ಶ್ರೀ ಕೊರೆಮ್ಮ ದೇವಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಸಾಮಗ್ರಿ ವಿತರಣೆ
Free learning materials distributed to Sri Koremma Devi Government School students
ಶ್ರೀ ಕೊರೆಮ್ಮ ದೇವಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಸಾಮಗ್ರಿ ವಿತರಣೆ
ರನ್ನ ಬೆಳಗಲಿ 01: ಪಟ್ಟಣದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊರೆಮ್ಮ ದೇವಿ ತೋಟದ ವಿದ್ಯಾರ್ಥಿಗಳಿಗೆ ಬುಧವಾರ ದಂದು ನವಚೇತನ ಟ್ರಸ್ಟ್ ಕಮಿಟಿ ರಾಮನಗರ ಮತ್ತು ಅನಿಕೇತನ ವಿಕಲಚೇತನರ ಸಂಘ ಮಹಾಲಿಂಗಪುರ ಆಶ್ರಯದಲ್ಲಿ ಉಚಿತ ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮ ಜರಗಿತು. ಸಾಧನೆಗೆ ಅಂಗವೈಕಲ್ಯ ಶಾಪವಲ್ಲ ನಾನು ಅಂಗವಿಕಲನಾಗಿ, ಅಂಗವಿಕಲ ಇಂಡಿಯಾ ಕಬಡ್ಡಿ ಟೀಮ್ ಕ್ಯಾಪ್ಟನ್, ಅಂತರಾಷ್ಟ್ರ ಮಟ್ಟದ ಕಬ್ಬಡಿ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದೇನೆ. ಆದ್ದರಿಂದ ನಿರಂತರ ಪರಿಶ್ರಮ,ನಿತ್ಯ ವಿದ್ಯಾಭ್ಯಾಸ ಮಾಡುತ್ತಿದ್ದರೆ ನಿಮ್ಮ ಕನಸುಗಳು ನನಸಾಗುತ್ತದೆ ಎಂದು ಶೇಖರ ಕಾಖಂಡಕಿ ಕಬ್ಬಡ್ಡಿ ಅಂತರಾಷ್ಟ್ರೀಯ ಕ್ರೀಡಾಪಟು ತಿಳಿಸಿದರು.ಜಿಲ್ಲಾ ವಿಕಲಚೇತನ ಸಂಘದ ಅಧ್ಯಕ್ಷರಾದ ರಾಜು ತೇರದಾಳ, ಮುಖ್ಯೋಪಾಧ್ಯಾಯರಾದ ವಾಯ್ ಎಚ್ ಪೂಜಾರಿ ಮತ್ತು ಯೋಗ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಕಾರ್ಯಕ್ರಮದ ಕುರಿತು ಮಾತನಾಡಿದರು.ಶಿಕ್ಷಕಿಯರಾದ ರೂಪಾ ಹಾದಿಮನಿ,ರೇಖಾ ತಿಮ್ಮಪೂರ ಹಾಗೂ ಆರೂನಭಿ ತೇರದಾಳ,ಬಂದವ್ವ ದೋಬಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 