ರೈತರಿಗೆ ಉಚಿತವಾಗಿ ಮೇವಿನ ಬೀಜ ವಿತರಣೆ
Free distribution of fodder seeds to farmers
ರಾಣಿಬೆನ್ನೂರ 2: ರೈತರು ಹುಲ್ಲಿನ ಬಿಜ ಬಿತ್ತಲೆ ಮಾಡಿ ಹಸಿರು ಮೇವು ಬೆಳೆದು ಹಾಲಿನ ಇಳುವರಿ ಹೆಚ್ಚಿಸಿಕೊಳ್ಳಬೇಕು ಇದರಿಂದ ರೈತರ ಆದಾಯ ಹೆಚ್ಚಾಗಲಿದೆ ಎಂದು ಶಾಸಕ ಪ್ರಕಾಶ ಕೊಳವಾಡ ಹೇಳಿದರು.
ತಾಲೂಕಿನ ಹಲಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಜಿಲ್ಲಾ ಸಹಕಾರಿ ಸಂಘದ ಒಕ್ಕೂಟದ ವತಿಯಿಂದ ರೈತರಿಗೆ ಎನ್‌ಎಲ್‌ಎಂ ಯೋಜನೆ ಅಡಿ ಉಚಿತವಾಗಿ ಮೇವಿನ ಬೀಜ ವಿತರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ 450 ರೈತರಿಗೆ 300 ಕ್ವಿಂಟಲ್ ಮೆಕ್ಕೆಜೋಳ ಮೇವಿನ ಬೀಜಗಳನ್ನು ಉಚಿತವಾಗಿ ವಿತರಿಸಲಾಗುವುದು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ವೇಮಲ್ ಅಧ್ಯಕ್ಷ ಮಂಜುನಗೌಡ ಪಾಟೀಲ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ ಕಡೂರ, ಅಮೂಲ್ ವ್ಯವಸ್ಥಾಪಕ ಡಾಽ ಬಸನಗೌಡ, ಮಂಜಪ್ಪ ಕನ್ನಾಳ, ಸಿದ್ದನಗೌಡ ಕಡೂರ, ರಮೇಶ ಕರಬಸಳ್ಳವರ, ಸೋಮಪ್ಪ ಮುದ್ದಪ್ಪನವರ, ಕೊಟ್ರ್ಪ ಕನ್ನಪ್ಪನವರ, ಚನ್ನಬಸಪ್ಪ ಬಾತಿ, ಹೊನ್ನಪ್ಪ ಕಡಕೇರಿ, ಬಸವರಾಜ ಹಾದಿಮನಿ, ಸಿದ್ದಪ್ಪ ಹಳೆಮನೆ, ಸುರೇಶ ಕನ್ನಪ್ಪನವರ, ಶಿವರಾಜ ಹಾದಿಮನಿ, ಸೋಮನಗೌಡ ಕಡೂರ, ಮರಳಸಿದ್ದಪ್ಪ ಕಡೂರ, ಬಸವರಾಜ ಕಡೂರ, ಸಂಜೀವ್ ಕನವಳ್ಳಿ ಸೇರಿದಂತೆ ಇತರರು ಇದ್ದರು
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 