ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ
Free eye check-up and surgery camp
ಲೋಕದರ್ಶನ ವರದಿ
ಸವಣೂರ 05 : ಆಧುನಿಕ ತಂತ್ರಜ್ಞಾನ ಉಪಕರಣಗಳ ಬಳಕೆಯ ಈ ಅವಧಿಯಲ್ಲಿ ಸಕಾಲಕ್ಕೆ ಕಣ್ಣಿನ ತಪಾಸಣೆ ಮಾಡುವುದು ಅಗತ್ಯವಿದೆ ಎಂದು ಶಿವಮೊಗ್ಗ ಶಂಕರ ಆಸ್ಪತ್ರೆಯ ಡಾ.ಸಿದ್ದರಾಮೇಶ ಅವರು ಹೇಳಿದರು.
ತಾಲೂಕಿನ ಯಲವಿಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶ್ರೀ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್, ಶಂಕರ ಕಣ್ಣಿನ ಆಸ್ಪತ್ರೆ, ಶಿವಮೊಗ್ಗ. ಪ್ರಾಥಮಿಕ ಆರೋಗ್ಯ ಕೇಂದ್ರ, ಯಲವಿಗಿ, ಅಮ್ಮಾ ಸಂಸ್ಥೆ(ರಿ) ಹಿರೇಮುಗದೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾವೇರಿ. ಜಿಲ್ಲಾ ಅಂಧತ್ವ ನಿಯಂತ್ರಣಾ ಕಾರ್ಯಕ್ರಮ, ತಾಲೂಕು ವೈಧ್ಯಾಧಿಕಾರಿಗಳ ಕಛೇರಿ, ಸವಣೂರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಅವರು ಕಣ್ಣಿನ ಮಹತ್ವದ ಕುರಿತು ಮಾತನಾಡಿದರು.
ಮನುಷ್ಯನಿಗೆ ಕಣ್ಣು ಬಹಳ ಮುಖ್ಯ. ಆಧುನಿಕ ಯುಗದ ಭರಾಟೆಯಲ್ಲಿ ನಾವೆಲ್ಲರೂ ತಂತ್ರಜ್ಞಾನದ ಉಪಕರಣಗಳನ್ನು ನಿರಂತರವಾಗಿ ಉಪಯೋಗಿಸುತ್ತೇವೆ. ಪೋನ್ ಬಳಕೆಯಿಂದ ಹೆಚ್ಚಾಗುತ್ತಿದೆ. ಕಣ್ಣಿನ ಮೇಲೆ ಪರಿಣಾಮವನ್ನು ಕಾಣಬಹುದಾಗಿದೆ.ಕಣ್ಣಿನ ಸಮಸ್ಯೆ ಕಂಡು ಬಂದರೆ ತಕ್ಷಣವೇ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಕೊಳ್ಳುವ ಕೆಲಸ ಮಾಡಿರಿ ಎಂದರು.
ಅಮ್ಮಾ ಸಂಸ್ಥೆ(ರಿ) ಮುಖ್ಯಸ್ಥರಾದ ನಿಂಗಪ್ಪ ಎಂ ಆರೇರ ಮಾತನಾಡಿ ತಾಲ್ಲೂಕಿನಲ್ಲಿ ನಿರಂತರವಾಗಿ ಉಚಿತ ಕಣ್ಣಿನ ತಪಾಸಣಾ ಶಿಬಿರಗಳು ಜರುಗುತ್ತಿವೆ.ಕಣ್ಣಿನ ಸಮಸ್ಯೆ ಏನಾದರೂ ಉಂಟಾದಲ್ಲಿ ಹಿರಿಯರು-ಕಿರಿಯರು ಇಂತಹ ಉಚಿತ ತಪಾಸಣಾ ಶಿಬಿರಗಳನ್ನು ಸದುಪಯೋಗ ಪಡಿಸಿಕೊಳ್ಳುವಂತಾಗಲಿ ಎಂದು ಕೋರಿದರು.
ಈ ಸಂದರ್ಭದಲ್ಲಿ ತಾಲ್ಲೂಕ ಆಸ್ಪತ್ರೆಯ ನೇತ್ರಾಧಿಕಾರಿಗಳಾದ ಮಹಾದೇವಿ ಬನ್ನಿಮಟ್ಟಿ ಮುಖಂಡರಾದ ರುದ್ರಮುನಿ ಹಿರೇಮಠ,ನಿಂಗಪ್ಪ ಕಮ್ಮಾರ,ಮಹಾಂತೇಶ ಆಲದಕಟ್ಟಿ,ಶಂಕರ ಆಸ್ಪತ್ರೆಯ ಮನು ಬಡಿಗೇರ, ಸಚಿನ, ಪರಮೇಶ್ವರಿ,ಸ್ವರ್ಣಾ ,ಐಶ್ವರ್ಯ, ಪೂಜಾ,ರಾಕೇಶ, ಅಮೃತ, ಯಲವಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾರ್ಯವೃಂದದವರು,ಆಶಾ ಕಾರ್ಯಕರ್ತೆಯರು ಹಾಗೂ ತಪಾಸಣೆಗೆ ಆಗಮಿಸಿದ ಹಿರಿಯರು ಪಾಲ್ಗೊಂಡಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 