ಮಕ್ಕಳಿಗೆ ಉಚಿತ ಉಡುಪು ವಿತರಣೆ ಕಾರ್ಯಕ್ರಮ

ಮಕ್ಕಳಿಗೆ ಉಚಿತ ಉಡುಪು ವಿತರಣೆ ಕಾರ್ಯಕ್ರಮ Free clothing distribution program for children

ಲೋಕದರ್ಶನ ವರದಿ 

ಧಾರವಾಡ 17 : ಅವಸರ ಫೌಂಡೇಶನ್ ಮತ್ತು ಎಫ್‌.ಪಿ.ಎ.ಐ ಸಹಯೋಗದಲ್ಲಿ 0 ದಿಂದ 3 ವರ್ಷದ ಮಕ್ಕಳಿಗೆ ಉಚಿತ ಉಡುಪು ವಿತರಣೆ ಕಾರ್ಯಕ್ರಮ ಜಲ್ಲಾ ಆಸ್ಪತ್ರೆ, ಧಾರವಾಡದಲ್ಲಿ ಜರುಗಿತ್ತು. ಈ ಸಂಧರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಸಂಗಪ್ಪ ಗಾಬಿ ಯವರು ಮಕ್ಕಳಿಗೆ ಉಚಿತ ಉಡುಪು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಯೋಜನೆಯ ಮೂಲಕ ಬಡ ಮಕ್ಕಳಿಗೆ ಅನುಕೂಲವಾಗಲಿದೆ, ಈ ಯೋಜನೆಯಲ್ಲಿ ಉಚಿತ ಉಡುಪು ವಿತರಣೆಗೆ ಧನ ಸಹಾಯ ಮಾಡುವ ಅವಸರ ಫೌಂಡೇಶನ್ ಅವರ ಕಾರ್ಯ ಶ್ಲಾಘನೀಯವಾಗಿದೆ. ಯೋಗ್ಯ ಪಲಾನುಭವಿಗಳಿಗೆ ಇದನ್ನು ತಲುಪಿಸಲು ರಂದು ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಶಿಯೇಶನ್ ಆಫ್ ಇಂಡಿಯಾ, ಧಾರವಾಡ ಶಾಖೆಯು ಉತ್ತಮ ಕಾರ್ಯ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.