ಉಚಿತ ವಿಶೇಷ ಬಾಳೆಹಣ್ಣಿನ ಅನುಭೂತ ಓಷಧ ವಿತರಣಾ ಶಿಬಿರ
Free special banana-based medicine distribution camp
ಲೋಕದರ್ಶನ ವರದಿ
ಚಿಕ್ಕೋಡಿ 02: ಕೆ.ಎಲ್.ಇ ಸಂಸ್ಥೆಯ ಆಯುರ್ವೇದ ಆಸ್ಪತ್ರೆ, ಬಸವ ಸರ್ಕಲ್ ಚಿಕ್ಕೋಡಿ ಇವರ ವತಿಯಿಂದ ಉಚಿತ ವಿಶೇಷ ಬಾಳೆಹಣ್ಣಿನ ಅನುಭೂತ ಓಷಧ ವಿತರಣಾ ಶಿಬಿರವನ್ನು 04ರಂದು ಮುಂಜಾನೆ 06:00 ರಿಂದ ಮುಂಜಾನೆ 8:00ರವರೆಗೆ ಏರಿ್ಡಸಲಾಗಿದೆ.
ಶಿಬಿರದಲ್ಲಿ ಕೆಮ್ಮು, ದಮ್ಮು, ಶೀತ, ಅಲರ್ಜಿ, ಅಸ್ತಮಾ, ಇತರೆ ಶ್ವಾಸರೋಗಗಳಿಗೆ ಬಾಳೆಹಣ್ಣಿನ ವಿಶೇಷ ಅನುಭೂತ ಆಯುರ್ವೇದ ಓಷಧವನ್ನು 3 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡಲಾಗುವುದು. ಆಸಕ್ತರು ಪೂರ್ವ ನೋಂದಣಿಯನ್ನು ಒಂದು ದಿನ ಮುಂಚಿತವಾಗಿ ದೂರವಾಣಿಯ ಮೂಲಕ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಮಾಡಿಸಬೇಕು ಮತ್ತು ಓಷಧಿಯನ್ನು ವೈದ್ಯರ ಸಮ್ಮುಖದಲ್ಲಿ ಸೇವಿಸಿ ಒಂದು ಘಂಟೆ ನಂತರ ಅನುಮತಿ ಪಡೆದು ಹೋಗಬೇಕು. ನೊಂದಾಯಿತ ಮೊದಲ 100 ಜನರಿಗೆ ಮಾತ್ರ ಓಷಧಿಯನ್ನು ಪಡೆಯಲು ಬರುವವರು ಬೆಳಿಗ್ಗೆ 6 ರಿಂದ 8 ಘಂಟೆಯೊಳಗೆ ಖಾಲಿ ಹೊಟ್ಟೆಯಲ್ಲಿ ಬರಬೇಕು.
ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಕಿರಣ ಮುತ್ನಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಧಿಕ ಮಾಹಿತಿಗಾಗಿ ಸಂಪರ್ಕಿಸಿ 08338275100.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 