ಯುಪಿಐ ನಕಲಿ ಸಂದೇಶದ ಮೂಲಕ ವಂಚನೆ: ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಅಂಗಡಿ ಮಾಲೀಕರು
Fraud via fake UPI message: Shop owners catch youth and hand him over to the police
ಹೂವಿನಹಡಗಲಿ 14: ಪಟ್ಟಣದಲ್ಲಿ ಯುಪಿಐ ಮೂಲಕ ಹಣ ಪಾವತಿಸಿದಂತೆ ನಕಲಿ ಸಂದೇಶ ತೋರಿಸಿ ಅಂಗಡಿ ಮಾಲೀಕರಿಗೆ ವಂಚಿಸುತ್ತಿದ್ದ ಯುವಕನನ್ನು ವ್ಯಾಪಾರಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳವಾರ ನಡೆದಿದೆ.
ಪಟ್ಟಣದ ಕಿರಾಣಿ, ಬೀಡಿ ಅಂಗಡಿ ಸೇರಿದಂತೆ ವಿವಿಧ ವ್ಯಾಪಾರ ಸ್ಥಳಗಳಲ್ಲಿ ಈ ಯುವಕನು ಮೊಬೈಲ್ ಮೂಲಕ ಸಾಮಾನ್ಯ ಪಾವತಿ ಸಂದೇಶ ತೋರಿಸಿ, ಹೆಚ್ಚಿನ ಮೊತ್ತದ ವಸ್ತುಗಳನ್ನು ಪಡೆದು ಹಣ ಪಾವತಿಸಿದಂತೆ ನಂಬಿಸಿ ವಂಚನೆ ಮಾಡುತ್ತಿದ್ದ ಎನ್ನಲಾಗಿದೆ.
ಪಟ್ಟಣದ ಹಂಪಸಾಗರ ರಸ್ತೆಯಲ್ಲಿರುವ ರೊಟ್ಟಿ ಮಾರಾಟ ಅಂಗಡಿಯಲ್ಲಿ ಕಳೆದ ಒಂದು ವರ್ಷದಿಂದ ದಿನಕ್ಕೆ ಎರಡು ಬಾರಿ ನಾಲ್ವರು ಯುವಕರು ಬೈಕ್ನಲ್ಲಿ ಬಂದು ಫೋನ್ ಪೇ ಮೂಲಕ ಹಣ ಪಾವತಿಸಿರುವ ನಕಲಿ ಸಂದೇಶ ತೋರಿಸಿ ಸಿಗರೇಟ್, ಗುಟ್ಕಾ, ತಂಪು ಪಾನೀಯ ಸೇರಿದಂತೆ ವಿವಿಧ ವಸ್ತುಗಳನ್ನು ಪಡೆದು ಹೋಗುತ್ತಿದ್ದರು. ಇದರಿಂದ ಅಂಗಡಿ ಮಾಲೀಕ ಮಹಿಳೆಗೆ ಅನುಮಾನ ಮೂಡಿತ್ತು.
ಮಂಗಳವಾರ ಎಂದಿನಂತೆ ಇಬ್ಬರು ಯುವಕರು ಬೈಕ್ನಲ್ಲಿ ಅಂಗಡಿಗೆ ಬಂದಾಗ, ಸ್ಥಳೀಯ ನಿವಾಸಿ ಸತೀಶ್ (24) ಎಂಬುವವರು ಅವರನ್ನು ತಡೆದು ಒಬ್ಬ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ.
ನಕಲಿ ಸಂದೇಶಗಳಿಗೆ ಬಲಿಯಾಗದಂತೆ ಎಚ್ಚರಿಕೆ:
ವಂಚಕರು ನಕಲಿ ಫೋನ್ ಪೇ ಆ್ಯಪ್ಗಳು (ಈಚಿಞಜ ಂಕಏ) ಹಾಗೂ ನಕಲಿ ಪಾವತಿ ಸ್ಕ್ರೀನ್ಶಾಟ್ಗಳನ್ನು ಬಳಸಿ ಹಣ ಪಾವತಿಸಿದಂತೆ ತೋರಿಸುತ್ತಾರೆ. ಆದ್ದರಿಂದ ವ್ಯಾಪಾರಿಗಳು ಗ್ರಾಹಕರ ಮೊಬೈಲ್ ಸಂದೇಶಗಳನ್ನು ನಂಬದೆ, ತಮ್ಮ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ವಸ್ತುಗಳನ್ನು ನೀಡಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ 