ಸಾಯಿ ಮಂದಿರದಲ್ಲಿ ಉಚಿತ ಪಟ್ ಪಲ್ಸ ಥೆರಪಿ ಶಿಬಿರ
Free Pat Pulse Therapy Camp at Sai Mandir
ಶಿಗ್ಗಾವಿ 55 : ಪಟ್ಟಣದ ಸಾಯಿ ನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಮಂಗಳವಾರದಿಂದ 13 ದಿನಗಳ ಉಚಿತ ಪಟ್ ಪಲ್ಸ ಥೆರಪಿ ಶಿಬಿರವನ್ನು ಆಯೋಜಿಸಲಾಗಿದ್ದು ಶಿಗ್ಗಾವಿ ತಾಲೂಕು ಜನತೆ ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಕಂಪಾನಿಯೋ ಸಂಸ್ಥೆಯ ಜಿಲ್ಲಾಧ್ಯಕ್ಷ ನಿಂಗರಾಜ ಹೇಳಿದರು.
ಪಟ್ಟಣದಲ್ಲಿ ಶಿಬಿರದ ಬಿತ್ತಿಚಿತ್ರಗಳನ್ನು ಬಿಡುಗಡೆ ಮಾಡಿ ವರದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ಆರೋಗ್ಯ ಸಮಸ್ಯಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಸಂದಿವಾತ, ವೆರಿಕೊಸ್ ವೇನ, ಸ್ನಾಯು ಸೆಳೆತ, ಥೈರಾಡ, ಪಾಸ್ವವಾಯು, ಬೊಜ್ಜು ಸೇರಿದಂತೆ ಅನೇಕ ರಕ್ತ ಸಂಬಧಿ ಖಾಯಿಲೆಗಳಿಗೆ ಈ ಉಚಿತ ಸಿಭಿರದಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದ್ದು, ಮೇಕ್ ಇನ್ ಇಂಡಿಯಾ ಯೋಜನೆಯಡಿ ಈ ಚಿಕಿತ್ಸೆಯನ್ನು ದೇಶಾಧ್ಯಂತ 350ಕ್ಕು ಹೆಚ್ಚು ಶಾಖೆಗಳ ಮೂಲಕ ನೀಡಲಾಗುತ್ತಿದೆ. 90 ಲಕ್ಷಕ್ಕು ಅಧಿಕ ರೋಗಿಗಳು ಈ ಚಿಕ್ಸೆಯಿಂದ ಗುಣಮುಖರಾಗಿದ್ದು, ಶಿಗ್ಗಾವಿ ಪಟ್ಟಣದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಮಲ್ಲಿಕಾರ್ಜುನ ಮತ್ತು ಕಲ್ಮೇಶ್ವರ ಜಾನಪದ ಕಲಾತಂಡ ಮುಗಳಿ, ಎನ್.ಎಸ್. ಸ್ನೇಹ ಜ್ಯೋತಿ ನಗರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ರಾಣೆಬೆನ್ನುರ ಮತ್ತಯ ಕಂಪ್ಯಾನಿಯೋ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಶಿಭಿರವನ್ನು ಶಿಗ್ಗಾವಿ ಪಟ್ಟಣದಲ್ಲಿ ಆಯೋಜಿಸಲಾಗಿದ್ದು ಸಾರ್ವಜನಿಕರು ಈ ಶಿಭಿರದ ಲಾಭ ಪಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿತ್ಯಾನಂದ ಕುಂದಾಪುರ, ಶಿವಕುಮಾರ ಜಾದವ, ಬಸವರಾಜ ಗೊಬ್ಬಿ ಸೇರಿದಂತೆ ಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 