ಫೇಸ್‌ಬುಕ್ ಫ್ರೆಂಡ್ಸ್‌ ತಂಡದಿಂದ ಉಚಿತ ಶೈಕ್ಷಣಿಕ ಸಾಮಗ್ರಿ ವಿತರಣೆ

ಫೇಸ್‌ಬುಕ್ ಫ್ರೆಂಡ್ಸ್‌ ತಂಡದಿಂದ ಉಚಿತ ಶೈಕ್ಷಣಿಕ ಸಾಮಗ್ರಿ ವಿತರಣೆ  Free educational materials distributed by Facebook Friends team

ಬೆಳಗಾವಿ 07: ಇಲ್ಲಿನ ಫೇಸ್‌ಬುಕ್ ಫ್ರೆಂಡ್ಸ್‌ ತಂಡದಿಂದ ಕಂಟೋನ್ಮೆಂಟ್ ಬೋರ್ಡ್‌ ಶಾಲೆಗಳ ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು.  ಬನಶಂಕರಿ ಸ್ಟೇಷನರಿಯ ಮಾಲೀಕ ಜಿತೇಂದ್ರ ಲೋಹಾರ್ ಹಾಗೂ ನಿವೃತ್ತ ಯೋಧ ವಿಕ್ಟರ್ ಫ್ರಾನ್ಸಿಸ್ ಅವರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ತಲಾ 150 ಬಳಪದ ಪಲಕ, ಎರಡು ಗೆರೆಯ 150 ನೋಟ್‌ಬುಕ್‌ಗಳು ಹಾಗೂ ಎರೇಸರ್ ಸಹಿತ ಪೆನ್ಸಿಲ್‌ಗಳನ್ನು ವಿತರಿಸುವ ಮೂಲಕ ಅವರ ಕಲಿಕೆಗೆ ಪ್ರೋತ್ಸಾಹ ನೀಡಲಾಯಿತು.  

ಕಂಟೋನ್ಮೆಂಟ್ ಬೋರ್ಡ್‌ ಉರ್ದು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಅಂಜುಮ್ ಕೌಸರ್ ಚೌಧರಿ, ಮರಾಠಿ ಶಾಲೆಯ ಪ್ರಶಾಂತ್ ಬಿರ್ಜೆ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಯ ಖಾದರ್ ಅಮರಾವತಿ ಅವರು ಉಪಸ್ಥಿತರಿದ್ದು ತಂಡದ ಸೇವೆಯನ್ನು ಶ್ಲಾಘಿಸಿದರು.  ಕಂಟೋನ್ಮೆಂಟ್ ಬೋರ್ಡ್‌ ಶಾಲೆಗಳ ಬ್ರ್ಯಾಂಡ್ ಅಂಬಾಸಿಡರ್ ಸಂತೋಷ್ ಧರೇಕರ್ ಅವರು ಮಾತನಾಡಿ, ಚಿಕ್ಕ ಚಿಕ್ಕ ನೆರವು ಕೂಡ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಮಕ್ಕಳ ಶಿಕ್ಷಣಕ್ಕಾಗಿ ಉದಾರವಾಗಿ ದೇಣಿಗೆ ನೀಡಿದ ಎಲ್ಲಾ ದಾನಿಗಳಿಗೆ ಮತ್ತು ಬೆಂಬಲಿಗರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.