ಉಚಿತ ಕೃತಕ ಕೈ ಮತ್ತು ಕಾಲು ಜೋಡಣಾ ಶಿಬಿರ ಆಯೋಜನೆ ಮಾಡಲಾಗಿದೆ
Free artificial arm and leg fitting camp organized
ಲೋಕದರ್ಶನ ವರದಿ
ಹಾವೇರಿ 06 :ಜಿಲ್ಲೆಯ ವಿಕಲಚೇತನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬೃಹತ್ ಉಚಿತ ಕೃತಕ ಕೈ ಮತ್ತು ಕಾಲು ಜೋಡಣಾ ಶಿಬಿರ ಆಯೋಜನೆ ಮಾಡಲಾಗಿದೆ.ಅವಶ್ಯಕವಿರುವವರು ಇದರ ಸದುಪಯೋಗ ಪಡೆಯಿರಿ ಎಂದು ಕರ್ನಾಟಕ ಜೈನ್ ಅಸೋಷಿಯೇಷನ್ ಉಪಾಧ್ಯಕ್ಷರಾದ ರಾಜಕೀರ್ತಿ ಅವರು ಹೇಳಿದರು.
ಇಲ್ಲಿನ ರಾಜೇಂದ್ರದ ನಗರದ ರೋಟರಿ ಭವನದಲ್ಲಿ ಎ.ಡಿ.ಡಿ ಪೌಂಡೇಶನ್,ರೋಟರಿ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್,ರೋಟ್ರ್ಯಾಕ್ಟ್,ಹಾವೇರಿ ಕರ್ನಾಟಕ ಜೈನ್ ಅಸೋಸಿಯೇಶನ್, ಕರ್ನಾಟಕ ಮಾರ್ವಾಡಿ ಯೂತ್, ಪಡೆರರೇಶನ್,ಭಾರತೀಯ ರೆಡ್ ಕ್ರಾಸ್ ಸಂಸ್ಥೆ,ಜಿಲ್ಲಾ ವಿಕಲಚೇತನರ ಪನರ್ವಸತಿ ಕೇಂದ್ರ ಹಾವೇರಿ ಇವರ ಸಹಯೋಗದೊಂದಿಗೆ ಆಯೋಜಿಸಿದ ಬೃಹತ್ ಉಚಿತ ಕೃತಕ ಕೈ ಮತ್ತು ಕಾಲು ಜೋಡಣಾ ಶಿಬಿರದಲ್ಲಿ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಜೈನ್ ಅಸೋಷಿಯೇಶನ್ ನಿರಂತರವಾಗಿ ಸೇವಾ ಕೆಲಸ ಮಾಡುತ್ತಾ ಬರುತ್ತಿದೆ.ಸಮಾಜದ ಕಟ್ಟುಕಡೆಯ ವ್ಯಕ್ತಿಗೂ ಸೇವೆ ದೊರಕಿಸುವ ಪ್ರಯತ್ನ ಮಾಡಲಾಗುತ್ತಿದೆ.ದಿ,6,7 ಹಾಗೂ 8 ರಂದು ಹಾವೇರಿಯಲ್ಲಿ ಈ ಶಿಬಿರ ಆಯೋಜನೆ ಮಾಡಲಾಗಿದೆ ಇದರ ಸದುಪಯೋಗವಾಗಲಿ ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಗೌರವ ಕಾಯಾಧ್ಯಕ್ಷರಾದ ಸಂಜೀವಕುಮಾರ ನೀರಲಗಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂತಹ ಉಚಿತ ಬೃಹತ್ ಶಿಬಿರಗಳನ್ನು ಮಾಡಲು ನಮ್ಮ ಸಹಕಾರ ಸದಾ ಇರಲಿದೆ.ರೋಟರಿ ಕ್ಲಬ್ ಹಾಗೂ ಜೈನ್ ಅಸೋಸಿಯೇಶನ್ ಸಮಾಜಮುಖಿ ಕೆಲಸಗಳು ನಿರಂತರವಾಗಿವೆ.ವಿಕಲಚೇತನರಿಗೆ ಸೌಲಭ್ಯ ತಲುಪಿಸಲು ಡಿಡಿಆರ್‌ಸಿ ಉಚಿತ ಶಿಬಿರಗಳನ್ನು ಮಾಡಲಾಗುತ್ತಿದೆ.ಸೇವಾ ಕೆಲಸಕ್ಕೆ ನಿಮ್ಮೊಂದಿಗೆ ಇರಲಿದ್ದೇವೆ ಎಂದರು.
ಜೈನ್ ಅಸೋಸಿಯೇಶನ್ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯರಾದ ಎಸ್.ಎ.ವಜ್ರಕುಮಾರ ಮಾತನಾಡಿ ವಿಕಲಚೇತರಿಗೆ ಅನುಕೂಲವಾಗಲು ಇಂತಹ ಶಿಬಿರ ಮಾಡಲು ಎಲ್ಲರೂ ಸಹಕಾರ ನೀಡಿದ್ದು,ಸೇವೆ ಮಾಡಲು ಜೈನ್ ಅಸೋಸಿಯೇಶನ್ ಸಿದ್ಧವಿರುತ್ತದೆ ಎಂದು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.
ಜೈನ್ ಅಸೋಸಿಯೇಶನ್ ಕಾರ್ಯದರ್ಶಿ ಶ್ರೀಮತಿ ಆಶಾ ಪ್ರಭು ಅವರು ಶಿಬಿರದ ಉಪಯೋಗ,ಆಯೋಜನೆಯ ಹಾಗೂ ಎಸ್.ಎ ವಜ್ರಕುಮಾರ ಅವರ ಸೇವೆಯ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು.
ರೋಟರಿ ಸಂಸ್ಥೆಯ ಅಧ್ಯಕ್ಷರಾದ ರೊ.ಕಾಶಿನಾಥ ಅರವತ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಸ್ವಾಗತಿಸಿದರು.ರೋಟರಿ ಸಂಸ್ಥೆಯ ವತಿಯಿಂದ ಗಣ್ಯರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ ರೊ.ದಯಾನಂದ ಯಡ್ರಾಮಿ,ಕಾರ್ಯದರ್ಶಿ ರೊ.ಡಾ.ಪ್ರದೀಪ ದೊಡ್ಡಗೌಡ್ರ,ಮಾರ್ವಾಡಿ ಯುತ್ ಪೆಡರೇಶನ ಮುಖ್ಯಸ್ಥರಾದ ಮುರಳಿ,ರೆಡ್ ಕ್ರಾಸ್ ಗೌರವ ಕಾರ್ಯದರ್ಶಿ ನಿಂಗಪ್ಪ ಆರೇರ,ಡಿಡಿಆರ್ ಸಿ ನೋಡಲ್ ಅಧಿಕಾರಿ ಪೂರ್ಣಿಮಾ ಮಠದ,ರೋಟರಿ ಕ್ಲಬ್ ಪದಾಧಿಕಾರಿಗಳಾದ ರೊ,ಎಸ್.ಸಿ.ಹಿರೇಮಠ,ರೊ.ಮಲ್ಲಿಕಾರ್ಜುನ ಹಂದ್ರಾಳ,
ರೊ.ವಿರೇಶ ಪಾಟೀಲ, ಬಸವರಾಜ ಮಾಸೂರ,ಜಿ ವ್ಹಿ ಹಿರೇಗೌಡ್ರ,ರವಿ ಇಂಚಿಗೇರಿ, ಆರ್.ಬಿ ದಿಡಗೂರ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷರಾದ ವಿನತಿ ಮಾಗನೂರ,ಕಾರ್ಯದರ್ಶಿ ಶೋಭಾ ತಾಂಡೂರ,ಶಿವನಗೌಡ,ಉಜ್ವಲ್ ಹಿರೇಗೌಡ್ರ,ಇರ್ಶಾದಲಿ ದುಂಡಸಿ,ನವೀನ ಮುಗದೂರ ಸೇರಿದಂತೆ ಕೃತಕ ಕೈ-ಕಾಲು ಜೋಡಣಾ ಅನುಭವಿ ತಂಡದವರು,ರೋಟರಿ,ರೆಡ್ ಕ್ರಾಸ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 