ಜೆಎಚ್ಕೆ ಪಾಟೀಲ್ ಸೇವಾ ತಂಡದಿಂದ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ

ಜೆಎಚ್ಕೆ ಪಾಟೀಲ್ ಸೇವಾ ತಂಡದಿಂದ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ  Free cataract surgery by the JHK Patil Service Team

ಗದಗ, ಜು.9: ತಾಲೂಕಿನ ಸಮಸ್ತ ನಾಗರಿಕರ ಸಾಮಾಜಿಕ, ಆರ್ಥಿಕ ಹಾಗೂ ವೈದ್ಯಕೀಯ ನೆರವಿಗಾಗಿ ಕಾರ್ಯನಿರ್ವಹಿಸುತ್ತಿರುವ ಜೆಎಚ್ಕೆ ಪಾಟೀಲ್ ಸೇವಾ ತಂಡವು ಮತ್ತೊಮ್ಮೆ ಮಾನವೀಯ ಸೇವೆಯ ಮೂಲಕ ಗಮನ ಸೆಳೆದಿದೆ.  

ಆರ್ಥಿಕವಾಗಿ ದುರ್ಬಲರಾಗಿದ್ದು, ಸೂಕ್ತ ಚಿಕಿತ್ಸೆ ದೊರೆಯದೆ ಕಣ್ಣಿನ ಪೊರೆ ಸಮಸ್ಯೆಯಿಂದ ಬಳಲುತ್ತಿದ್ದ ಗಜೇಂದ್ರಗಡ ನಿವಾಸಿ ಅಮರೇಶ್ ಬಿಜ್ಜಳ ಅವರಿಗೆ ಜೆಎಚ್ಕೆ ಪಾಟೀಲ್ ಸೇವಾ ತಂಡದ ಸಹಯೋಗದಲ್ಲಿ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಯಿತು.  

ಕೆ.ಜೆ. ಪಾಟೀಲ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಾನ್ಯ ನಿರ್ದೇಶಕ ಬಸವರಾಜ ಬೊಮ್ಮನಹಳ್ಳಿ ಅವರ ಮಾರ್ಗದರ್ಶನದಲ್ಲಿ ಜುಲೈ 2ರಂದು ಈ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಸೇವಾ ತಂಡದ ಸದಸ್ಯ ಕ್ಯಾಪ್ಟನ್ ನಾಗರಾಜ ಯರಗುಡಿ ಅವರ ಸೇವಾ ಮನೋಭಾವ ಹಾಗೂ ವಿಶೇಷ ಪ್ರಯತ್ನದಿಂದ ಚಿಕಿತ್ಸೆ ಯಶಸ್ವಿಯಾಯಿತು.  

ಶಸ್ತ್ರಚಿಕಿತ್ಸೆಯಲ್ಲಿ ಕೆ.ಜೆ.ಪಿ. ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರ ತಂಡ, ಕ್ಯಾಪ್ಟನ್ ಬಸವರಾಜ ಚಲವಾದಿ, ವೆಂಕಟೇಶ್ ಕುರ್ತಕೋಟಿ ಹಾಗೂ ನಿಸಾರ್ ಅಹಮದ್ ಅವರು ಸಹಕರಿಸಿದರು. ಚಿಕಿತ್ಸೆ ಪಡೆದ ಕುಟುಂಬದ ಸದಸ್ಯರು ಸೇವಾ ತಂಡದ ಕಾರ್ಯವನ್ನು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು.