ನಗರಸಭೆ ಪ್ರೌಢಶಾಲೆಗೆ ನಾಲ್ಕು ಶಿಕ್ಷಕರ ನೇಮಕ : ಪೌರಾಯುಕ್ತರಿಗೆ ಹಿತರಕ್ಷಣಾ ಸನ್ಮಾನ
Four teachers appointed to Municipal High School: Civic Service Award to Municipal Commissioner
ರಾಣೇಬೆನ್ನೂರು 14: ಐತಿಹಾಸಿಕ ಇತಿಹಾಸ ಹೊಂದಿರುವಇಲ್ಲಿನ ನಗರಸಭಾ ಪ್ರೌಢಶಾಲೆಗೆ, ನಿರಂತರ ಪ್ರಯತ್ನ, ಜನಪರ, ಬಡವರ ಪರ ಕಾಳಜಿ ಇಟ್ಟುಕೊಂಡು, ಈ ಶಾಲೆಗೆ ನಾಲ್ಕು ಶಿಕ್ಷಕರನ್ನು, ಜಿಲ್ಲಾಧಿಕಾರಿಗಳ ಅನುಮತಿಆದೇಶದನ್ವಯ ನೇಮಕಾತಿಗೊಳಿಸಿರುವುದನ್ನು ಸ್ವಾಗತಿಸಿದ ಪ್ರೌಢಶಾಲಾ ಹಿತರಕ್ಷಣಾ ಸಮಿತಿಯ ಮುಖಂಡರು ಪೌರಾಯುಕ್ತ ಫಕೀರ್ಪ ಇಂಗಳಗಿ ಅವರನ್ನು ನಗರದ ನಾಗರಿಕರ ಪರವಾಗಿ ಅಭಿನಂದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಹಿತರಕ್ಷಣಾ ಸಮಿತಿಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಪೌರಾಯುಕ್ತ ಪಕೀರ್ಪ ಇಂಗಳಗಿ ಆವರು, ತಾವು ನಗರಸಭೆ ಪ್ರೌಢಶಾಲೆಯಇತಿಹಾಸವನ್ನು ಗಮನಿಸಿದಾಗ ತುಂಬಾ ಸಂತೋಷವೆನಿಸುತ್ತದೆ.
ಇಂದಿನ ದೊಡ್ಡ ದೊಡ್ಡ ಕ್ಷೇತ್ರದಲ್ಲಿರುವ ನಗರದ ವಿಧಾನ ಸಭಾಧ್ಯಕ್ಷರಾಗಿದ್ದ ಕೆ. ಬಿ. ಕೋಳಿವಾಡರು ಸೇರಿದಂತೆ ನೂರಾರು ಗಣ್ಯರು ಇದೇ ಶಾಲೆಯಲ್ಲಿ ಕಲಿತು ಬಹುದೊಡ್ಡ ಸಾಧನೆ ಮಾಡಿದವರಾಗಿದ್ದಾರೆ. ಅಂತಹ ಪ್ರೌಢಶಾಲೆ ಇತಿಹಾಸದ ಪುನರುತ್ಥಾನವಾಗಬೇಕಾಗಿದೆ ಎನ್ನುವುದು ಎಲ್ಲರ ಆಸೆಯಾಗಿದೆ ಅದಕ್ಕಾಗಿ ಅನೇಕ ರೀತಿಯಲ್ಲಿ ಹೋರಾಟಗಳನ್ನು ಮಾಡಿ ನಾಗರಿಕ ಹಿತರಕ್ಷಣಾ ಸಮಿತಿಯುಎಲ್ಲರ ಮನಸ್ಸನ್ನು ಗೆದ್ದಿದೆ. ಈ ಶಾಲೆ ಇಂದಿಗೂ ಈ ಭಾಗದ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ತುಂಬಾ ಅನುಕೂಲವಾಗಲಿದೆ. ಶಿಕ್ಷಕರನ್ನು ನೇಮಕಾತಿ ಮಾಡಿ, ಶಾಲೆಯ ಪುನರುತ್ಥಾನಕ್ಕೆ ನಗರಸಭೆ ಆಡಳಿತವು ಮುಂದಾಗಿದೆಎಂದರು. ಸಮಿತಿಯ ಹಿರಿಯರಾದಡಾಎಸ್. ಎಲ್. ಪವಾರಅವರು, ಮಾತನಾಡಿ ಇಲ್ಲಿನ ಮಕ್ಕಳಿಗೆ ಪಾಠ ಪ್ರವಚನ ನಡೆಯಲು ಅನೇಕ ಸಮಸ್ಯೆಗಳು ಇದ್ದವು ಸಮಸ್ಯೆಗಳ ಪರಿಹಾರ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಅನೇಕ ಭಾರಿ ಶಿಕ್ಷಕರನ್ನು ನೇಮಿಸುವಂತೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿರುವ ಪೌರಾಯುಕ್ತರು ಮತ್ತು ಜಿಲ್ಲಾಧಿಕಾರಿಗಳು ಆಡಳಿತ ಸದಸ್ಯರು ಅತೀ ಅಗತ್ಯವಿರುವ ಕನ್ನಡ, ಗಣಿತ, ವಿಜ್ಞಾನ ಮತ್ತುದೈಹಿಕ ಶಿಕ್ಷಣ ಸಂಬಂಧಿಸಿದಂತೆ ಶಿಕ್ಷಕರನ್ನು ನಿಯೋಜನೆಗೊಳಿಸಿದ್ದಾರೆ,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 