ಉಚಿತ ಕಣ್ಣಿನ ತಪಾಸಣೆ ಹಾಗೂ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ
Free eye examination and health check-up camp launched
ಉಚಿತ ಕಣ್ಣಿನ ತಪಾಸಣೆ ಹಾಗೂ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ
ಉಗರಗೋಳ-17 ಇಂದಿನ ಜೀವನದಲ್ಲಿ ಜಂಜಾಟದ ಮನುಷ್ಯ ಆರೋಗ್ಯದ ಬಗ್ಗೆ ಕಾಳಜಿವಹಿಸದೇ ನಿರ್ಲಕ್ಷವಹಿಸಿದ್ದರಿಂದ ಭಯಂಕರವಾದ ರೋಗಗಳು ಮನುಷ್ಯನಲ್ಲಿ ಸಲಿಸಾಗಿ ಆವರಿಸಿಕೊಳ್ಳುತ್ತಿವೆ ಎಂದು ಯೋಜನಾಧಿಕಾರಿ ಲವನಕುಮಾರ ಹೇಳಿದರು. ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ರಾಮಾರೂಢ ಮಠದಲ್ಲಿ ಗುರುವಾರ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸವದತ್ತಿ ಹಾಗೂ ಎಮ್ ಎಮ್ ಜೋಷಿ ಹಾಗೂ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಉಚಿತ ಕಣ್ಣಿನ ತಪಾಸಣೆ ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು. ಕಲಬೇರಿಕೆ ಆಹಾರವನ್ನು ನಿರಂತರವಾಗಿ ಸೇವಿಸುವದರಿಂದ ಬಿಪಿ, ಸುಗರ, ಕಣ್ಣಿನ ದೃಷ್ಟಿ ಮತ್ತು ಮಾನಸಿಕ ರೋಗಗಳಿಗೆ ಅವ್ಹಾಣ ನೀಡಿದಂತಾಗಿದ್ದು. ಹಿತಮಿತವಾದ ಆಹಾರ ಸೇವನೆ, ವ್ಯಾಯಾಮ ವಾಯುವಿಹಾರ, ಹಾಗೂ ಧೂಮಪಾನದಿಂದ ದೂರ ಉಳಿದು ಆರೋಗ್ಯವಂತರಾಗಬೇಕೆಂದು ಕರೆ ನೀಡಿದರು.
ಉಗರಗೋಳ ಆರೋಗ್ಯ ಕೇಂದ್ರದ ವ್ಯಧ್ಯಾಧಿಕಾರಿ ಡಾ, ಜ್ಯೋತಿ ಬಸರಿ ಮಾತನಾಡಿ, ಪ್ರತಿಯೊಂದು ಗ್ರಾಮಗಳಲ್ಲಿ ರೋಗಿಗಳ ಸಂಖ್ಯೆ, ದಿನದಿಂದ ದಿನಕ್ಕೆ ಹೆಚ್ಚಾಗುತ್ತ ಸಾಗಿದ್ದು, ಇದನ್ನು ತಡೆಯಲು ಇಂಧಿನ ಯುವಕರು ದುಷ್ಠ ಚಟಗಳ ದಾಸರಾಗದೆ ವಿಧ್ಯಾ ಸಂಪತ್ತು ಜೋತೆಗೆ ದೇಹ ಸಂಪತ್ತನ್ನು ಗಳಿಸಿ ದೇಶದ ಆಸ್ತಿಯಾಗಬೇಕೆಂದ ಅವರು ಸಾರ್ವಜನಿಕರು ಈ ಶಿಬಿರದ ಲಾಭ ಪಡೆದುಕೋಳ್ಳುವಂತೆ ಕೋರಿದರು.
ಉಗರಗೋಳ ರಾಮಾರೂಢಮಠದ ಬ್ರಹ್ಮಾರೂಢ ಶ್ರೀಗಳು, ಡಾ, ಶಾನೂರ ದಫೇದಾರ, ಒಕ್ಕೂಟದ ಅಧ್ಯಕ್ಷೆ ನಿಂಗಮ್ಮ ಹಳ್ಳಿ, ಶಂಕ್ರೇಮ್ಮ ಮುದ್ರಗಣಿ, ಎನ್ ಎ ಪ್ರಜೇರ, ಸುಬ್ರಾಯ್ ನಾಯ್ಕ, ಮಮತಾ ವೈದ್ಯ, ನಿರ್ಮಲಾ ಕಳಸನಗೌಡರ, ಪೂಜಾ ಸೋಮನ್ನವರ, ಅಶ್ವೀನಿ ಬಾವಿಕಟ್ಟಿ, ಗಂಗಮ್ಮ ಮಡಿವಾಳರ, ಶೀಲ್ಪಾ ಕುರಿ, ನೀಲಮ್ಮ ಜ್ಯೋತೇನ್ನವರ, ಸುಶ್ಮೀತಾ ನರಗುಂದ, ಮಡಿವಾಳಪ್ಪ ತೇಗೂರ ಭಾಗ್ಯ ಹನಶಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 