ಮುಂಡರಗಿ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಉಚಿತ ಸ್ಕ್ಯಾನಿಂಗ್ ಸೌಲಭ್ಯ
Free scanning facility for pregnant women at Taluk Public Hospital in Mundaragi town
ಮುಂಡರಗಿ 28 : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮೀಣ ಭಾಗದ ಬಡಜನತೆಯ ಆರೋಗ್ಯ ರಕ್ಷಣೆಗಾಗಿ ಅನೇಕ ಜನಪರವಾದ ಯೋಜನೆಗಳನ್ನು ಜಾರಿಗೆ ತಂದಿದೆ. ಅಂತಹ ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕುಎಂದು ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಉಚಿತ ಸ್ಕ್ಯಾನಿಂಗ್ ಸೌಲಭ್ಯ ಹಾಗೂ ತಡೆ ಇಲ್ಲದೇ ಒತ್ತಡ ಪರೀಕ್ಷೆ ಮಷಿನ್(ಎನ್.ಎಸ್.ಟಿ ಮಷಿನ್) ಸೇವೆಯನ್ನು ಚಾಲನೆ ನೀಡಿ ಮಾತನಾಡಿದ ಅವರು, ಈ ಸ್ಕ್ಯಾನಿಂಗ್ ಸೇಂಟರ್‌ನಿಂದ ಗರ್ಭಿಣಿಯ ಮಹಿಳೆಯರು ಪ್ರತಿತಿಂಗಳ ಪರೀಕ್ಷೆ ಮಾಡುವುದಕ್ಕೆ ಅನುಕೂಲವಾಗಲಿದೆ. ಆದ್ದರಿಂದ ಈ ಭಾಗದ ಬಡ ಜನತೆಯ ಅನೂಲಕ್ಕಾಗಿ ಸರ್ಕಾರವು ಮುಂಡರಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಗರ್ಭಿಣಿಯರ ಸ್ಕ್ಯಾನಿಂಗ್ ಸೇಂಟರ್ ಸೇವೆಯ ಅವಕಾಶ ಕಲ್ಪಿಸಿಕೊಟ್ಟಿದ್ದು, ಇಲ್ಲಿಯ ಜನಸಾಮಾನ್ಯರಿಗೆ ಸೌಭಾಗ್ಯವಿದ್ದಂತೆ.ಆದರೆ ಇಲ್ಲಿಯ ಆಸ್ಪತ್ರೆಯ ಸಿಬ್ಬಂದಿಗಳು ಪ್ರತಿ ಬುಧವಾರ ಒಂದು ದಿನ ಬೆಳಗ್ಗೆ 10 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ ಗರ್ಭಿಣಿಯರಿಗೆ ಮಾತ್ರ ಸ್ಕ್ಯಾನಿಂಗ್ ಮಾಡುವ ವ್ಯವಸ್ಥೆ ಕಲ್ಪಿಸಿಲಾಗಿದೆ. ಯಾಕೆಂದರೆ ಸರ್ಕಾರವು ಗರ್ಭಿಣಿಯರ ಸ್ಕ್ಯಾನಿಂಗ್ ತಂತ್ರಜ್ಞ ಸಿಬ್ಬಂದಿಯ ನಿಯೋಜಿಸಿರುವುದಿಲ್ಲ. ಹೀಗಾಗಿ ಮುಂದಿನ ದಿನಮಾನದಲ್ಲಿ ನಮ್ಮ ಆಸ್ಪತ್ರೆಗೆ ತಂತ್ರಜ್ಞರನ್ನು ಪೂರೈಸಿದರೆ, ಪ್ರತಿ ದಿನವು ಸ್ಕ್ಯಾನಿಂಗ್ ಕಾರ್ಯನಿರ್ವಸಲಾಗುತ್ತದೆ. ಅಲ್ಲಿಯವರಿಗೂ ಸ್ತ್ರೀ ರೋಗ ವೈಧ್ಯರು ಸೇವೆ ಕಲ್ಪಿಸಿಕೊಡುವರು. ಆದ್ದರಿಂದ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೇಳಿದರು.
ಈ ವೇಳೆ ಬಿಜೆಪಿ ಮುಂಡರಗಿ ಮಂಡಳ ಅಧ್ಯಕ್ಷ ಹೇಮಗೀರೀಶ ಹಾವಿನಾಳ, ಆಡಳಿತ ವೈಧ್ಯಾಧಿಕಾರಿ ಡಾ.ಲಕ್ಷ್ಮಣ್ಣ ಪೂಜಾರ, ಡಾ.ಅಂಜುಮಾ ಕಮ್ಮಾರ, ಡಾ.ಶಮೀರುಲ್ಲಾ, ಡಾ.ಕೀರ್ತಿಹಾಸ, ರವಿ ಲಮಾಣಿ, ಮೈಲಾರ್ಪ ಕಲಕೇರಿ, ಪ್ರಶಾಂತ ಗುಡದಪ್ಪನವರ, ಆರ್.ಎಸ್.ಪಾಟೀಲ, ಶಿವನಗೌಡ ಗೌಡ್ರ, ಅರುಣಾ ಪಾಟೀಲ, ಪವಿತ್ರಾ ಕಲ್ಲಕುಟಗರ, ಜ್ಯೋತಿ ಹಾನಗಲ್, ರಮೇಶ ಹುಳಕಣ್ಣನವರ, ಅಶೋಕ ಚೂರಿ, ಶ್ರೀನಿವಾಸ ಅಬ್ಬಿಗೇರಿ, ರಂಗಪ್ಪ ಕೋಳಿ, ವಿನಾಯಕ, ಲೋಹಿತ್ ಕುರಿ. ಗೀರೀಶ ಶೀರಿ, ಬಸವರಾಜ ಚಿಕ್ಕಣ್ಣವರ, ದಾವಲ್ ನಮಾಜಿ, ಅಂಬವ್ವ ಕಟ್ಟಿಮನಿ ಅನೇಕರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 