ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್ ವಿತರಣೆ
Free notebooks, pens, pencils distributed to school children
ಕಂಪಿ 10: ತಾಲೂಕಿನ ನಂ.10 ಮುದ್ದಾಪುರ ಗ್ರಾಮದ ಬಳಿಯ ಯಲ್ಲಪ್ಪಕ್ಯಾಂಪಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ಜನ್ಮದಿನದ ಅಂಗವಾಗಿ ಕಂಪ್ಲಿ ಕ್ಷೇತ್ರ ಘಟಕದಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್, ಪೆನ್, ಪನ್ಸಿಲ್ ಮಂಗಳವಾರ ವಿತರಿಸಿದರು.
ಕರವೇ ಕಂಪ್ಲಿ ಕ್ಷೇತ್ರ ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಮಾತನಾಡಿ, ಕರವೇ ಹುಟ್ಟು ಹಾಕಿ, ನಾಡು ನುಡಿಗಾಗಿ ಹರಲಿರುಳು ಹೋರಾಟ ಮಾಡಿದ್ದಾರೆ. ಕನ್ನಡಾಭಿಮಾನಕ್ಕಾಗಿ ಸಾಕಷ್ಟು ಕಷ್ಟಗಳನ್ನು ಪಟ್ಟಿದ್ದಾರೆ. ಇದರಿಂದ ಕನ್ನಡ ನಾಡಿನಾದ್ಯಂತ ರಾರಾಜಿಸುವಂತಾಗಿದೆ. ಸರ್ಕಾರ ಕಡ್ಡಾಯವಾಗಿ ಕನ್ನಡ ಪರಿಪಾಲನೆಗೆ ಸೂಕ್ತಕ್ರಮವಹಿಸಬೇಕು. ನಾಡು-ನುಡಿ ರಕ್ಷಣೆಗಾಗಿ ಹೊರಾಟ ನಡೆಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನೆ ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು ಶಾಖೆಗಳನ್ನು ಹೊಂದಿರುವ ಹೆಗ್ಗಳಿಕೆಯನ್ನು ಹೊಂದಿದೆ. ನಾಡು ನುಡಿ ವಿಚಾರದಲ್ಲಿ ಹೋರಾಟ ಮಾಡುತ್ತಿರುವ ನಮ್ಮಂತಹ ನೂರಾರು ಕನ್ನಡದ ಕಟ್ಟಾಳುಗಳನ್ನು ಬೆಳೆಸಿ ನಾಯಕರನ್ನಾಗಿ ಮಾಡಿದ ಕೀರ್ತಿ ನಾರಾಯಣಗೌಡರಿಗೆ ಸಲ್ಲುತ್ತದೆ. ಇವರ ಜನ್ಮದಿನದ ಪ್ರಯುಕ್ತ ಇಲ್ಲಿನ ಸರ್ಕಾರಿ ಶಾಲೆಯ 40 ಮಕ್ಕಳಿಗೆ ನೋಟ್ ಪುಸ್ತಕ, ಲೇಖನಿ ಸಾಮಾಗ್ರಿಗಳನ್ನು ವಿತರಿಸಲಾಯಿತು ಎಂದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಖರ, ಮುಖ್ಯಗುರು ಜೆ.ವೆಂಕೋಬಪ್ಪ, ಕ್ಷೇತ್ರ ಗೌರವಾಧ್ಯಕ್ಷ ಬಿ.ವಿ.ಗೌಡ, ಉಪಾಧ್ಯಕ್ಷ ಡಿಸ್ ಪ್ರಸಾದ್, ನಗರ ಘಟಕ ಅಧ್ಯಕ್ಷ ಜಿ.ನಾಗರಾಜ, ಉಪಾಧ್ಯಕ್ಷ ಹೂಗಾರ ಗಣೇಶ, ವಿದ್ಯಾರ್ಥಿ ಘಟಕ ಅಧ್ಯಕ್ಷ ಮುನ್ನಾ, ಪದಾಧಿಕಾರಿಗಳಾದ ಜಿ.ವೀರನಗೌಡ, ಪಿ.ರಾಘವೇಂದ್ರ, ರಾಮಚಂದ್ರ, ಗೌಳೇರು ಮಂಜುನಾಥ, ಪ್ರವೀಣ, ಬಸವರಾಜ, ಯಲ್ಲಪ್ಪ ಹಾಗೂ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 