ಹಿರಿಯ ಬಡ ಜೀವಿಗಳಿಗೆ ಉಚಿತ ಆರೋಗ್ಯ ತಪಾಸಣೆ
Free health check-ups for elderly poor people
ಹಿರಿಯ ಬಡ ಜೀವಿಗಳಿಗೆ ಉಚಿತ ಆರೋಗ್ಯ ತಪಾಸಣೆ
ಕೊಪ್ಪಳ 13: ಕೊಪ್ಪಳ ನಗರದ ತಾರಾ ಕ್ಲಿನಿಕ್ ಆಸ್ಪತ್ರೆ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಸಹ ಡಾ, ಸುಶೀಲ್ ಕುಮಾರ್ ಕಲಾಲ್ ರವರ ಕುಟುಂಬದ ವತಿಯಿಂದ ಅವರ ತಂದೆ ದಿ, ಡಾ. ಎಲ್ ಬಿ ಕಲಾಲ್ ಮತ್ತು ತಾಯಿ ದಿ, ಶ್ರೀಮತಿ ತಾರಾಬಾಯಿ ಕಲಾಲ್ ರವರುಗಳ ಪುಣ್ಯತಿಥಿ ಪ್ರಯುಕ್ತ ಅವರ ಸ್ಮರಣಾರ್ಥವಾಗಿ ಇಲ್ಲಿನ ವೃದ್ಧಾಶ್ರಮದಲ್ಲಿ ವಾಸಿಸುವ ಹಿರಿಯ ಬಡ ಜೀವಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿ ಅವರಿಗೆ ಉಚಿತವಾಗಿ ಓಷಧಿ ಉಪಚಾರ ಮಾಡಿ ಸಮವಸ್ತ್ರ ಬಟ್ಟೆ ನೀಡಿ ಅವರಿಗೆ ಊಟದ ವ್ಯವಸ್ಥೆ ಮಾಡಿ ತಮ್ಮ ತಂದೆ ತಾಯಿಗಳ ಪುಣ್ಯತಿಥಿ ಆಚರಿಸಿದರು, ಡಾ, ಸುಶೀಲ್ ಕುಮಾರ್ ಕಲಾಲ್ ರವರ ಜೊತೆಗೂಡಿ ಡಾ. ಆನಂದ್ ಡಾ. ಪ್ರಶಾಂತ್ ಕಲಾಲ್ ಮತ್ತು ತಾರಾ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಪಾಲ್ಗೊಂಡು ಸುಮಾರು 50ಕ್ಕೂ ಅಧಿಕ ವೃದ್ಧ ಹಿರಿಯ ಜೀವಿಗಳಿಗೆ ಆರೋಗ್ಯ ತಪಾಷಣೆ ನಡೆಸಿ ಉಚಿತವಾಗಿ ಓಷಧಿ ಉಪಚಾರ ನೀಡಿ ಹೊಸ ಬಟ್ಟೆ ಸಮವಸ್ತ್ರಗಳನ್ನು ನೀಡುವುದರ ಜೊತೆಗೆ ಊಟದ ವ್ಯವಸ್ಥೆ ಮಾಡಿ ಅವರೆಲ್ಲರ ಪ್ರೀತಿ ವಿಶ್ವಾಸ ಗಳಿಸಿ ಮಾನವೀಯತೆ ಮೆರೆದಿದ್ದಾರೆ ಮತ್ತು ಇವರ ಈ ಸಮಾಜ ಸೇವಾ ಕಾರ್ಯ ಅತ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ವೃದ್ಧಾಶ್ರಮದಲ್ಲಿ ವಾಸಿಸುವ ಹಿರಿಯ ಬಡ ಜೀವಿಗಳು ತಮ್ಮ ಅನಿಸಿಕೆ ಅಭಿಪ್ರಾಯ ವ್ಯಕ್ತಪಡಿಸಿ ಡಾ, ಸುಶೀಲ್ ಕುಮಾರ್ ಕಲಾಲ್ ಕುಟುಂಬದವರು ನಮ್ಮ ಪಾಲಿಗೆ ಸಂಜೀವಿನಿ ಯಾಗಿದ್ದಾರೆ ಅವರಿಗೆ ಸದಾ ನಾವು ಚಿರಋಣಿಯಾಗಿದ್ದೇವೆ ಎಂದು ತಿಳಿಸಿದ್ದಾರೆ ,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 