ಅಂಜುಮನ್ ಕಮಿಟಿ ಹೊಸಪೇಟೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಅಂಜುಮನ್ ಕಮಿಟಿ ಹೊಸಪೇಟೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ  Free health check-up camp organized by Anjuman Committee Hospet

ವಿಜಯನಗರ12: ಕ್ಷೇತ್ರದಹೊಸಪೇಟೆಯಅಂಜುಮನ್ ಶಾದಿಮಹಲ್‌ಆವರಣದಲ್ಲಿಅಂಜುಮನ್‌ಖಿದ್ಮತೆಇ ಇಸ್ಲಾಂಕಮಿಟಿ ಹೊಸಪೇಟೆ ಹಾಗು ಸಪ್ತಗಿರಿವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾಕೇಂದ್ರ ಹಾಗು ಸಪ್ತಗಿರಿಆಸ್ಪತ್ರೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಮೂತ್ರಪಿಂಡ. ಕಲ್ಲುಹೃದಯರೋಗ.ನರರೋಗ.ಕ್ಯಾನ್ಸರ್‌.ಹಾಗು ಇನ್ನಿತರ ಹಲವಾರುಕಾಯಿಲೆಗಳಉಚಿತತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. 

ಈ ಒಂದು ಉಚಿತ ತಪಾಸಣಾ ಶಿಬಿರದಲ್ಲಿ ಹೊಸಪೇಟೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗು ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ಅಧ್ಯಕ್ಷರಾದ ಹೆಚ್‌.ಎನ್‌.ಮೊಹಮ್ಮದ್‌ಇಮಾಮ್ ನಿಯಾಜಿರವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಹೊಸಪೇಟೆಯ ಅಂಜುಮನ್ ಶಾದಿಮಹಲ್ ಆವರಣದಲ್ಲಿ ಅಂಜುಮನ್‌ಖಿದ್ಮತೆ ಇ ಇಸ್ಲಾಂಕಮಿಟಿ ಹೊಸಪೇಟೆ ಹಾಗು ಸಪ್ತಗಿರಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾಕೇಂದ್ರ ಹಾಗು ಸಪ್ತಗಿರಿಆಸ್ಪತ್ರೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಸತತವಾಗಿ ನಾಲ್ಕನೇ ಬಾರಿಗೆಉಚಿತತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಂಜುಮನ್‌ಖಿದ್ಮತೆಇಸ್ಲಾಂಕಮಿಟಿಯು ಹಲವಾರುಜನಪರ ಕಾರ್ಯಕ್ರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದುಅದರಲ್ಲೂ ವಿಶೇಷವಾಗಿ ಶಿಕ್ಷಣ ಮತ್ತುಆರೋಗ್ಯದ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತೇವೆ.ಇಂದಿನ ಅತ್ಯಾಧುನಿಕಯುಗದಲ್ಲಿಕಡು ಬಡತನದಲ್ಲಿರುವ ದಿನಗೂಲಿ ಕಾರ್ಮಿಕರಿಗೂ, ಹಾಗೂ ಹಣದ ಸಂಪಾದನೆಯ ಹಿಂದೆ ಬಿದ್ದಿರುವ ಬಡವರಿಂದ ಹಿಡಿದು ಶ್ರೀಮಂತರ ವರೆಗೂಆರೋಗ್ಯದ ಬಗ್ಗೆ ಸ್ವತಹ ಕಾಳಜಿ ವಹಿಸುತ್ತಿರುವುದಿಲ್ಲ. ಆರೋಗ್ಯದ ಮಹತ್ವವನ್ನುಅರಿಯದೆ ದಿವ್ಯ ನಿರ್ಲಕ್ಷವನ್ನು ಮಾಡುತ್ತಿರುತ್ತಾರೆ.ನಂತರಆರೋಗ್ಯ ವನ್ನು ಮರಳಿ ಪಡೆಯಲು ಹಣವನ್ನು ವಿಪರೀತವಾಗಿಖರ್ಚು ಮಾಡಬೇಕಾಗುತ್ತದೆ.ಇನ್ನು ಹೆಚ್ಚಿನಚಿಕಿತ್ಸೆಇದ್ದಲ್ಲಿ ಬಿ.ಪಿ.ಎಲ್‌ಕಾರ್ಡ್‌, ಆರೋಗ್ಯಕಾರ್ಡ್‌, ಯಶಸ್ವಿನಿ ಕಾರ್ಡ್‌ಇನ್ನಿತರೆಕಾರ್ಡ್‌ ಗಳಿದ್ದಲ್ಲಿ ಬೆಂಗಳೂರಿನಲ್ಲಿ ಉಚಿತತಪಾಸಣೆ ಮಾಡಲಾಗುವುದುಎಂದರು. ಹಾಗು ಆರೋಗ್ಯವೇ ಮಹಾಭಾಗ್ಯಎನ್ನುವ ನಾಣ್ಣುಡಿಯಂತೆಕೇವಲ ಮುಸ್ಲಿಂ ಜನಾಂಗವಲ್ಲದೇಕ್ಷೇತ್ರದ ಸಮಸ್ತ ನಾಗರೀಕರುಯಾವುದೇಜಾತಿ, ಮತ, ಪಂಥತಾರತಮ್ಯ ಭೇದ ಭಾವಇಲ್ಲದೆಎಲ್ಲರೂ ಸದುಪಯೋಗಪಡಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ಮದ್ಯಾನ್ನದ ವೇಳೆಗೆ 432 ಜನರಜನರನ್ನತಪಾಸಣೆ ಮಾಡಲಾಯಿತು. 

ಇದೇ ಸಂಧರ್ಭದಲ್ಲಿಅಂಜುಮನ್‌ಕಮಿಟಿಯ ಪದಾಧಿಕಾರಿಗಳಾದ ಎಮ್‌.ಫೈರೋಜ್‌ಖಾನ್‌. ಅನ್ಸರ್ ಭಾಷ.ಡಾಽಽ ದುರ್ವೇಶ್ ಮುಯೂದ್ದೀನ್‌ಅವರು ಹಾಗೂ ಸದ್ಯಸರಾದಅಬ್ದುಲ್‌ಖಾದರ್‌ರಫಾಯಿಅವರು ಹಾಗೂ ಸಪ್ತಗಿರಿಆಸ್ಪತ್ರೆಯ ವೈದ್ಯರುಗಳಾದ ಯುರಾಲಾಜಿಸ್ಟ್‌ ಗಳಾದ ಡಾ. ಶುಭೋದಯ, ಸರ್ಜಿಕಲ್‌ಆಂಕಾಲಜಿಸ್ಟ ಗಳಾದ ಶ್ರಿಯಾ ಗೊಲ್ಲಮೊವಿ, ಕಾರ್ಡಿಯಾಲಜಿಸ್ಟ್‌ ಗಳಾದ ಡಾ. ಮೊಹಮ್ಮದ್‌ಜುನೆದ್, ಆರ್ಥೋಪೆಡಿಕ್ಟ್‌ ಗಳಾದ ಡಾ. ಪ್ರತೀಕ್ ಹಾಗು ಅಂಜುಮನ್‌ಆಸ್ಪತ್ರೆಯ ಸಿಬ್ಬಂದಿಗಳು,  ಸಾರ್ವಜನಿಕರು ಹಿರಿಯ ನಾಗರೀಕರುಯುವಕರು ಮಹಿಳೆಯರು ಭಾಗವಹಿಸಿದ್ದರು