ಬ್ಯಾಡಗಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ
Free Eye Check-up Camp in Byadgi
ಬ್ಯಾಡಗಿ 09 : ಪಟ್ಟಣದ ಸ್ನೇಹ ಸದನ ಸಭಾಭವನದಲ್ಲಿ ಬುಧವಾರ ರೋಟರಿ ಕ್ಲಬ್ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ನಡೆಯಿತು ಶಿಬಿರದಲ್ಲಿ 72 ಜನರ ತಪಾಸಣೆ ಮಾಡಲಾಯಿತು, 43 ಜನ ಶಿಬಿರಾರ್ಥಿಗಳನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಿ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಗೆ ಕಳುಹಿಸಲಾಗುವುದೆಂದು ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಮಂಜುನಾಥ ಉಪ್ಪಾರ ತಿಳಿಸಿದರು. ಪ್ರತಿತಿಂಗಳು ನಡೆಯುವ ಉಚಿತ ಶಿಬಿರಗಳಿಂದ ತಾಲ್ಲೂಕಿನ ಸಾವಿರಾರು ಬಡ ಕುಟುಂಬಗಳಿಗೆ ಸಹಕಾರಿಯಾಗಿದೆ.
ಮುಂದಿನ ದಿನಗಳಲ್ಲೂ ಪಟ್ಟಣದ ಸಾರ್ವಜನಿಕರು ಮತ್ತು ತಾಲೂಕಿನ ಎಲ್ಲಾ ಗ್ರಾಮಗಳ ಸಾರ್ವಜನಿಕರು ಉಚಿತ ಶಿಬಿರದ ಸದುಪಯೋಗ ಪಡೆದುಕೊಳ್ಳಲು ಹಾಗೂ ನೇತ್ರ ದಾನದ ಮಹತ್ವ ತಿಳಿಸಿ ಸಾರ್ವಜನಿಕರು ಮರಣನಂತರ ನೇತ್ರದಾನ ಮಾಡಲು ಕೇಳಿಕೊಂಡರು.ಈ ಸಂದರ್ಭದಲ್ಲಿ ಸ್ನೇಹಸದನದ ನಿರ್ದೇಶಕಿ ಸಿಸ್ಟರ್ ರೂಪಾ, ಶಿಕ್ಷಕಿ ಸರಸ್ವತಿ, ಮಲ್ಲಿಕಾರ್ಜುನ, ಅಧ್ಯಕ್ಷ ಪವಾಡೆಪ್ಪ ಆಚನೂರ, ಕಾರ್ಯದರ್ಶಿ ಕಿರಣ ಮಾಳೇನಹಳ್ಳಿ, ಖಜಾಂಚಿ ರಮೇಶ ಕಲ್ಯಾಣಿ, ಸತೀಶ ಅಗಡಿ, ಅಸಿಸ್ಟೆಂಟ್ ಗವರ್ನರ್ ಬಸವರಾಜ ಸುಂಕಾಪುರ, ನೇತ್ರ ಪರೀಕ್ಷಕ ಡಾ.ಪ್ರಜಾಕ್ತ, ಅರುಣ, ಸಹಾಯಕ ಮನು, ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ 