ಎಸ್‌ಎಸ್‌ಎಲ್ಸಿ ಉತ್ತೀರ್ಣರಾದ ಅಥವಾ ಅನುತ್ತೀರ್ಣರಾದ ಗ್ರಾಮೀಣ ಯುವಕ-ಯುವತಿಯರಿಗೆ ಉಚಿತ ತಾಂತ್ರಿಕ ಶಿಕ್ಷಣ

ಎಸ್‌ಎಸ್‌ಎಲ್ಸಿ ಉತ್ತೀರ್ಣರಾದ ಅಥವಾ ಅನುತ್ತೀರ್ಣರಾದ ಗ್ರಾಮೀಣ ಯುವಕ-ಯುವತಿಯರಿಗೆ ಉಚಿತ ತಾಂತ್ರಿಕ ಶಿಕ್ಷಣ  Free technical education for rural youth who have passed or failed SSLC

ಲೋಕದರ್ಶನ ವರದಿ 

ಬಳ್ಳಾರಿ   18: ಪ್ರಸ್ತುತ ಜಗತ್ತಿನಲ್ಲಿ ಎಐ ತಂತ್ರಜ್ಞಾನ ಬಿರುಗಾಳಿಯಂತೆ ಬೆಳೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಸಾಂಪ್ರದಾಯಿಕ ಕಚೇರಿ ಉದ್ಯೋಗಗಳು ಕಣ್ಮರೆಯಾಗಲಿವೆ. ಆದರೆ, ತಾಂತ್ರಿಕವಾಗಿ ಕೈಯಾರೆ ಕೆಲಸ ಮಾಡುವ ಕೌಶಲ್ಯಾಧರಿತ ಉದ್ಯೋಗಿಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ವೇತನ ಎರಡೂ ದುಪ್ಪಟ್ಟಾಗಲಿದೆ. ಈ ಜಾಗತಿಕ ಬದಲಾವಣೆಯನ್ನು ಮನಗಂಡು ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕದ ಬಡ ಹಾಗೂ ಹಿಂದುಳಿದ ಯುವಜನತೆಗೆ ಉಚಿತವಾಗಿ ಉನ್ನತ ತಂತ್ರಜ್ಞಾನದ ಕೌಶಲ್ಯ ಕಲಿಸಲು ಮೂಡುಬಿದ್ರೆಯ ಡಾ. ಜಿ. ರಾಮಕೃಷ್ಣ ಆಚಾರ್ ಚಾರಿಟೇಬಲ್ ಟ್ರಸ್ಟ್‌ ಹಾಗೂ ಜಾಗತಿಕ ತಂತ್ರಜ್ಞಾನದ ಪ್ರಮುಖ ಸಂಸ್ಥೆಯಾದ ಎಸ್ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ. ಜಂಟಿಯಾಗಿ ಮುಂದಾಗಿವೆ.    

ಎಸ್‌ಎಸ್‌ಎಲ್ ಸಿ ಉತ್ತೀರ್ಣ ಅಥವಾ ಅನುತ್ತೀರ್ಣರಾದ ಅಭ್ಯರ್ಥಿಗಳಿಗೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿರುವ ಅತ್ಯಾಧುನಿಕ ಎಸ್ಕೆಎಫ್ ಎಲಿಕ್ಸರ್ ಇಂಡಸ್ಟ್ರಿಯಲ್ ಟ್ರೇನಿಂಗ್ ಸೆಂಟರ್ ನಲ್ಲಿ ಸಂಪೂರ್ಣ ಉಚಿತ ಐಟಿಐ ಶಿಕ್ಷಣ ಮತ್ತು ಕೌಶಲ್ಯಾಧಾರಿತ ತಾಂತ್ರಿಕ ತರಬೇತಿಯನ್ನು ನೀಡಲಾಗುತ್ತಿದೆ.  ಪ್ರಾಯೋಗಿಕ ಕಲಿಕೆ ಹಾಗೂ ಜಾಗತಿಕ ಉದ್ಯೋಗ ಬರೀ ಪುಸ್ತಕದ ಪಾಠಕ್ಕಷ್ಟೇ ಸೀಮಿತವಾಗದೆ, ನೈಜ ಕೈಗಾರಿಕಾ ಪರಿಸರದಲ್ಲಿ ಕೆಲಸ ಮಾಡಲು ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಒಂದು ವರ್ಷದ ವಿಶೇಷ ತರಬೇತಿ ಇದಾಗಿದೆ.