ದಿ. 05 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ
Free health check-up camp on 05th
ಲೋಕದರ್ಶನ ವರದಿ
ಕಾಗವಾಡ 02: ತಾಲೂಕಿನ ಶಿರಗುಪ್ಪಿ ಗ್ರಾಮದ ಉಗಾರ ರಸ್ತೆಯಲ್ಲಿರುವ ಶ್ರೀ 1008 ಪಾರ್ಶ್ವನಾಥ ಜೈನ ಭವನದಲ್ಲಿ ರವಿವಾರ ದಿ. 05 ರಂದು ಬೆಳಿಗ್ಗೆ 10 ರಿಂದ ಮ. 2 ರ ವರೆಗೆ ಪಪೂ ಶ್ರೀ 108 ಪ್ರಥಮಾಚಾರ್ಯ ಶಾಂತಿ ಸಾಗರ ಮಹಾರಾಜ ಮತ್ತು ಪಪೂ ಶ್ರೀ 108 ಆಚಾರ್ಯ ಸಮಂತಭದ್ರ ಮಹಾರಾಜರ ಆಶೀರ್ವಾದದೊಂದಿಗೆ ಮಹಾರಾಷ್ಟ್ರದ ಶಿರೋಳ ತಾಲೂಕಿನ ಖಿದ್ರಾಪೂರದ ದಾದಾ ಪಾಯಪ್ಪ ಭೋಮಾಜ ಮತ್ತು ಅಮ್ಮಕ್ಕ ದಾದಾ ಭೋಮಾಜ ಸಾರ್ವಜನಿಕ ಸೇವಾ ಪ್ರತಿಷ್ಠಾನದ ವತಿಯಿಂದ ಒಂದು ದಿನದ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ. ಮಹಾಧವಲ ಭೋಮಾಜ ತಿಳಿಸಿದ್ದಾರೆ.
ಅವರು, ಗುರುವಾರ ದಿ. 02 ರಂದು ಮಾಧ್ಯಮದರೊಂದಿಗೆ ಮಾತನಾಡುತ್ತಿದ್ದರು. ಶಿಬಿರದಲ್ಲಿ ಜನರಲ್ ಸರ್ಜನ್ ಡಾ. ಜಯಧವಲ ಭೋಮಾಜ, ಫ್ಯಾಮಿಲಿ ಫಿಸಿಶಿಯನ್‌ಗಳಾದ ಡಾ. ನೀತಾ ಭೋಮಾಜ, ಡಾ. ಮಹಾಧವಲ ಭೋಮಾಜ, ಡಾ. ವೈಶಾಲಿ ಭೋಮಾಜ, ಮೂತ್ರರೋಗ ತಜ್ಞ ಡಾ. ಅರವಿಂದ ಲಾಂಡೆ, ಸ್ತ್ರೀರೋಗ ತಜ್ಞೆ ಡಾ. ಶೋಭಾ ಲಾಂಡೆ, ನೇತ್ರರೋಗ ತಜ್ಞ ಡಾ. ಶರದ ಭೋಮಾಜ, ದಂತ ವೈದ್ಯೆ ಡಾ. ಪದ್ಮಪ್ರಿಯಾ ಭೋಮಜ, ನೇತ್ರರೋಗ ತಜ್ಞೆ ಡಾ. ಪೂಜಾ ಭೋಮಾಜ, ಜನರಲ್ ಫಿಸಿಶಿಯನ್ ಮತ್ತು ಮಧುಮೇಯ ತಜ್ಞ ಡಾ. ವಿಜಯ ಕುಲಕರ್ಣಿ, ನ್ಯೂರೋ ಸರ್ಜನ್ ಡಾ. ಅರಿಹಂತ ಪಾಟೀಲ, ಹೃದಯ ರೋಗ ತಜ್ಞ ಡಾ. ಯೋಗೇಶ ಜಂಬಗೆ, (ನ್ಯೂರೋ ಫಿಸಿಶಿಯನ್ ಡಾ. ದೀಪಾಂಜಲಿ ಪಾಟೀಲ, ತ್ವಚ್ಛಾ ರೋಗ ತಜ್ಞ ಡಾ. ಪದ್ಮಶ ಪಾಟೀಲ, ಎಲಬು ಮತ್ತು ಕಿಲು ತಜ್ಞ ಡಾ. ವಿಕ್ರಾಂತ್ ಮಗದುಮ್ಮ, ಚಿಕ್ಕ ಮಕ್ಕಳ ತಜ್ಞ ಡಾ. ಸ್ವಪ್ರಿಲ್ ಅಮಾನಾಪುರೆ ಹೀಗೆ ಅನೇಕ ತಜ್ಞ ವೈದ್ಯರು ಶಿಬಿರದಲ್ಲಿ ಸೇವೆ ನೀಡಲಿದ್ದು, ಶಿರಗುಪ್ಪಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಈ ಮೂಲಕ ಅವರು ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 8147529283, 8237106728, 9916178138 ಈ ಮೊಬೈಲ್ ನಂಬರಗಳಿಗೆ ಸಂಪರ್ಕಿಸಲು ಕೋರಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 