ದಿ. 24 ರಂದು ಆಪರೇಶನ್ ಇಲ್ಲದೇ ನೋವು ನಿವಾರಣೆ ಉಚಿತ ಶಿಬಿರ: ಡಾ. ಎಸ್.ಎ. ತಿಪ್ಪಣ್ಣವರ
Free camp for pain relief without surgery on the 24th: Dr. S.A. Thippannavara
ಲೋಕದರ್ಶನ ವರದಿ
ಕಾಗವಾಡ 22: ಮಹಾರಾಷ್ಟ್ರದ ಸಾಂಗಲಿ ನಗರದ ಅಕ್ಸಾನ್ ಪೆನ್ ಸೆಂಟರ್ ಇಂಡಿಯಾದ ವಾರ್ಷಿಕೋತ್ಸವದ ನಿಮಿತ್ಯ ಡಿ. 24 ಮತ್ತು ಡಿ. 25 ರಂದು ಎರಡು ದಿನಗಳ ಕಾಲ ಆಪರೇಶನ್‌ನ ಅವಶ್ಯಕತೆ ಇಲ್ಲದೇ ನೋವು ನಿವಾರಣೆ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ. ಎಸ್.ಎ. ತಿಪ್ಪಣ್ಣವರ ತಿಳಿಸಿದ್ದಾರೆ.
ಅವರು, ಸೋಮವಾರ ದಿ. 22 ರಂದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಅಕ್ಸಾನ್ ಪೆನ್ ಸೆಂಟರ್ ಇಂಡಿಯಾದ ಮುಖಾಂತರ ಕರ್ನಾಟಕ ಮತ್ತು ಮಹಾರಾಷ್ಟ್ರದ ಸಾವಿರಾರು ರೋಗಿಗಳಿಗೆ ನೋವು ನಿವಾರಣೆ ಚಿಕಿತ್ಸೆ ನೀಡುವ ಮೂಲಕ ನೋವು ರಹಿತ ಜೀವನ ನಡೆಸಲು ಸಾಧ್ಯವಾಗಿಸಿದ್ದೇವೆ.
ಈಗ 4ನೇ ವಾರ್ಷಿಕೋತ್ಸವ ನಿಮಿತ್ಯ ಉಚಿತ ಶಿಬಿರವನ್ನು ಹಮ್ಮಿಕೊಂಡಿದ್ದು, ಶಿಬಿರದಲ್ಲಿ ಮೊಣಕಾಲು, ಕೀಲು ನೋವು, ಊತ, ಒಳಪೆಟ್ಟು, ಕುತ್ತಿಗೆ, ಸೊಂಟ, ಬೆನ್ನುನೋವು, ಹೆಗಲು, ಮೊಣಕೈ-ಕೀಲುನೋವು, ಸ್ಲೀಪ್ ಡಿಸ್ಕ್, ಸಿಯಾಟಿಕ್ ನೋವು, ಸಂಧಿವಾತ, ಮಧುಮೇಹ, ನಾಗಿನ್ ನೋವು, ನರ್ವ್ಹ ಪೆನ್, ಜುಮ್ಮೆನಿಸುವಿಕೆ, ಊರಿಯುವಿಕೆ, ಲಿಗಾಮೆಂಟ್, ಸ್ನಾಯುಗಳ ಗಾಯ, ಕ್ಯಾನ್ಸರ್, ನಾನ್ ಕ್ಯಾನ್ಸರ್ ಪೆನ್, ದುರ್ಬಲ ಮೂಳೆ, (ಕ್ಯಾಲ್ಸಿಯಂ ಬಿಎಂಡಿ) ಸೇರಿದಂತೆ ದೀರ್ಘಕಾಲದ ನೋವು ಮತ್ತು ಇತರ ನೋವುಗಳಿಗೆ ಉಚಿತ ತಪಾಸಣೆ ನಡೆಸಲಾಗುವುದು. ಜೊತೆಗೆ ಶಿಬಿರದಲ್ಲಿ ರಿಯಾಯಿತಿ ದರದಲ್ಲಿ ಸೋನೋಗ್ರಾಫಿ ಮತ್ತು ರಕ್ತ ಪರೀಕ್ಷೆಗಳು ಲಭ್ಯವಿದೆ. ಶಿಬಿರದಲ್ಲಿ ಪಾಲ್ಗೊಳ್ಳಲು ಹೆಸರು ನೊಂದಣಿ ಅವಶ್ಯಕವಾಗಿದೆ ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9823407171, 8329222574
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 