ಸೆಂಡೂರು ಗ್ರಾಮದಲ್ಲಿ ಉಚಿತ ಗೇರು (ಕಾಜು) ಸಸಿ ವಿತರಣೆ: ತಾಂತ್ರಿಕ ತರಬೇತಿ
Free Cashew Sapling Distribution and Technical Training in Senduru Village
ನಿಪ್ಪಾಣಿ 10: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ನಿಪ್ಪಾಣಿ-1 ತಾಲೂಕು ಹಾಗೂ ವಿಜಯಲಕ್ಷ್ಮಿ ಫೌಂಡೇಶನ್, ಮೂಡಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ಸೆಂಡೂರು ಗ್ರಾಮದಲ್ಲಿ ಉಚಿತ ಗೇರು (ಕಾಜು) ಸಸಿ ವಿತರಣೆ ಮತ್ತು ತಾಂತ್ರಿಕ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ನಿಪ್ಪಾಣಿ-1 ತಾಲೂಕಿನ ಯೋಜನಾಧಿಕಾರಿ ಮಂಜುನಾಥ ಎಚ್. ಅವರು ರೈತರಿಗೆ ಗೇರು ಸಸಿಗಳನ್ನು ವಿತರಿಸಿ, ಯೋಜನೆಯ ಉದ್ದೇಶ ಹಾಗೂ ವಿವಿಧ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಈ ಯೋಜನೆಯಡಿ ನಿಪ್ಪಾಣಿ ತಾಲೂಕಿನ 30 ರೈತರಿಗೆ ಒಟ್ಟು 2,000 ಗೇರು (ಕಾಜು) ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಸಂಜಯ್ ಪಾಟೀಲ್, ಹಿರಿಯ ವಿಜ್ಞಾನಿಗಳು, ಕೃಷಿ ಸಂಶೋಧನಾ ಕೇಂದ್ರ, ನಿಪ್ಪಾಣಿ, ಅವರು ಗೇರು ಕೃಷಿಯ ಆಧುನಿಕ ತಾಂತ್ರಿಕ ವಿಧಾನಗಳು, ಸಮರ್ಕ ನಿರ್ವಹಣೆ ಹಾಗೂ ಹೆಚ್ಚಿನ ಇಳುವರಿ ಪಡೆಯುವ ಕ್ರಮಗಳ ಕುರಿತು ರೈತರಿಗೆ ಉಪಯುಕ್ತ ಮಾಹಿತಿ ನೀಡಿದರು. ಗೇರು (ಗೋಡಂಬಿ) ಉತ್ತಮ ಆದಾಯ ತರುವ ವಾಣಿಜ್ಯ ಬೆಳೆಯಾಗಿದ್ದು, ರೈತರು ಇದನ್ನು ವೈಜ್ಞಾನಿಕ ವಿಧಾನದಲ್ಲಿ ಬೆಳೆಸುವ ಮೂಲಕ ಹೆಚ್ಚಿನ ಲಾಭ ಗಳಿಸಬಹುದೆಂದು ತಿಳಿಸಿದರು.
ಪ್ರಗತಿಪರ ರೈತರಾದ ಅಶೋಕ್ ತೋಡ್ಕಾರ್ ಹಾಗೂ ಸಂಭಾಜಿ ತೊಂದಳೆ, ಒಕ್ಕೂಟದ ಅಧ್ಯಕ್ಷ ರಾಜು ನಾಯಕ್, ಯೋಜನೆಯ ಕೃಷಿ ಮೇಲ್ವಿಚಾರಕ ಸುರೇಶ್ ಹಾಲವರ, ವಲಯ ಮೇಲ್ವಿಚಾರಕ ಗುರುನಾಥ್, ಸೇವಾ ಪ್ರತಿನಿಧಿಗಳು ಹಾಗೂ ಗ್ರಾಮದ ಅನೇಕ ರೈತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಕೃಷಿ ಮೇಲ್ವಿಚಾರಕ ಸುರೇಶ್ ಹಾಲವರ ನಿರೂಪಿಸಿದರು. ವಲಯ ಮೇಲ್ವಿಚಾರಕ ಗುರುನಾಥ್ ವಂದನಾರೆ್ಣ ಸಲ್ಲಿಸಿದರು.
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ 