ಬೀಳಗಿ ಮತ ಕ್ಷೇತ್ರದ 81 ಮಹಿಳೆಯರಿಗೆ ಉಚಿತ ಹೋಲಿಗೆ ಯಂತ್ರ ವಿತರಣೆ

ಬೀಳಗಿ ಮತ ಕ್ಷೇತ್ರದ 81 ಮಹಿಳೆಯರಿಗೆ ಉಚಿತ ಹೋಲಿಗೆ ಯಂತ್ರ ವಿತರಣೆ Free Sewing machines distributed to 81 women from Bilagi constituency

ಲೋಕದರ್ಶನ ವರದಿ 

ಬಾಗಲಕೋಟ   27:   ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಪ್ರಮುಖವಾಗಿರುವುದನ್ನು ಗಮನಿಸಿದ ಸರ್ಕಾರ  ಗ್ಯಾರಂಟಿ ಯೋಜನೆಗಳನ್ನು   ಜಾರಿ ಮಾಡಿದ್ದು   ಅವುಗಳಲ್ಲಿ   ಬಹು ಪಾಲು ಮಹಿಳೆಯರಿಗೆ ಅನುಕೂಲವಾಗುವಂಥ ಕಾರ್ಯಕ್ರಮಗಳಿದ್ದು , ಅಂತ ಯೋಜನೆಗಳ.ಸದುಪಯೋಗ ಪಡೆದುಕೊಂಡು ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಬೀಳಗಿ ಶಾಸಕ ಹಾಗೂ  ಹಟ್ಟಿ  ಚಿನ್ನದ ಗಣಿ  ನಿಯಮಿತದ   ಅಧ್ಯಕ್ಷ   ಜೆ ಟಿ  ಪಾಟೀಲ್    ಹೇಳಿದರು 

ಇಲ್ಲಿನ  ಬಾಗಲಕೋಟೆ ಹಳೆ ಪ್ರವಾಸಿ   ಮಂದಿರದ  ತಮ್ಮ. ಕಚೇರಿಯಲ್ಲಿ ಕೌಶಲ್ಯ ಅಭಿವೃದ್ಧಿ   ಉದ್ಯಮಶೀಲತೆ ಜೀವನೋಪಾಯ   ಇಲಾಖೆಯ ವತಿಯಿಂದ ಬೀಳಗಿ ತಾಲೂಕಿನ.ತೆಗ್ಗಿ ಸಿದ್ದಾಪುರ ಸೊನ್ನ   ಗ್ರಾಮಗಳ ಮಹಿಳೆಯರಿಗೆ ಹೊಲಿಗೆ ಯಂತ್ರ ಹಾಗೂ ಕಿಟ್ ವಿತರಿಸಿ ಮಾತನಾಡುತ್ತಾ  

ಕಲಿಯಲಾರದ ಬಡ ಹೆಣ್ಣು ಮಕ್ಕಳು ಹೊಲಿಗೆ ತರಬೇತಿಯನ್ನು  ಪಡೆದಿದ್ದರೆ ಅಂತವರನ್ನು ಗುರುತಿಸಿಅವರು ಸ್ವಂತ ಉದ್ಯೋಗ ಮಾಡಲು ಅನುಕೂಲವಾಗುವ ದೃಷ್ಟಿಯಿಂದ    ಹೊಲಿಗೆ ಯಂತ್ರ ಹಾಗೂ ಸಾಮಗ್ರಿಗಳನ್ನು ಉಚಿತವಾಗಿ    ಕೊಡಲಾಗುವುದು ಎಂದರು .      

ಇಂದು ಟೆಲರಿಂಗ್ ಕಾರ್ಯ ವಿರಳವಾಗಿದ್ದು ಅದರಲ್ಲೂ ಮಹಿಳೆಯರ ಉಡುಪುಗಳ ತಯಾರಿಕೆಯಲ್ಲಿ ದುಬಾರಿಯಾಗಿದ್ದು  ಒಬ್ಬ ಹೆಣ್ಣುಮಗಳು   ಹೊಲಿಗೆ  ಕಾರ್ಯ ಮಾಡುತ್ತಾ ದುಡಿದಲ್ಲಿ  ಖಾಸಗಿ ಆಸ್ಪತ್ರೆ ವೈದ್ಯರಷ್ಟು  ಸಂಪಾದನೆ ಮಾಡಬಹುದಾಗಿದೆ ಪ್ರತಿ ತಿಂಗಳಿಗೆ    ಕನಿಷ್ಠ 50 ಸಾವಿರ ರೂಪಾಯಿಗಳನ್ನು ಗಳಿಸಲುಅವಕಾಶವಿದ್ದು  ಜೊತೆಗೆ   ಮಕ್ಕಳಿಗೆ ಉನ್ನತ ಶಿಕ್ಷಣ ಕಲಿಸುವಲ್ಲಿ ಕುಟುಂಬದ ನಿರ್ವಹಣೆಯಲ್ಲಿ   ಮತ್ತು ಗೌರವವಿತವಾಗಿ ಬದುಕುವ ಅವಕಾಶ ಇರುವುದರಿಂದ ನೀವೆಲ್ಲ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು   ಎಂದರು  

ಹೊಲಿಗೆ ತರಬೇತಿ ಪಡೆದ ಮಹಿಳೆಯರು ಯಂತ್ರಗಳನ್ನು ಕೊಳ್ಳಲು ಅಶಕ್ತರಾಗಿದ್ದರಿಂದ ಅಂತಹ ಮಹಿಳೆಗೆ ಉಚಿತವಾಗಿ ಒಂಬತ್ತು ಸಾವಿರ ಐದು ನೂರು ರೂಪಾಯಿಗಳ ಬೆಲೆ ಯುಳ್ಳ ಹೊಲಿಗೆ   ಯಂತ್ರವನ್ನು   ಹಾಗೂ ಉಳಿದ.  ಪರಿಕರಗಳನ್ನು ನೀಡಲಾಗಿತ್ತಿದ್ದು   ಸದ್ಯ 81 ಮಹಿಳೆಯರು   ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದರು ಕಳೆದ ಎರಡು  ತಿಂಗಳುಗಳಿಂದ ನಿರಂತರವಾಗಿ   ತಮ್ಮ ಕಚೇರಿಯಲ್ಲಿ   ಮುಂಜಾನೆ ಸಮಯ ಉಪಹಾರದ ವ್ಯವಸ್ಥೆಯನ್ನು   ಕಲ್ಪಿಸಲಾಗಿದ್ದು ಮತಕ್ಷೇತ್ರದ ಜನರು ತಮ್ಮನ್ನು ಭೇಟಿಯಾಗಲು ಬಂದಾಗ ಅವರಿಗೆ ಉಪಹಾರ  ಕೊಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು   ಕಾರ್ಯಕ್ರಮದಲ್ಲಿ ಗ್ಯಾರಂಟಿ  ಯೋಜನೆಗಳ ಅನುಷ್ಠಾನ ದ ತಾಲೂಕ ಅಧ್ಯಕ್ಷ ಉಪಸ್ಥಿತರಿದ್ದರು  ಮತ್ತು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಗುರುಪಾದಯ್ಯ ಹಿರೇಮಠ್ ಸರ್ವರನ್ನು ಸ್ವಾಗತಿಸಿ ವಂದಿಸಿದರು