ಇಂದು ಉಚಿತ ಹೃದಯರೋಗ ತಪಾಸಣಾ ಶಿಬಿರ
Free heart disease check-up camp today
ಬೀಳಗಿ 31: ತಾಲೂಕಿನ ಯಡಹಳ್ಳಿ ಗ್ರಾಮದ ಗ್ರಾಪಂ ಕಾರ್ಯಾಲಯದ ಎದುರು ಇರುವ ಹಳೆ ಕನ್ನಡ ಶಾಲಾ ಆವರಣದಲ್ಲಿ ದಿ.01.ರಂದು ಮುಂ.9.00 ಗಂಟೆಗೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಉಚಿತ ಹೃದಯರೋಗ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೃದಯರೋಗ ತಜ್ಞ ಡಾ.ವಿಕ್ರಮ್ ಎಸ್ ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ 27 ವರ್ಷಗಳ ಹಿಂದೆ ಲಂಡನ್ ರಾಷ್ಟ್ರದಿಂದ ಡಾ. ಪ್ರೋ ಸ್ಟಾಬಿಲಿ ಅವರು ಈ ಭಾಗದ ಹಳ್ಳಿಗಳಿಗೆ ಭೇಟಿ ನೀಡಿ ಹೃದಯರೋಗ ತಪಾಸಣೆ ಮಾಡಿ ಹಲವಾರು ಜನರಿಗೆ ಉಪಯೋಗ ಆಗುವ ಚಿಕಿತ್ಸೆ ನೀಡಿದ್ದು ನನ್ನನ್ನು ಹೃದಯರೋಗ ಡಾಕ್ಟರ್ ಆಗುವಂತೆ ಮಾಡಿದ್ದು ಬೆಂಗಳೂರಿನ ಪ್ರತಿಷ್ಠಿತ ಹೃದಯರೋಗ ಆಸ್ಪತ್ರೆಯಲ್ಲಿ ಡಾ ಸಿ ಎನ್ ಮಂಜುನಾಥ ಅವರ ಹತ್ತಿರ ಹಲವಾರು ಹೃದಯರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದೇನೆ, ಹಿರಿಯರು ದೊಡ್ಡಪ್ಪನವರಾದ ಶಾಸಕ ಜೆ ಟಿ ಪಾಟೀಲ್ ಹಾಗೂ ತಂದೆಯವರಾದ ಶಿವನಗೌಡ ಟಿ ಪಾಟೀಲ ಅವರ ಜನಸೇವೆ ಗಮನಿಸಿ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರತಿ ತಿಂಗಳು ಇಂತಹ ಶಿಬಿರ ಹಮ್ಮಿಕೊಳ್ಳಬೇಕು ಎಂದು ಕನ್ನಡ ರಾಜ್ಯೋತ್ಸವ ದಿನದಂದು ಈ ಶಿಬಿರ ಆರಂಭ ಮಾಡಿ ಈ ಭಾಗದ ಜನರ ಸೇವೆ ಮಾಡಬೇಕು ಎಂದು ಉದ್ದೇಶಿಸಲಾಗಿದೆ ಎಂದರು.
ಡಾ ಆರ್ ಟಿ ಪಾಟೀಲ್ ಅವರ ನೇತ್ರತ್ವದಲ್ಲಿ ಜರುಗುವ ಈ ಶಿಬಿರದ ಸಾನಿಧ್ಯವನ್ನು ಮರೆಗುದ್ದಿ ದಿಗಂಬರೇಶ್ವರ ಸ್ವಾಮೀಜಿ ವಹಿಸಲಿದ್ದು, ಹಿರಿಯರಾದ ಡಾ.ಎಂ.ಆರ್.ದೇಸಾಯಿ ಅವರು ಉದ್ಘಾಟಿಸಲಿದ್ದಾರೆ ಎಂದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 