ಆರ್ಥಿಕತೆ ನಾಶಮಾಡಲು ಪ್ರಧಾನಿ ಇಮ್ರಾನ್‍ ಖಾನ್‍ ಗೆ ವಿದೇಶಗಳಿಂದ ಹಣ- ಪಾಕ್‍ ಮಾಜಿ ಸಚಿವ ಆರೋಪ

ಇಸ್ಲಾಮಾಬಾದ್, ಡಿ 23, ದೇಶದ ಆರ್ಥಿಕತೆಯನ್ನು ನಾಶಮಾಡಲು ಮತ್ತು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯನ್ನು ಹಾಳುಮಾಡಲು ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ವಿದೇಶಗಳು ಹಣ ನೀಡಿವೆ ಎಂದು ಪಾಕಿಸ್ತಾನ್‍ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಯಕ ಅಹ್ಸಾನ್ ಇಕ್ಬಾಲ್ ಆರೋಪಿಸಿದ್ದಾರೆ. ‘ಪಿಎಂಎಲ್-ಎನ್ ಅಧಿಕಾರಾವಧಿಯಲ್ಲಿ ದೇಶದ ಆರ್ಥಿಕತೆ ವೇಗ ಪಡೆದಿತ್ತು. ಆದರೆ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸರ್ಕಾರದ ದೋಷಪೂರಿತ ನೀತಿಗಳಿಂದಾಗಿ ಆರ್ಥಿಕ ಬೆಳವಣಿಗೆ ಪ್ರಸ್ತುತ ಏಷ್ಯಾ ಉಪಖಂಡದಲ್ಲಿ ಅತ್ಯಂತ ಕೆಳಮಟ್ಟದಲ್ಲಿದೆ. ಪಿಎಂಎಲ್-ಎನ್ ನ ಪ್ರಮುಖ ನಾಯಕರು ಜೈಲುಗಳಲ್ಲಿದ್ದರೂ ಪಕ್ಷ ದೇಶದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ.’ ಎಂದು ಇಕ್ಬಾಲ್‍ ಹೇಳಿದ್ದಾರೆ.  ಮಲೇಷ್ಯಾದ ಕೌಲಾಲಂಪುರ್ ನಲ್ಲಿ ನಡೆದ ಶೃಂಗಸಭೆಗೆ ಗೈರು ಹಾಜರಾದ ಇಮ್ರಾನ್ ಅವರ ನಿಲುವಿನ ಬಗ್ಗೆ ಇಕ್ಬಾಲ್ ಸಂಶಯ ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ, ಆಡಳಿತಾರೂಢ ಪಾಕಿಸ್ತಾನ್‍  ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಚುನಾವಣಾ ಆಯೋಗದ (ಇಸಿಪಿ) ಮುಂದೆ ವಿದೇಶಿ ಧನಸಹಾಯ ಪ್ರಕರಣವನ್ನು ಎದುರಿಸುತ್ತಿದೆ ಎಂದು ಅವರು ಹೇಳಿದ್ದಾರೆ.