ಫೆ. 14ರಿಂದ ಗಜೇಂದ್ರಗಡದಲ್ಲಿ ರಾಜ್ಯಮಟ್ಟದ ಯುವಜನ ಮೇಳ


ಗದಗ 14: ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಾ ಕೇಂದ್ರದಲ್ಲಿ ಫೆ. 14ರಿಂದ 16ರವರೆಗೆ ಮೂರು ದಿನಗಳ ಕಾಲ ರಾಜ್ಯಮಟ್ಟದ ಯುವಜನ ಮೇಳ ನಡೆಸಲು ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ನಿರ್ಧರಿಸಲಾಗಿದೆ. 

ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರ ಅಧ್ಯಕ್ಷತೆಯಲ್ಲಿ, ರೋಣ ಶಾಸಕರಾದ ಕಳಕಪ್ಪ ಬಂಡಿ ಅವರ ಉಪಸ್ಥಿತಿಯಲ್ಲಿ ರಾಜ್ಯಮಟ್ಟದ ಯುವಜನ ಮೇಳದ  ಪೂರ್ವಭಾವಿ ಸಭೆ ಜರುಗಿತು. 

2008-09ರಲ್ಲಿ ಗಜೇಂದ್ರಗಡದಲ್ಲಿ ರಾಜ್ಯಮಟ್ಟದ ಯುವಜನ ಮೇಳ ಯಶಸ್ವಿಯಾಗಿ ಜರುಗಿದ್ದು, ಈ ಬಾರಿಯೂ ಗಜೇಂದ್ರಗಡದಲ್ಲಿ ಎರಡನೇ ಬಾರಿ ರಾಜ್ಯಮಟ್ಟದ ಯುವಜನ ಮೇಳ ಯಶಸ್ವಿಯಾಗಿ ಜರುಗಿಸಲು ಜವಾಬ್ದಾರಿಯಿಂದ ದಕ್ಷತೆಯಿಂದ ಎಲ್ಲ ಅಧಿಕಾರಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.  

ಶಾಸಕರಾದ ಕಳಕಪ್ಪ ಬಂಡಿ ಅವರು ರಾಜ್ಯ ಸಕರ್ಾರ ಈ ಬಾರಿಯ ರಾಜ್ಯ ಮಟ್ಟದ  ಯುವ ಜನ ಮೇಳ ಜರುಗಿಸುವ ಗೌರವವನ್ನು ಮತ್ತೆ ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣಕ್ಕೆ ನೀಡಿದೆ.  ಗಜೇಂದ್ರಗಡ ಎಪಿಎಂಸಿ ಆವರಣದ ಎದುರಿನ ಬಯಲಲ್ಲಿ  3ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ಯುವಜನ ಮೇಳಕ್ಕೆ ನಾಲ್ಕು ವಿಭಾಗಗಳಿಂದ ಆಗಮಿಸುವ ಸ್ಪಧರ್ಾಳುಗಳಿಗೆ ಸಾರಿಗೆ, ವಸತಿ, ಊಟೋಪಹಾರ, ಸ್ಪರ್ಧಾ  ಕಾರ್ಯಕ್ರಮಗಳ ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆ ಜವಾಬ್ದಾರಿಯುತವಾಗಿ ಸಂಬಂಧಿತ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು.

ವೇದಿಕೆ, ಉದ್ಘಾಟನಾ ಸಮಾರಂಭ, ಆಹ್ವಾನ ಮುಂತಾದ ವಿಷಯಗಳಿಗೆ ಹೆಚ್ಚಿನ ಗಮನ ಹರಿಸಬೇಕು. ವಸತಿ ಕುರಿತಂತೆ ಸ್ಪಧರ್ಾಳುಗಳಿಗೆ ಕಿತ್ತೂರು ಚೆನ್ನಮ್ಮ ವಸತಿ ಶಾಲೆಯಲ್ಲಿ ವ್ಯವಸ್ಥೆ ಮಾಡಬೇಕು. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಗಾಗಿ ಪ್ರತ್ಯೇಕ ಸಮಿತಿಗಳನ್ನು ರಚಿಸಲು ಶಾಸಕರು ಸೂಚಿಸಿದರು. ಸಾರಿಗೆಗಾಗಿ ಜಿಲ್ಲಾಡಳಿತ ಶಾಲಾ ಬಸ್ಗಳನ್ನು ಒದಗಿಸಲು, ನೋಂಧಣಿ ಸಂದರ್ಭದಲ್ಲಿ ಸ್ಪರ್ಧಾಳುಗಳಿಗೆ ಗುರುತಿನ ಚೀಟಿ, ಕಾರ್ಯಕ್ರಮ ಮಾಹಿತಿ, ವಸತಿ, ಸಾರಿಗೆ ವ್ಯವಸ್ಥೆ ಕುರಿತು ಮಾಹಿತಿ ನೀಡಬೇಕು ಎಂದು ಶಾಸಕ ಕಳಕಪ್ಪ ಬಂಡಿ ತಿಳಿಸಿದರು.

