ಮಹಿಳೆಯರಿಗಾಗಿ ಉಚಿತ ವೈದ್ಯಕೀಯ ಶಿಬಿರ
Free medical camp for women
ತಾಳಿಕೋಟೆ 01: ಮಹಿಳೆಯರು ತಮ್ಮ ಕುಟುಂಬದ ಜವಾಬ್ದಾರಿಗಳ ಜೊತೆ ಜೊತೆಯಲ್ಲೇ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹುಮುಖ್ಯ” ಎಂದು ಡಾ. ಪ್ರಿಯಾಂಕಾ ಸಂಗನಗೌಡರ ಹೇಳಿದರು.
ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಪೀಸ್ಫಿಕ್ ಗ್ರೋತ್ ಫೌಂಡೇಶನ್ ಮಹಿಳೆಯರಿಗಾಗಿ ಉಚಿತವಾಗಿ ಆಯೋಜಿಸಿದ ವೈದ್ಯಕೀಯ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಅವರು, “ಮಹಿಳೆಯರು ಸಾಮಾನ್ಯವಾಗಿ ತಮ್ಮ ಕುಟುಂಬದ ಆರೈಕೆ ಮಾಡುವಲ್ಲಿ ನಿರತರಾಗಿರುತ್ತಾರೆ. ಆದರೆ ತಮ್ಮದೇ ಆರೋಗ್ಯದ ಕಡೆ ಗಮನಹರಿಸಲು ಸಮಯ ಕೊಡದೆ ಉಳಿಯುತ್ತಾರೆ. ಆರೋಗ್ಯ ವಿಲ್ಲದ ಮಹಿಳೆ ತಮ್ಮ ಕುಟುಂಬವನ್ನು ಚೆನ್ನಾಗಿ ನಿರ್ವಹಿಸಲಾರಳು. ಹಾಗಾಗಿ ಮಹಿಳೆಯರು ಆರೋಗ್ಯದ ಕಾಳಜಿ ವಹಿಸುವುದು ಬಹಳ ಅತ್ಯಗತ್ಯ” ಎಂದು ಹೇಳಿದರು.
ಈ ಶಿಬಿರದಲ್ಲಿ ಅನೇಕ ಮಹಿಳೆಯರು ಭಾಗವಹಿಸಿ ತಪಾಸಣೆ, ಚಿಕಿತ್ಸೆ ಹಾಗೂ ಆರೋಗ್ಯ ಸಲಹೆಗಳನ್ನು ಪಡೆದುಕೊಂಡರು. ಪೀಸ್‌ಫಿಕ್ ಗ್ರೋತ್ ಫೌಂಡೇಶನ್ ಇಂತಹ ಆರೋಗ್ಯ ಶಿಬಿರಗಳ ಮೂಲಕ ಮಹಿಳೆಯರಲ್ಲಿ ಆರೋಗ್ಯದ ಜಾಗೃತಿ ಮೂಡಿಸುತ್ತಿದೆ. ಆರೋಗ್ಯವೇ ಆಧಾರ, ಆರೈಕೆ ಎಂದು ಪ್ರತಿಪಾದಿಸುತ್ತಿರುವ ಈ ಕಾರ್ಯ ಶ್ಲಾಘನೀಯವಾಗಿದೆ. ಪೀಸ್ಫಿಕ್ ಗ್ರೋತ್ ಫೌಂಡೇಶನ್ ಈಗಾಗಲೇ ದೇಶದಾದ್ಯಂತ 20,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ಹಾಗೂ 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಉದ್ಯೋಗಾವಕಾಶಗಳನ್ನು ಸಮಾಜದ ಅಭಿವೃದ್ದಿಗಾಗಿ ಅವಕಾಶ ಮಾಡಿಕೊಟ್ಟಿದ್ದು ಅತ್ಯಂತ ಹೆಮ್ಮೆಯ ವಿಷಯವೆಂದು ಎಲ್ಲರೂ ಕೊಂಡಾಡಿದರು. ಕಾರ್ಯಕ್ರಮವನ್ನು ಪೀಸ್ಫಿಕ್ ಗ್ರೋತ್ ಫೌಂಡೇಶನ್ನ ನಿರ್ದೇಶಕರಾದ ಶ್ರೀ ಎಸ್.ಎಸ್. ಸಂಗನಗೌಡರ ಮತ್ತು ಡಾ. ಸಾಹೇಬಗೌಡ ಸಂಗನಗೌಡರ ಅವರು ಹಾಜರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 