ಅಸ್ಕಿ ಗ್ರಾಮದಲ್ಲಿ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

ಅಸ್ಕಿ ಗ್ರಾಮದಲ್ಲಿ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ Free health check-up camp for daily wage laborers in Aski village

ತಾಳಿಕೋಟೆ 25 : ತಾಲ್ಲೂಕಿನ ಅಸ್ಕಿ ಗ್ರಾಮ ಪಂಚಾಯತಿಯಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅನುಸೂಯಾ ಚಲವಾದಿ ಅವರು ಭೇಟಿ ನೀಡಿ ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೆತ್ತಿಕೊಂಡ ಅಸ್ಕಿ ಗ್ರಾಮದ ಹೊಸ ತೋಟ ಹಳ್ಳ ಹೂಳೆತ್ತುವ ಕಾಮಗಾರಿ ವೀಕ್ಷಿಸಿ ಪರೀಶೀಲಿಸಿದರು. ಇದೇ ಸಂದರ್ಭದಲ್ಲಿ ಕಾಮಗಾರಿ ಸ್ಥಳದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ನೆರವಿನೊಂದಿಗೆ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಸಣಾ ಶಿಬಿರದಲ್ಲಿ ಸ್ವತಃ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವದರ ಮೂಲಕ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ‘ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.

ಕೂಲಿ ಕೆಲಸ ನಡೆಯುತ್ತಿರುವಲ್ಲಿಯೇ ಉಚಿತ ಆರೋಗ್ಯಶಿಬಿರ ಆಯೋಜಿಸುವುದರಿಂದ ಬಡಕೂಲಿ ಕಾರ್ಮಿಕರು ತಮ್ಮ ದೈನಂದಿನ ಕೆಲಸಗಳನ್ನು ಮಾಡುತ್ತಲೇ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಲು ಇದು ನೆರವಾಗುತ್ತದೆ ದುಡಿಯುವ ಕೈಗಳಿಗೆ ನರೇಗಾ ಬಲ ತಂದುಕೊಡಲಿದ್ದು, ಮನರೇಗಾದಡಿ ಉದ್ಯೋಗ ಚೀಟಿ ಹೊಂದಿದ ಅರ್ಹ ಫಲಾನುಭವಿಗಳು ಯೋಜನೆಯಡಿ ಕೆಲಸ ಮಾಡಿ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು 

ರೇಗಾ ಸಹಾಯಕ ನಿರ್ದೇಶಕ ಪಿ.ಎಸ್‌.ಕಸನಕ್ಕಿ ಮಾತನಾಡಿ, ನರೇಗಾ ಯೋಜನೆಯಡಿ ವಯಸ್ಸಿನ ಮಿತಿ ಇರುವುದಿಲ್ಲ.18 ವರ್ಷ ಮೇಲ್ಪಟ್ಟ ಯುವಕರಿಂದ ಇಳಿ ವಯಸ್ಸಿನ ವಯೋವೃದ್ಧರು ಕೆಲಸ ಮಾಡಲು ಯೋಜನೆಯಡಿ ಅವಕಾಶವಿರುತ್ತದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನರೇಗಾದಡಿ ಕೆಲಸಕ್ಕೆ ಬರಬೇಕು, ಗಂಡು ಮತ್ತು ಹೆಣ್ಣು 370 ರೂ. ಸಮಾನ ಕೂಲಿ ಪಡೆದುಕೊಳ್ಳಲು ಅವಕಾಶವಿದ್ದು, ಸುಮ್ಮನೆ ಮನೆಯಲ್ಲಿಯೇ ಕುಳಿತು ಕಾಲ ಹರಣ ಮಾಡದೆ ನರೇಗಾದಡಿ ಕೆಲಸ ಮಾಡಿ ಎಂದು ಕಾರ್ಮಿಕರಿಗೆ ಕರೆ ನೀಡಿದರು. ಯೋಜನೆ ನಿಯಮದಂತೆ ಪಾರದರ್ಶಕವಾಗಿ ಕೆಲಸ ಮಾಡಬೇಕು. ಎನ್‌ಎಂಎಂಎಸ್ ತಂತ್ರಾಂಶದಲ್ಲಿ ಫೇಸ್ ಅಥೆಂಟಿಕೇಶನ್ ಕಡ್ಡಾಯವಾಗಿ ಎರಡು ಬಾರಿ ಹಾಜರಾತಿ ತೆಗೆದುಕೊಳ್ಳಬೇಕೆಂದು ತಿಳಿಸಿದರು.  

ಈ ಆರೋಗ್ಯ ಶಿಬರದಲ್ಲಿ ಮದುಮೇಹ , ರಕ್ತದೊತ್ತಡ ತಪಾಸಣೆ ಮಾಡಿ ಸಣ್ಣಪುಟ್ಟ ಕಾಯಿಲೆಗಳಿಗೆ ಓಷದ ವಿತರಣೆ ಮಾಡಲಾಯಿತು. ಕಾಮಗಾರಿಯಲ್ಲಿ ಪಾಲ್ಗೊಂಡಿದ್ದ 93 ಮಹಿಳೆಯರು, 20 ಪುರುಷ ಕೂಲಿಕಾರರು ತಪಾಸಣೆಗೊಳಪಟ್ಟರು. ಸಂದರ್ಭದಲ್ಲಿ ಪಿಡಿಓ ಬಿ.ಎಂ.ಸಾಗರ, ಐಇಸಿ ಸಂಯೋಜಕ ಮಲಕಪ್ಪ, ಸಹಾಯಕ ನಿರ್ದೇಶಕ ಅನ್ನಾನ ಅಹ್ಮದ, ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ನೀರಕ್ಷಣಾ ಅಧಿಕಾರಿ ಭೀಮನೌಡ. ಏವೂರ, ಲ್ಯಾಬ್ ಟೆಕ್ನಿಶಿಯನ್ ಸುಚಿತ್ರ ಪಾಟೀಲ ಕಾಯಕಮಿತ್ರ ಶ್ರೀದೇವಿ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಉಪಸ್ಥಿತರಿದ್ದರು.