ಮೇ 11 ರಿಂದ ಉಸಿರಾಟ ಸಮಸ್ಯೆ ಕುರಿತು ಉಚಿತ ತಪಾಸಣೆ ಶಿಬಿರ

ಮೇ 11 ರಿಂದ ಉಸಿರಾಟ ಸಮಸ್ಯೆ ಕುರಿತು ಉಚಿತ ತಪಾಸಣೆ ಶಿಬಿರ Free check-up camp for respiratory problems from May 11

ವಿಜಯಪುರ 06: ನಗರದ ಬಿ.ಎಲ್‌.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಕಾಯಚಿಕಿತ್ಸೆ ವಿಭಾಗದ ವತಿಯಿಂದ ಅಲರ್ಜಿ, ಅಸ್ತಮಾ, ಕೆಮ್ಮು, ದಮ್ಮು ಹಾಗೂ ದೀರ್ಘಕಾಲದ ಉಸಿರಾಟ ಇಂತಹ ಸಮಸ್ಯೆ ಕುರಿತು ಉಚಿತ ತಪಾಸಣೆ ಶಿಬಿರ ಮೇ 11 ರಿಂದ ಮೇ 14ರ ವರೆಗೆ ನಡೆಯಲಿದೆ. 

ಸೋಮವಾರದಿಂದ ಗುರವಾರದ ವರೆಗೆ  ನಾಲ್ಕು ದಿನ ನಡೆಯಲಿರುವ ಈ ಶಿಬಿರವನ್ನು ಸಮಸ್ಯೆ ಎದುರಿಸುತ್ತಿರುವ ಸಾರ್ವಜನಿಕರು ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಬಿ.ಎಲ್‌.ಡಿ.ಇ ಆಯುರ್ವೇದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ- 9513397413 ಸಂಪರ್ಕಿಸಬಹುದಾಗಿದೆ.ಧನ್ಯವಾದಗಳು.