಯವಾಗಿದೆ.
ಮೀನು ಸಂತತಿ ವೃದ್ಧಿಗೆ ಸಹಾಯಕವಾಗಲು ಮತ್ತು ಮಳೆಗಾಲದ ಸಮುದ್ರದಬ್ಬರ-ಬೀರುಗಾಳಿಯಿಂದ ಮೀನುಗಾ ರರ ಪ್ರಾಣ-ಆಸ್ತಿ ಹಾನಿಯಾಗದಂತೆ ಮುನ್ನಚ್ಚರಿಕೆ ಕ್ರಮವಾಗಿ ಪ್ರತಿ ವರ್ಷ ಮಳೆಗಾಲದ ಆರಂಭದಿಂದ ಅಗಷ್ಟ ಮಧ್ಯದವರೆಗೂ ಭಾರಿ ಮೀನುಗಾರಿಕೆಗೆ ನಿಷೇಧವಿರುತ್ತದೆ. ಈ ಅವಧಿಯಲ್ಲಿ ಸಣ್ಣ ಪ್ರಮಾಣದ ಸಾಂಪ್ರದಾಯಿಕ ಮೀನುಗಾರಿಗೆ ಮಾತ್ರ ನಡೆಯುತ್ತಿದ್ದು, ಮೀನಿನ ಲಭ್ಯತೆ ಪ್ರಮಾಣ ತೀರ ಕಡಿಮೆ. ಗ್ರಾಹಕರ ಬೇಡಿಕೆ ಪೂರೈಸಲು ಕೆಲ ವ್ಯಾಪರಸ್ಥರು ಈ ಹಿಂದೆ ಹಿಡಿದ ಮೀನುಗಳನ್ನು ಶೈತ್ಯಾಗಾರದಿಂದ ತೆಗೆದು ಈ ಸಮಯದಲ್ಲಿ ಮಾರಾಟ ಮಾಡುತ್ತಾರೆ. ಆದರೆ ಈ ಮೀನುಗಳು ತಮ್ಮ ನೈಸಗರ್ಿಕ ಬಣ್ಣ ಮತ್ತು ರುಚಿಯನ್ನು ಕಳೆದುಕೊಂಡು ಸ್ವಲ್ಪ ಸಪ್ಪೆ ಎನ್ನಿಸುತ್ತವೆಯಾದರೂ ಹಲವು ಗ್ರಾಹಕರು ಅನಿವಾರ್ಯವಾಗಿ ಈ ಮೀನುಗಳನ್ನೇ ಕೊಂಡುಕೊಳ್ಳುತ್ತಾರೆ.
ಬಂಗಡೆ ರುಚಿ : ಕರಾವಳಿಯಲ್ಲಿ ನಾನಾ ತರಹದ ಮೀನುಗಳು ಕಾಲಮಾನಕ್ಕೆ ತಕ್ಕಾಗಿ ದೊರೆಯುತ್ತವೆಯಾದರೂ ಬಂಗಡೆ ಮೀನಿಗೆ ಅವು ಸಾಟಿ ಆಗುವುದಿಲ್ಲ. ಬಡವರಿಂದ ಹಿಡಿದು ಸಿರಿವಂತರವರೆಗೆ ಎಲ್ಲಾ ಕಾಲಕ್ಕೂ ಸಿಗುವ ಬಂಗಡೆ ಮೀನೆಂದರೆ ಪಂಚಪ್ರಾಣ. ಮೀನು ಕೆಡದಂತೆ ಶೈತ್ಯಲ್ಯೀ ಕರಿಸುವ ವೇಳೆ ಅಪಾಯಕಾರಿ ರಾಸಾಯನಿಕ ಬಳಸುತ್ತಾರೆ ಎನ್ನುವ ಸುದ್ದಿಯಿಂದ ಆಘಾತಗೊಂಡ ನಾಗರಿಕರು ಬಂಗಡೆ ತಿನ್ನಲು ಹಿಂದೇಟು ಹಾಕಬೇಕಾಯಿತು. ಕೆಲವರು ಮೀನು ಖರೀಧಿಯನ್ನೇ ಬಿಟ್ಟು ತಾಜ ಮೀನು ಬರುವಿಕೆಗಾಗಿ ಕಾದುಕೊಳ್ಳುತ್ತಿದ್ದರು.
ರವಿವಾರಕ್ಕೇ ಕಂಡು ಬಂದ ಬರಪೂರ ಮೀನಿಂದ ಖುಷಿಯಾಗಿ ಪೇಟೆಗೆ ಬಂದವರೆಲ್ಲರೂ ತಮಗೆ ಇಷ್ಟವಾದ ಮೀನುಗಳನ್ನು ಚೀಲತುಂಬಿ ಕೊಂಡೊಯ್ದರು. ಮತ್ತೇರಡು ದಿನಗಳಲ್ಲಿ ಆರಂಭವಾಗಲಿರುವ ಶ್ರಾವಣ ಮಾಸದಲ್ಲಿ ಮೀನು-ಮಾಂಸ ತ್ಯಜಿಸಿ ತಮ್ಮ ಧಾಮರ್ಿಕ ಸಂಪ್ರದಾಯ ಮುಂದುವರೆಸುವವರಿಗೂ, ವಿಶೇಷವಾಗಿ ಬರುವ ಅಂಗಾರಕ ಸಂಕಷ್ಟಿ ಆಚರಣೆಗೂ ಪೂರ್ವ ಮೀನು ರುಚಿ ಸವಿಯಲು ಅನುಕೂಲವಾಯಿತು.
ಸ್ಥಳೀಯ ಭಾಷೆಯಲ್ಲಿ ಜನಪ್ರಿಯವಾಗಿರುವ ಪಂಚಬೆರಕಿ, ಶೆಟ್ಲಿ, ನೊಗಲೇ, ಜಾಲೆ, ಸೋರಾ, ಬಂಗಡೆ ಮತ್ತಿತರ ತರಹೆವಾರಿ ಮೀನಿಂದ ತುಂಬಿಕೊಂಡ ಮೀನು ಪೇಟೆಯ ತುಂಬಾ ಎಲ್ಲಿ ನೋಡಿದರೂ ಜನಜಂಗುಳಿ ಕಾಣು ವಂತಾಯಿತು. ಒಟ್ಟಿನಲ್ಲಿ ಅಂಕೋಲಾ ತುಂಬಾ ಮೀನಿನ ಸುದ್ದಿ ಕ್ಷಣ ಮಾತ್ರದಲ್ಲಿ ದಿಕ್ಕು ದಿಕ್ಕಗೂ ಪಸರಿಸಿ ಜನ ಮೀನು ಖರೀದಿಗೆ ಮುಗಿಬಿಳುತ್ತಿದ್ದರು. ಹಲವರ ಮನೆಗಳಲ್ಲಿ ಮೀನಿನ ನಾನಾ ಪದಾರ್ಥಗಳು ಘಮಘಮಿಸಿತು.