ಪಂಚಮಸಾಲಿ ಸಮಾಜದಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ

ಪಂಚಮಸಾಲಿ ಸಮಾಜದಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ Free eye check-up camp by Panchamasali Samaj

ದಾವಣಗೆರೆ 17: ದಿ. 17ರಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ "ದಾವಣಗೆರೆ ಜಿಲ್ಲಾ ಘಟಕ  ಮತ್ತು ನಗರ ಮಹಿಳಾ ಘಟಕ"ಗಳ ನೇತೃತ್ವದಲ್ಲಿ ಸಮಾಜದ ಎಲ್ಲಾ ಘಟಕಗಳು ಮತ್ತು "ಶ್ರೀ ದಿವ್ಯಾ ಆಪ್ಟಿಕಲ್ಸ್‌," ಹಾಗೂ ಡಾಽ ಅಗರ್ ವಾಲ್ ಕಣ್ಣಿನ ಆಸ್ಪತ್ರೆಯ ಇವರ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಪಂಚಮಸಾಲಿ ಸಮಾಜದ ಕಛೇರಿಯಲ್ಲಿ ಏರಿ​‍್ಡಸಲಾಗಿತ್ತು. 

 ಈ ಕಾರ್ಯಕ್ರಮದ ಉದ್ಘಾಟನೆಯನ್ನು ದಾವಣಗೆರೆ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಎಂ ದೊಡ್ಡಪ್ಪನವರು ಉದ್ಘಾಟಿಸಿದರು.  ಈ ಸಂದರ್ಭದಲ್ಲಿ ವಧುವರ ಮಾಹಿತಿ ಅಧ್ಯಕ್ಷರಾದ ಮಾಸೂರು ಮಹೇಶ್ವರ​‍್ಪನವರು ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಸುಷ್ಮಾ ಪಾಟೀಲ್ ರವರು ಹಾಗೂ ನಗರ ಮಹಿಳಾ ಘಟಕದ ಅಧ್ಯಕ್ಷರಾದ ವೀಣಾ ನಟರಾಜ್ ಬೆಳ್ಳೂಡಿರವರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೀನಾ ಪ್ರಸಾದ್ ಅಣಪೂರ್, ನಗರ ಮಹಿಳಾ ಘಟಕ ಕಾರ್ಯದರ್ಶಿ ಪಾರ್ವತಿ ಶಿವಕುಮಾರ್ ಮತ್ತಿಹಳ್ಳಿ, ಶೈಲಜಾ ಪಾಲಾಕ್ಷಪ್ಪ, ದಾವಣಗೆರೆ ತಾಲೂಕ ಅಧ್ಯಕ್ಷರು ಎಸ್ ಮಲ್ಲಿನಾಥ್, ತಾಲೂಕ ಕಾರ್ಯದರ್ಶಿ ಮಂಜುನಾಥ್ ಪುರವಂತರ, ಕುಮಾರ್ ಹುಂಬಿ ಶ್ರೀಧರ ಸಣ್ಣಪ್ಪನವರ್, ಬಂಕಾಪುರ ಶಿವಣ್ಣನವರು, ಉಮಾ ಸೋಮಶೇಖರ್, ವಿನುತಾ ಸುರೇಶ ಮತ್ತಿಹಳ್ಳಿ, ಡಾ.ಅಗರ್ ವಾಲ್ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಗಳಾದ ಮಂಜುನಾಥ್ ಅವರು ಮತ್ತು ಹೆಚ್‌. ಪಿ. ಪೂಜಾ,  ವಿ. ರೇಖಾ, ಮಂಜುನಾಥ್,  ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಜನರಿಗೆ ಕಣ್ಣಿನ ತಪಾಸಣೆ ಮಾಡಲಾಯಿತು. ಈ ಕಾರ್ಯಕ್ರಮದ ಸಂಯೋಜಕರು ದಿವ್ಯ ಅಪ್ಟಿಕಲ್ಸ್‌, ಪಿ.ಜೆ. ಬಡಾವಣೆ, 8ನೇ ಮೇನ್ ರೋಡ್, ದಾವಣಗೆರೆ.