ಜಾತ್ರೆಯಲ್ಲಿ ಭಕ್ತಾಧಿಗಳಿಗೆ ಉಚಿತ ಆರೋಗ್ಯ ತಪಾಸಣೆ
Free health check-up for devotees at the fair
ಹಾರೂಗೇರಿ 04: ಬಡವರು, ವಯಸ್ಸಾದವರಿಗೆ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಭಕ್ತಾಧಿಗಳಿಗೆ ಅನುಕೂಲವಾಗಲು ವೇದಾಂತ ಪರಿಷತ್ ಜಾತ್ರಾ ಮಹೋತ್ಸವದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಸೋಮನಗೌಡ ಪಾಟೀಲ ಹೇಳಿದರು.
ಪಟ್ಟಣದ ಶ್ರೀ ಚನ್ನವೃಷಭೇಂದ್ರ ಲೀಲಾಮಠದಲ್ಲಿ ಜಾತ್ರೆಗೆ ಆಗಮಿಸಿದ ಭಕ್ತಾಧಿಗಳಿಗೆ ಉಚಿತ ಬಿ.ಪಿ, ಸಕ್ಕರೆ ಕಾಯಿಲೆ ಹಾಗೂ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರಾಜ್ಯ ಹಾಗೂ ನೆರೆ ರಾಜ್ಯಗಳಿಂದ ದಿನನಿತ್ಯ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುವ ನೀರಿಕ್ಷೆಯಿದ್ದು, ಅವರ ಆರೋಗ್ಯ ಕಾಳಜಿ ವಹಿಸಲು, ಶುದ್ಧ ಕುಡಿಯುವ ನೀರು, ಆಹಾರ ಪದಾರ್ಥ, ಸ್ವಚ್ಛತೆ ಕಡೆಗೆ ಆರೋಗ್ಯ ಇಲಾಖೆ ಸಿಬ್ಬಂದಿಯವರು 5 ದಿನಗಳವರೆಗೆ ಕಾಳಜಿ ವಹಿಸಲಿದ್ದಾರೆ ಎಂದರು.
ಡಾ.ಸುಮೀತ ಪಾಟೀಲ ಮಾತನಾಡುತ್ತ ವೇದಾಂತ ಜಾತ್ರೆಯಲ್ಲಿ- ಶ್ರೀಮಠದ 17ನೇ ಕೋಣೆಯಲ್ಲಿ ಆರೋಗ್ಯ ತಪಾಸಣೆ ಕೈಗೊಳ್ಳಲಾಗಿದ್ದು, ಅಗತ್ಯ ಓಷಧೋಪಾಚಾರ ಮತ್ತು ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಡಾ.ಸೋಹನಕುಮಾರ ಚವ್ಹಾನ, ಡಾ.ಶಿಲ್ಪಾ ಕೋಲಾರ, ಡಾ.ಸವಿತಾ ಮೂಡಲಗಿ, ಡಾ.ಸಿ.ಸಿ.ಹಿರೇಮಠ, ಡಾ,ಗಜಾನನ ಕುಲಕರ್ಣಿ, ಡಾ.ಸುರೇಶ ಪಾಟೀಲ, ಶೋಭಾ ಮಗದುಮ್, ಸಾಬಣ್ಣ ಕಬಾಡದ, ವಿಠ್ಠಲ ಅರಕೇರಿ, ಭರಮು ಹುಲ್ಲೋಳಿ, ದ್ಯಾಮವ್ವ ಹೊಲೇರ, ಲಕ್ಷ್ಮೀ ಕಾಂಬಳೆ, ಸವಿತಾ ಮಸಾಲಜಿ, ಪ್ರವೀಣ ಹಿರೇಮಠ, ಅವಿನಾಶ ಮಾನೆ, ಸುಖದೇವ ಕದಮ, ಹಾಲಪ್ಪ ಪಾಯಪ್ಪಗೋಳ, ಸರಸ್ವತಿ ಮೇಗಾಡಿ ಮೊದಲಾದ ಆರೋಗ್ಯ ಸಿಬ್ಬಂದಿಯವರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 