ಶ್ರೀಲಂಕಾ ನೌಕಾಪಡೆಯಿಂದ ನಾಲ್ವರು ಭಾರತೀಯ ಮೀನುಗಾರರ ಬಂಧನ, ದೋಣಿ ವಶ

 ಪುದುಕೋಟೈ, ಜ 19 :    ಅಂತಾರಾಷ್ಟ್ರೀಯ ಕಡಲ ಗಡಿ ರೇಖೆ (ಐಎಂಬಿಎಲ್) ದಾಟಿ ತನ್ನ ವಿಶೇಷ ಆಥರ್ಿಕ ವಲಯದಲ್ಲಿ ಮೀನುಗಾರಿಕೆ ನಡೆಸಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ಭಾನುವಾರ ನಾಲ್ವರು ಭಾರತೀಯ ಮೀನುಗಾರರನ್ನು ಬಂಧಿಸಿದ್ದು, ಅವರ ಯಾಂತ್ರಿಕೃತ ಮೀನುಗಾರಿಕೆ ದೋಣಿಯನ್ನು ವಶಪಡಿಸಿಕೊಂಡಿದೆ.   

ಬಂಧಿತರಾದ ಮೀನುಗಾರರು ಜಿಲ್ಲೆಯ ಜೆಗದಪಟ್ಟಣಂ ಕರಾವಳಿ ಕುಗ್ರಾಮಕ್ಕೆ ಸೇರಿದವರಾಗಿದ್ದಾರೆ ಎಂದು ಮೀನುಗಾರಿಕಾ ಅಧಿಕಾರಿಗಳು ತಿಳಿಸಿದ್ದಾರೆ. ಮೀನುಗಾರರಾಧ ಅಶೋಕನ್ (27), ಶಕ್ತಿ ಕುಮಾರ್ (30), ಭಾರತಿ (31) ಮತ್ತು ಮಣಿ (33) ಡೆಲ್ಫ್ಟ ದ್ವೀಪದ ಉತ್ತರದ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬಂಧಿಸಲಾಗಿದೆ.   

ಮುಂದಿನ ಕ್ರಮಕ್ಕಾಗಿ ಮೀನುಗಾರರನ್ನು ಶ್ರೀಲಂಕಾದ ಕಂಕೇಶಾಂತುರೈ ಬಂದರಿಗೆ ಕರೆದೊಯ್ಯಲಾಗಿದೆ. 

 ಪುದುಕೊಟ್ಟೈ ಜಿಲ್ಲೆಯ ಜೆಗದಪಟ್ಟಣಂ ಮತ್ತು ಕೊಟ್ಟೈಪಟ್ಟಣಂ ಕರಾವಳಿ ಕುಗ್ರಾಮಗಳಿಂದ 1,500 ಕ್ಕೂ ಹೆಚ್ಚು ಮೀನುಗಾರರು ಶನಿವಾರ ಬೆಳಿಗ್ಗೆ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿದಿದ್ದರು.