ರೈತರ ಸಬಲೀಕರಣದ ಉದ್ದೇಶಕ್ಕಾಗಿ ಉಚಿತ ಡ್ರೋನ್ ಸೇವೆ : ಭರತ ಬೊಮ್ಮಾಯಿ
Free drone service for the purpose of farmer empowerment: Bharat Bommai
ಶಿಗ್ಗಾವಿ 01 : ಕ್ಷೇತ್ರದ ಸಣ್ಣ ರೈತರ ಸಬಲೀಕರಣದ ಉದ್ದೇಶದಿಂದ ಬೆಳೆಗಳಿಗೆ ರಾಸಾಯನಿಕ ಹಾಗೂ ಇತರ ಸಿಂಪಡಣೆಗಾಗಿ ಉಚಿತವಾಗಿ ಡ್ರೋನ್ ಸೇವೆ ಒದಗಿಸಿ, ಕಾರ್ಮಿಕರ ಕೊರತೆ ನೀಗಿಸಲಾಗುತ್ತಿದೆ ಎಂದು ಬಿಜೆಪಿ ಯುವ ಮುಖಂಡ ಭರತ ಬೊಮ್ಮಾಯಿ ಹೇಳಿದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸೇರಿದಂತೆ ಹುಲಿಕಟ್ಟಿ ಗ್ರಾಮದ ಗಂಗಾಧರ ಗಡ್ಡೆಯವರ ಹೊಲದಲ್ಲಿ ಆಯೋಜಿಸಿದ್ದ ಉಚಿತ ಡ್ರೋನ್ ಸೇವೆ ಒದಗಿಸಿ ಮಾತನಾಡಿದ ಅವರು, ಇತ್ತೀಚೆಗೆ ಕೃಷಿ ಚಟುವಟಿಕೆಗೆ ಕಾರ್ಮಿಕರ ಕೊರತೆ ಉಂಟಾಗುತ್ತಿದೆ. ಹೀಗಾಗಿ, ರೈತರ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ.
ಆದ್ದರಿಂದ ನಿಟ್ಟಿನಲ್ಲಿ ರೈತರಿಗೆ ನೆರವಾಗುವ ಉಚಿತವಾಗಿ ಡ್ರೋನ್ ಒದಗಿಸಿ. ಬೆಳೆಗಳಿಗೆ ಕೀಟನಾಶಕ ಸೇರಿದಂತೆ ಇನ್ನಿತರ ಓಷಧ ಸಿಂಪಡಣೆಗೆ ವ್ಯವಸ್ಥೆ ಮಾಡಲಾಗಿದೆ. ಆಸಕ್ತ ರೈತರು ನಮ್ಮ ಕಚೇರಿಯಲ್ಲಿ ಹೆಸರು ನೋಂದಾಯಿಸಿ, ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಸಿ. ಪಾಟೀಲ, ಚನ್ನಮ್ಮ ಬೊಮ್ಮಾಯಿ, ಶೋಭಾ ನಿಸ್ವೀಮಗೌಡ್ರ, ವಿಶ್ವನಾಥ ಹರವಿ,ನವೀನ ಸವಣೂರ, ಕಾಶಿನಾಥ ಕಳ್ಳಿಮನಿ, ಗಂಗಾಧರ ಗಡ್ಡೆ, ಉಮೇಶ ಅಂಗಡಿ, ರೇಣುಕನಗೌಡ ಪಾಟೀಲ, ಮಾಳಪ್ಪ ಗಡ್ಡೆ, ಡಾ.ಮಲ್ಲೇಶಪ್ಪ ಹರಿಜನ, ಮಾಂತೇಶ ಬಾವಿಕಟ್ಟಿ, ಸುರೇಶ ಮುರಾರಿ, ನಿಂಗನಗೌಡ ಬನ್ನೂರ, ಮಂಜಪ್ಪ ಸೂರಣ್ಣವರ, ರಾಜಣ್ಣ ಕುಲಕರ್ಣಿ, ಚಿದಾನಂದ, ಸಿದ್ದನಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 