ಪಂಚಮಸಾಲಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕಾರ್ಯಾಗಾರ: ಪಾಟೀಲ
Free training workshop for Panchamasali students: Patil
ಶಿಗ್ಗಾವಿ 28 : ಪಂಚಮಸಾಲಿ ಸಮಾಜದ ಸ್ವಾಭಿಮಾನದ ವಿಶೇಷ ಉಚಿತ ತರಬೇತಿ ಕಾರ್ಯಾಗಾರವನ್ನು ತಾಲೂಕಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ್ರ ಪಾಟೀಲ ಹೇಳಿದರು.
ಪಟ್ಟಣದ ವೀರಶೈವ ಪಂಚಮಸಾಲಿ ಸಭಾಭವನದಲ್ಲಿ ನಡೆದ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸಮಾಜದ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ವಿಶೇಷ ತರಬೇತಿಯನ್ನು ಶಿಗ್ಗಾವಿ ಪಂಚಮಸಾಲಿ ಭವನದಲ್ಲಿ ದಿ.10 ಮತ್ತು 11 ರಂದು ಹಮ್ಮಿಕೊಂಡು ಅಂತರಾಷ್ಟ್ರೀಯ ಮಟ್ಟದ ತರಬೇತುದಾರ ಚೇತನಕುಮಾರ ಅವರಿಂದ ವಿಶೇಷ ತರಬೇತಿ ಮತ್ತು ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳ್ಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಮುಖ್ಯ ಉದ್ದೇಶ ನಮ್ಮದಾಗಿದೆ ಹಾಗೂ 250 ವಿಧ್ಯಾರ್ಥಿಗಳಿಗೆ ತರಬೇತಿ ನೀಡಿ ಅದರಲ್ಲಿ 10 ವಿಧ್ಯಾರ್ಥಿಗಳಿಗೆ ಆಯ್ಕೆ ಮಾಡಿ ಪ್ರತಿ ಮೂರು ತಿಂಗಳಿಗೊಮ್ಮೆ ವಿಶೇಷ ತರಬೇತಿ ನೀಡುತ್ತೇವೆ ಅಲ್ಲದೇ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಫೇಲಾದ 18-35 ವರ್ಷದ ವಯೋಮಾನದ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ದಿ ತರಬೇತಿ ನೀಡುತ್ತೇವೆ ಎಂದರು.
ದಿ. 11 ರ ಸಾಯಂಕಾಲ 4 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಸಮಾಜಸೇವಕಿ ಹಾಗೂ ರಾಜ್ಯ ಸಭಾ ಸದಸ್ಯೆ ಸುಧಾಮೂರ್ತಿ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಸಂಸದರನ್ನು ಆಹ್ವಾನಿಸುತ್ತೇವೆ ಎಂದರು.ಸಮಾಜದ ಅಧ್ಯಕ್ಷ ವೀರೇಶ್ ಆಜೂರ್ ಅಧ್ಯಕ್ಷತೆಯಲ್ಲಿ, ಧರ್ಮದರ್ಶಿ ಪಿ ಡಿ ಶಿರೂರ, ಮಹೇಶ್ ಹಾವೇರಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಅಗಡಿ, ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ವೀರೇಶ್ ಮತ್ತಿಹಳ್ಳಿ, ರಾಜ್ಯ ಉಪಾಧ್ಯಕ್ಷ ಶಂಕರ್ ಬಿಸರಹಳ್ಳಿ, ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಪ್ರೇಮಾ ಪಾಟೀಲ, ಅರುಣ ಹುಡೇದಗೌಡ್ರ, ಮೇಘರಾಜ ಕೂಲಿ, ವಿಶ್ವನಾಥ ಹರವಿ, ಸಿ.ವ್ಹಿ.ಮತ್ತಿಗಟ್ಟಿ, ಎಫ್.ಸಿ.ಪಾಟೀಲ, ಜಿ.ಎನ್.ಯಲಿಗಾರ, ಭರಮಜ್ಜ ನವಲಗುಂದ, ಶಿವಾನಂದ ಮ್ಯಾಗೇರಿ, ಸಿ.ಎಸ್.ಪಾಟೀಲ, ಕೊಟ್ರ್ಪ ನಡೂರ, ಮಂಜುನಾಥ ಮಣ್ಣಣ್ಣವರ, ವಸಂತಾ ಬಾಗೂರ, ರಮೇಶ ಸಾತಣ್ಣವರ, ಬಸವರಾಜ ಗೊಬ್ಬಿ, ರೇಣುಕನಗೌಡ ಪಾಟೀಲ, ಸೂಜಿ ಮಹಾಂತೇಶ, ಅನಿಲ ಸಾತಣ್ಣವರ, ಬಸವರಾಜ ಮಿರ್ಜಿ, ಸಿ.ಡಿ.ಯತ್ನಳ್ಳಿ,ಎಸ್.ಎನ್.ಮುಗಳಿ, ಬಿ.ಎಸ್.ಅಂಗಡಿ, ಎಂ.ಬಿ.ಹಳೇಮನಿ, ರಮೇಶ ವನಹಳ್ಳಿ, ಸೋಮು ಆಜೂರ, ಗುರು ಅಣ್ಣಿಗೇರಿ, ಪ್ರಶಾಂತ ಬಡ್ಡಿ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ಶ್ರೀಕಾಂತ ಪೂಜಾರ ಕಾರ್ಯಕ್ರಮ ನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 