ಸಭೆಯಲ್ಲಿ ಸ್ವಾಗತ, ಸಂಘಟನಾ, ಹಣಕಾಸು, ವಸತಿ, ಆಹಾರ, ವೈದ್ಯಕೀಯ, ಸ್ಮರಣ ಸಂಚಿಕೆ, ಸಾರಿಗೆ, ಪ್ರಚಾರ, ಬಹುಮಾನ, ವೇದಿಕೆ,  ನೊಂದಣಿ, ನ್ಯಾಯ ನಿರ್ಣಯ ಜೊತೆಗೆ ಸ್ವಚ್ಚತೆ,  ಕುಡಿಯುವ ನೀರಿನ ಹಾಗೂ ರಕ್ಷಣಾ  ಸಮಿತಿಗಳನ್ನು ರಚಿಸಲು ನಿರ್ಧರಿಸಲಾಯಿತು. ಕಾರ್ಯಕ್ರಮ, ವೇದಿಕೆ, ಪೆಂಡಾಲ್, ಲೈಟಿಂಗ್, ಊಟೋಪಚಾರ, ವಸತಿ, ಆಹ್ವಾನ ಪತ್ರ್ರಿಕೆ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ, ವಿಜೇತರಿಗೆ ನಗದು ಬಹುಮಾನ ಸೇರಿದಂತೆ ಮುಂತಾದ ವಿಷಯಗಳ ಕುರಿತು ಚಚರ್ೆ ನಡೆಸಲಾಯಿತು. 

ರಾಜ್ಯಮಟ್ಟದ ಯುವಜನ ಮೇಳದಲ್ಲಿ ಯುವಕರಿಗಾಗಿ 15 ಸ್ಪರ್ಧೆಗಳು ಹಾಗೂ ಯುವತಿಯರಿಗಾಗಿ 11 ಸ್ಪಧರ್ೆಗಳು ಜರುಗಲಿದ್ದು, ಒಟ್ಟು 260 ಯುವತಿಯರು ಹಾಗೂ 524 ಯುವಕರು,     15 ಜನ ನಿಣರ್ಾಯಕರು, 30 ಜನ ತಂಡದ ವ್ಯವಸ್ಥಾಪಕರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕ ಬಿ.ಬಿ.ವಿಶ್ವನಾಥ್ ತಿಳಿಸಿದರು.

ಯುವಕ ಯುವತಿಯರಿಗಾಗಿ ಭಾವಗೀತೆ, ಲಾವಣಿ ಪದ, ರಂಗಗೀತೆ ಮತ್ತು ಏಕಪಾತ್ರಾಭಿನಯ ಜರುಗಲಿವೆ. ಗುಂಪು ಸ್ಪರ್ಧೆಗಳಾದ ಗೀಗಿ ಪದ, ಕೋಲಾಟ, ಜಾನಪದ ನೃತ್ಯ, ಭಜನೆ, ಜಾನಪದ ಗೀತೆಗಳು ಏರ್ಪಡಲಿವೆ. ಯುವತಿಯರಿಗಾಗಿ ರಾಗಿ ಜೋಳ ಬೀಸುವ ಒನಕೆ ಪದ ಹಾಗೂ ಸೋಬಾನ ಪದಗಳ ಗುಂಪು ಸ್ಪರ್ಧೆ ನಡೆಯಲಿವೆ. ಯುವಕರಿಗಾಗಿ ವೀರಗಾಸೆ, ಡೊಳ್ಳು ಕುಣಿತ, ದೊಡ್ಡಾಟ, ಸಣ್ಣಾಟ, ಯಕ್ಷಗಾನ, ಚರ್ಮವಾದ್ಯ ಸ್ಪರ್ಧೆಗಳು ನಡೆಯಲಿದ್ದು, ವಿಭಾಗವಾರು ಆಯ್ಕೆಗೊಂಡ ಯುವ ಸ್ಪರ್ಧಾಳುಗಳು ಇವುಗಳಲ್ಲಿ ಭಾಗವಹಿಸುವರು. 

ನಗರಾಭಿವೃದ್ಧಿ ಕೋಶದ ಯೋಜನಾ ನಿದರ್ೇಶಕ ರುದ್ರೇಶ್, ಜಿಪಂ ಉಪ ಕಾರ್ಯದಶರ್ಿ ಬಿ.ಕಲ್ಲೇಶ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.