25 ಲಕ್ಷ ರೂ. ವಂಚಿಸಿ ಪರಾರಿಯಾದ ಮಹಿಳೆ.. ಸಂಘದಲ್ಲಿ ಮಹಿಳೆಯರ ಹೆಸರಿನಿಂದ ಹಣ ಪಡೆದು ವಂಚನೆ..
Fraud by taking money in the name of women in the association..
ಕಾಗವಾಡ 27: ಪಟ್ಟಣದಲ್ಲಿ ಮಹಿಳೆಯೋರ್ವಳು ಮಹಿಳಾ ಸ್ವ-ಸಹಾಯ ಸಂಘದ ಸದಸ್ಯೆಯರನ್ನು ವಂಚಿಸಿ, ಸುಮಾರು 25 ಲಕ್ಷ ರೂ. ವಂಚಿಸಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ಮಿನಾಕ್ಷಿ ತೇಲಿ ಕಳೆದ ಹತ್ತು ವರ್ಷಗಳಿಂದ ಮಹಿಳೆಯರಿಗೆ ಸ್ವ-ಸಹಾಯ ಸಂಘಗಳ ಮುಖಾಂತರ ಸಾಲ ಕೊಡಿಸುವ ಏಜೆಂಟಳಾಗಿ ಕಾರ್ಯನಿರ್ವಹಿಸುತ್ತಾ ಮಹಿಳೆಯರ ವಿಶ್ವಾಸ ಗಳಿಸಿ, ಈಗ ತನ್ನ ಮಗನಿಗೆ ನೌಕರಿಗಾಗಿ ಹಣ ಹೊಂದಿಸಬೇಕೆಂದು ನಂಬಿಸಿ, ಅನೇಕ ಮಹಿಳೆಯರ ಹೆಸರಿನಲ್ಲಿ ಸುಮಾರು 25 ಸಾಲ ರೂ.ಗಳ ಸಾಲ ಪಡೆದುಕೊಂಡು ಪರಾರಿಯಾಗಿದ್ದಾಳೆ.
ಹಣ ಕಳೆದುಕೊಂಡ ಮಹಿಳೆಯರು, ಈ ಕುರಿತು ಪಟ್ಟಣದ ಪ್ರಮುಖರಿಗೆ ಮತ್ತು ಕಾಗವಾಡ ಪೋಲಿಸರಿಗೆ ಲಿಖಿತ ರೂಪದಲ್ಲಿ ದೂರು ಸಲ್ಲಿಸಿ ನ್ಯಾಯ ಒದಗಿಸಿಕೊಡಬೇಕೆಂದು ಕೇಳಿಕೊಂಡರೂ ಯಾವದೇ ಪ್ರಯೋಜನವಾಗಿಲ್ಲ.
ಈಗ ನೊಂದ ಮಹಿಳೆಯರು ಮಾಧ್ಯಮದವರೊಂದಿಗೆ ಮಾತನಾಡಿ, ಹಣ ಕಳೆದುಕೊಂಡ ಬಗ್ಗೆ ವಿವರಣೆ ನೀಡಿದ್ದು, ತಮಗೆ ನ್ಯಾಯ ಕೊಡಿಸಬೇಕೆಂದು ಅವಲತ್ತುಕೊಂಡಿದ್ದಾರೆ.
ಈ ಮಧ್ಯೆ ಹಣದೊಂದಿಗೆ ಪರಾರಿಯಾಗಿರುವ ಮಹಿಳೆಯು ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಆಕೆಯ ಮಗನನ್ನು ಸಂಪರ್ಕಿಸಿದಾಗ ನಮ್ಮ ತಾಯಿ ನನ್ನ ನೌಕರಿಗಾಗಿ ಹಣ ನೀಡಿದ್ದು ನಿಜ. ಆದರೆ ಕೇವಲ ನಾಲ್ಕು ಮಹಿಳೆಯರ ಸಂಘದ ಹಣ ಮಾತ್ರ ನೀಡಿರುತ್ತಾಳೆ. ಬಾಕಿ ಮಹಿಳೆಯರು ನೀಡಿದ ಹಣದ ವಿಷಯ ನನಗೆ ಗೊತ್ತಿಲ್ಲ ಎಂದು ಜಾರಿಕೊಳ್ಳುತ್ತಿದ್ದಾನೆ.
ಈ ಪ್ರಕರಣದಲ್ಲಿ ಸುಮಾರು ಹದಿನೈದು ಮಹಿಳೆಯರು ತಮ್ಮ ಹೆಸರಿನಲ್ಲಿ ಐವತ್ತರಿಂದ ಒಂದೂವರೆ ಲಕ್ಷದವರೆಗೆ ಸಾಲ ತೆಗೆಸಿ, ವಂಚಕಿ ಮಹಿಳೆಯರಿಗೆ ನೀಡಿರುವದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.
ಸಂಭಂಧಪಟ್ಟ ಅಧಿಕಾರಿಗಳು, ಪೋಲಿಸ್‌ರು ವಂಚಕ ಮಹಿಳೆಯನ್ನು ಹಿಡಿದು, ನೊಂದ ಮಹಿಳೆಯರಿಗೆ ನ್ಯಾಯ ಕೊಡುವರೇ ಕಾಯ್ದು ನೋಡಬೇಕಿದೆ.
ಜೊತೆಗೆ ಕಳೆದ ಕೆಲ ದಶಕಗಳಿಂದ ಗ್ರಾಮೀಣ ಭಾಗದಲ್ಲಿ ಮಹಿಳಾ ಸ್ವ-ಸಹಾಯ ಸಂಘದ ಹೆಸರಿನಲ್ಲಿ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಸರ್ಕಾರ ಸ್ವ-ಸಹಾಯ ಸಂಘಳಿಗೆ ಕಟ್ಟುನಿಟ್ಟಿನ ಕಾನೂನು ರೂಪಿಸುವ ಅಗತ್ಯವಿದೆ ಎಂದು ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 