ದಿ. 25ರಂದು ಉಚಿತ ಥೈರಾಯ್ಡ ತಪಾಸಣಾ ಶಿಬಿರ

ದಿ. 25ರಂದು ಉಚಿತ ಥೈರಾಯ್ಡ ತಪಾಸಣಾ ಶಿಬಿರ Free Thyroid Checkup Camp on 25th

ಲೋಕದರ್ಶನ ವರದಿ 

ಬೆಳಗಾವಿ 23: ವಿಶ್ವ ಥೈರಾಯ್ಡ ದಿನಾಚರಣೆ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಎಂಡೋಕ್ರಿನಾಲಜಿ ವಿಭಾಗವು ಉಚಿತ ಥೈರಾಯ್ಡ ತಪಾಸಣಾ ಶಿಬಿರವನ್ನು ದಿ. 25 ಮೇ 2026ರಂದು ಬೆಳಗ್ಗೆ 10 ರಿಂದ 1 ಗಂಟೆಯವರೆಗೆ ಆಸ್ಪತ್ರೆಯಲ್ಲಿ ಏರಿ​‍್ಡಸಲಾಗಿದೆ. ತಿಂಗಳ ಋತುಚಕ್ರದಲ್ಲಿ ಏರುಪೇರು, ಮಕ್ಕಳಲ್ಲಿ ಬೆಳವಣಿಗೆ ಇಲ್ಲದಿರುವದು, ದೇಹ ತೂಕದಲ್ಲಿ ವಿಪರೀತ ಹೆಚ್ಚಳ, ಜೀರ್ಣಕ್ರಿಯೆಯಲ್ಲಿ ತೊಂದರೆ, ಅಶಕ್ತತೆ, ತೀವ್ರತರವಾದ ಚಳಿ, ಕೂದಲು ಉದುರುವದು ಹಾಗೂ ಅತಿಯಾದ ನಿದ್ದೆ ಸೇರಿದಂತೆ ಥೈರಾಯ್ಡಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಶಿಬಿರದಲ್ಲಿ ಪಾಲ್ಗೊಂಡು ತಪಾಸಿಸಿಕೊಳ್ಳುವಂತೆ ಕೋರಲಾಗಿದೆ. ಡಾ. ವಿಕ್ರಾಂತ ಘಟನಟ್ಟಿ, ಡಾ. ಮಂಜುನಾಥ ಗೊರೊಶಿ ಹಾಗೂ ಡಾ. ವಾನಿಶ್ರೀ (ಎಂಡೊಕ್ರಿನಾಲಾಜಿಸ್ಟ) ಅವರು ರೋಗಿಗಳನ್ನು ಸಮಗ್ರವಾಗಿ ತಪಾಸಿಸಿ ಸೂಕ್ತ ಸಲಹೆ ನೀಡಲಿದ್ದಾರೆ. ಥೈರಾಯಿಡ (ಟಿಎಸ್‌ಹೆಚ್) ರಕ್ತ ತಪಾಸಣೆ ಮಾಡಲಿದ್ದಾರೆ.