ವಿಕಲ ಚೇತನ ಮಕ್ಕಳಿಗೆ ಉಚಿತ ಕ್ಷೌರ ಸೇವೆ
Free haircut service for mentally challenged children
ಯಮಕನಮರಡಿ 09: ಶಿವಶರಣ ಹಡಪದ ಅಪ್ಪಣ್ಣ ಸಮಾಜ ಹಾಗೂ ಯುವಕ ಸಂಘ ಹುಕ್ಕೇರಿ ಇವರ ಆಶ್ರಯದಲ್ಲಿ ಶಿವಶರಣ ಹಡಪದ ಜಯಂತಿ ಪ್ರಯುಕ್ತ ಹಿಡಕಲ್ ಡ್ಯಾಮಿನಲ್ಲಿ ದೂದ್ ನಾನಾ ವಿಕಾಸ ಶಿಕ್ಷಣ ಸಂಸ್ಥೆ ಬುದ್ಧಿ ವಿಕಲಚೇತನ ಮಕ್ಕಳ ವಸತಿ ಯೂಥ್ ಶಾಲೆಯಲ್ಲಿ ಮಂಗಳವಾರ ದಿ. 8/ರಂದು ಬುದ್ಧಿಮಾಂದ್ಯ ಮಕ್ಕಳಿಗೆ ಉಚಿತ ಕ್ಷೌರಿಕ ಸೇವೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಲೇಖಕ ಶಿವಾನಂದ್ ನಾವಿ ಮಾತನಾಡಿ ಶಿವಶರಣರ ಹಡಪದ ಅಪ್ಪಣ್ಣ ಸಮಾಜ ಬಾಂಧವರು ಪ್ರತಿ ವರ್ಷ ವಿಕಲಚೇತನ ಮಕ್ಕಳಿಗೆ ಕ್ಷೌರಿಕ ಸೇವೆ ನೀಡುವುದರ ಮೂಲಕ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಈ ಸಂಘಟನೆಯು ಸಮಾಜದ ಸೇವೆಯು ಅಮೂಲ್ಯವಾಗಿದೆ. 12ನೇ ಶತಮಾನದ ಮಾನವತಾವಾದಿ ಬಸವಣ್ಣನವರ ಅನುಯಾಯಿಗಳಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ. ಸರ್ಕಾರವು ಈ ಸಮಾಜದ ಬಾಂಧವರನ್ನು ಬೆಳಗಲು ಸೌಲಭ್ಯಗಳನ್ನು ನೀಡಬೇಕೆಂದು ಹೇಳಿದರು. ಮುಖ್ಯ ಶಿಕ್ಷಕ ಬಿ ಬಿ ಸಂಕನ್ನವರ್ ಶಿವಶರಣ ಹಡಪದ ಅಪ್ಪಣ್ಣ ಸಂಘದವರು ಮಾಡುತ್ತಿರುವುದು ಅಮೂಲ್ಯ. ಇವರಂತಹ ಸೇವಾ ಮನೋಭಾವ ಎಲ್ಲರಲ್ಲೂ ಮೊದಲು ಮುಂದೆ ಬರಬೇಕು ಎಂದರು.ಅಧ್ಯಕ್ಷತೆಯನ್ನು ಶಿವ ಶರಣ ಹಡಪದ ಅಪ್ಪಣ್ಣ ಸಮಾಜದ ಹಾಗೂ ಯುವಕ ಸಂಘದ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ್ ಕುರ್ಲಿ ವಹಿಸಿದ್ದರು. ವೀರಭದ್ರ ನಾವಿ, ಸಚಿನ್ ನಾವಿ, ಕಿರಣ್ ನನದಿ, ಆಕಾಶ್ ನಾವಿ, ವಿನೋದ್ ಯರನಾಳ, ರವಿ ಕೋರೆ, ಮಾಂತೇಶ್ ಖಾನಾಪುರ್, ವಿಠಲ ನಾವಿ, ಸಂತೋಷ್ ನಾವಿ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರು, ರಮೇಶ್ ನಾವಿ ಹುಕ್ಕೇರಿ ತಾಲೂಕ ಉಪಾಧ್ಯಕ್ಷರು ಹಾಗೂ ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿ ವರ್ಗದವರು ಬುದ್ಧಿಮಾಂದ್ಯ ಮಕ್ಕಳು ಇದ್ದರು. ನಂತರ ಅನ್ನ ಸಂತರೆ್ಣ ಮಾಡಲಾಯಿತು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 