ದಿ. 20ರಂದು ಉಚಿತ ಗುದಗತ ರೋಗಗಳ ತಪಾಸಣೆ ಶಿಬಿರ
Free disease screening camp on the 20th
ಚಿಕ್ಕೋಡಿ 18: ಕೆ.ಎಲ್.ಇ ಸಂಸ್ಥೆಯ ಆಯುರ್ವೇದ ಆಸ್ಪತ್ರೆ, ಬಸವ ಸರ್ಕಲ್ ಚಿಕ್ಕೋಡಿ ಇವರ ವತಿಯಿಂದ ಗುದಗತ ರೋಗಗಳ ಉಚಿತ ತಪಾಸಣೆ ಶಿಬಿರವನ್ನು ದಿ. 20-07-2025 ರಂದು ಮುಂಜಾನೆ 09:00 ರಿಂದ ಸಂಜೆ 5:00ರವರೆಗೆ ಏರಿ್ಡಸಲಾಗಿದೆ.
ಈ ಶಿಬಿರದಲ್ಲಿ ಮೂಲವ್ಯಾಧಿ (ಪೈಲ್ಸ್), ಭಗಂದರ (ಫಿಸ್ತುಲಾ), ಫಿಶರ, ಕುರು, ಪೈಲೋನೈಡಲ್ ಸೈನಸ್ (ನಾಡಿ ವೃಣ), ಗುದನಾಳದ ಸರಿಕೆ (ಹಿಗ್ಗುವಿಕೆ), ಗುದದ್ವಾರದ ಗಡ್ಡೆಗಳು, ಮಲಬದ್ಧತೆ, ಮಲ ವಿಸರ್ಜನೆ ಸಮಯದಲ್ಲಿ ರಕ್ತಸ್ರಾವ, ಉರಿ, ನೋವು ಸಮಸ್ಯೆಗಳಿಗೆ ಆಯುರ್ವೇದ ವೈದ್ಯರಿಂದ ಉಚಿತ ತಪಾಸಣೆ ಮಾಡಲಾಗುವುದು. ವಿಶಿಷ್ಟ ಆಯುರ್ವೇದ ಚಿಕಿತ್ಸೆಗಳಾದ ಕ್ಷಾರಕರ್ಮ, ಕ್ಷಾರಸೂತ್ರ, ಶಸ್ತ್ರಚಿಕಿತ್ಸೆ ಮತ್ತು ಓಷಧಿಗಳಿಂದ ರಿಯಾಯತಿ ದರದಲ್ಲಿ ಚಿಕಿತ್ಸೆ ಮಾಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಕಿರಣ ಮುತ್ನಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅಧಿಕ ಮಾಹಿತಿಗಾಗಿ ಸಂಪರ್ಕಿಸಿ 08338275100.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 