ಪೇಟೆ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ ನಾಲ್ಕನೇ ವಾರ್ಷಿಕ ಮಹಾಜನ ಸಭೆ
Fourth Annual General Meeting of the Pete Basaveshwara Souharda Sahakari Sangha
ಲೋಕದರ್ಶನ ವರದಿ
ಪೇಟೆ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ ನಾಲ್ಕನೇ ವಾರ್ಷಿಕ ಮಹಾಜನ ಸಭೆ
ಕಂಪ್ಲಿ 13: ಪಟ್ಟಣದ ಎಸ್‌ಎನ್‌ಪೇಟೆಯ ಶ್ರೀ ರಾಘವೇಂದ್ರ ಸ್ವಾಮಿ ಶಾಖಾ ಮಠದ ಭವನದಲ್ಲಿ ಶ್ರೀ ಪೇಟೆ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ ನಾಲ್ಕನೇ ವಾರ್ಷಿಕ ಮಹಾಜನ ಸಭೆ ರವಿವಾರ ನಡೆಯಿತು. ಸಂಘದ ಅಧ್ಯಕ್ಷ ಜಗದೀಶ ಜಿ.ರಾಯ್ಕರ್ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸಹಕಾರಿ ಸಂಘವು ಕಂಪ್ಲಿ ಸೇರಿದಂತೆ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳನ್ನು ಒಳಗೊಂಡಿರುತ್ತದೆ. ಸಂಘವು 2073 ಜನ ಸದಸ್ಯರನ್ನು ಹೊಂದಿದೆ. ಶೇರು ಬಂಡವಾಳ ರೂ ಎರಡು ಕೋಟಿ ಇಪ್ಪತ್ತು ಐದು ಲಕ್ಷ ಒಂಬತ್ತುಸಾವಿರಗಳು ಇರುತ್ತವೆ. ಸುಮಾರು 50,09,037.46 ಗಳಷ್ಟು ನಿಧಿಗಳನ್ನು ಹೊಂದಿದೆ. ಸುಮಾರು 16ಕೋಟಿ 33ಲಕ್ಷ 10ಸಾವಿರ 758 ರೂಪಾಯಿ ಸಂಗ್ರಹಿಸಿರುತ್ತದೆ. ಜಾಮೀನುಸಾಲ, ಮಾರ್ಟಗೇಜ್ ಸಾಲ, ವಾಹನಸಾಲ, ಬಂಗಾರದ ಮೇಲೆ ಸಾಲ, ಹೈಪಾತಿಕೇಶನ್ ಸಾಲ, ಡಿಪಾಜಿಟ್ ಮೇಲೆ ಸುಮಾರು 16,23,10,974 ರೂ.ಗಳ ಸಾಲ ವಿತರಿಸಲಾಗಿದೆ.ಸಾಲ ರೂಪದಲ್ಲಿ ವಿತರಿಸಲಾಗಿದೆ. ಶೇ.90ಅ ರಷ್ಟು ವಸೂಲಾತಿ ಗುರಿ ಸಾಧಿಸಲಾಗಿದೆ. ಪ್ರಸಕ್ತವಾಗಿ ಸಂಘವು 1ಕೋಟಿ 9 ಲಕ್ಷ 52 ಸಾವಿರ ನಿವ್ವಳ ಲಾಭಗಳಿಸಿದೆ. ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು. ಮುಖ್ಯಕಾರ್ಯನಿರ್ವಾಹಕ ಕೆ.ಎಂ.ಕೃತಿಕ್ ವಾರ್ಷಿಕ ವರದಿ ಮಂಡಿಸಿದರು. ನಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸಹಕಾರಿ ಸಂಘದ ಆಡಳಿತ ಮಂಡಳಿಯವರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಡಾ.ಅಶೋಕ ಬಿ.ಹಂದ್ರಾಳ, ನಿರ್ದೇಶಕರಾದ ಕೆ.ರಮೇಶ ರೆಡ್ಡಿ, ವಿರೇಶ ತಾಂಡೂರು, ಕಟ್ಟೆ ವೆಂಕಟೇಶ, ಕರಿಬಸವನಗೌಡ, ಕೃಷ್ಣ ಎಸ್.ಪೋಳ, ಜಿ.ವೀರಭದ್ರ್ಪ, ಮನೋಜ್ ಜಿ.ರಾಯ್ಕರ್, ಕೆ.ಎಂ.ಅನಿತಾ ಸುಧಾಕರ, ಸಂಧ್ಯಾ, ಮಾನಸ, ಪ್ರತ್ಯುಷ, ಹೆಚ್.ಎಂ.ಕುಮಾರಸ್ವಾಮಿ, ಟಿ.ಶಂಕರ, ಪಿ..ಜಿಂದಾವಲಿ, ಎನ್.ಚಿದಾನಂದ, ಸತೀಶ ಭತ್ತದ್, ಕೆ.ಎಂ.ಸುಧಾಕರ, ಬಿ.ಸಂತೋಷ್, ವೈ.ರವಿಶಂಕರ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ಮುಖಂಡರಾದ ಎಸ್.ಎಂ.ನಾಗರಾಜ, ಅಳ್ಳಳ್ಳಿ ವಿರೇಶ, ಜಿ.ಲಿಂಗನಗೌಡ ಸೇರಿದಂತೆ ಇತರು ಹಾಗೂ ಸಿಬ್ಬಂದಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 