ಶ್ರೀಮಂತ ಪಾಟೀಲ ಹುಟ್ಟು ಹಬ್ಬದ ಪ್ರಯುಕ್ತ ವಿವಿಧ ಶರ್ಯತ್ತಗಳು..!
Former minister distributes prizes..!
ಬಹುಮಾನ ವಿತರಿಸಿದ ಮಾಜಿ ಸಚಿವರು..!
ಕಾಗವಾಡ 15: ಶ್ರೀಮಂತ ಪಾಟೀಲ ಅವರ ಹುಟ್ಟು ಹಬ್ಬದ ಪ್ರಯುಕ್ತ ನಡೆದ ಎತ್ತಿನಗಾಡಿ ಶರ್ಯತ್ತು ಮತ್ತು ಕುದುರೆ ಗಾಡಿ ಶರ್ಯತ್ತುಗಳ ವಿಜೇತರಿಗೆ ಶುಕ್ರವಾರ ದಿ. 14 ರಂದು ಕೆಂಪವಾಡದ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.
ಮಾಜಿ ಸಚಿವರು ಹಾಗೂ ಕಾಗವಾಡದ ಮಾಜಿ ಶಾಸಕ ಶ್ರೀಮಂತ ಪಾಟೀಲ ಅವರ ಹುಟ್ಟು ಹಬ್ಬದ ಪ್ರಯುಕ್ತ ಜ. 09 ರಂದು ಗಡಿಭಾಗದಲ್ಲಿ ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಚಂದ್ರ್ಪವಾಡಿಯಲ್ಲಿ "ಶಿವನೇರಿ ಕಿತಾಬ" ವತಿಯಿಂದ ಭವ್ಯ ಎತ್ತಿನ ಗಾಡಿ ಮತ್ತು ಕುದುರೆ ಗಾಡಿ ಶರ್ಯತ್ತುಗಳನ್ನು ಆಯೋಜಿಸಲಾಗಿತ್ತು.
ಶರ್ಯತ್ತುಗಳಲ್ಲಿ ವಿಜೇತರಾದವರಿಗೆ ಅಥಣಿ ಶುಗರ್ಸ ಕಾರ್ಖಾನೆಯ ಅಧ್ಯಕ್ಷ ಶ್ರೀಮಂತ (ತಾತ್ಯಾ) ಪಾಟೀಲ ಹಾಗೂ ಯುವ ನಾಯಕರು ಮತ್ತು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಶ್ರೀಮಂತ ಪಾಟೀಲ ಅವರ ಉಪಸ್ಥಿತಿಯಲ್ಲಿ ಜನರಲ್‌ನಲ್ಲಿ ಶರ್ಯತ್ತಿನಲ್ಲಿ ಪ್ರಥಮ ಸ್ಥಾನ ಪಡೆದ ಶಿರೂರ ಗ್ರಾ.ಪಂ. ಅಧ್ಯಕ್ಷರು ಹಾಗೂ ಹಿಂದಕೇಸರಿ ಹೆಲಿಕಾಪ್ಟರ್ ಬೈಜ್ಯಾ ಮಾಲೀಕ ಬಾಳು ಹಜಾರೆ ಮತ್ತು ಶಿವಾಜಿ ಮೆಟಕರಿ ಅವರ ಸಾಂಗೋಲಾ ರಾಜ್ಯಾ ಎತ್ತು ಪ್ರಥಮ ಸ್ಥಾನ ಪಡೆದು 2 ಬುಲೆಟ್ ಬೈಕ್‌ಗಳನ್ನು ಪಡೆದುಕೊಂಡರು.
ಅದೇ ರೀತಿ ದ್ವಿತೀಯ ಸ್ಥಾನಕ್ಕೆ ಎರಡು ಹೊಂಡಾ ಶೈನ್ ಬೈಕ್ ಮತ್ತು ತೃತಿಯ ಬಹುಮಾನ 2 ಎಚ್‌ಎಫ್ ಡೀಲಕ್ಸ್ ಬೈಕ್ ಮತ್ತು ಇನ್ನುಳಿದ ಎತ್ತಿನಗಾಡಿ ಹಾಗೂ ಕುದುರೆ ಗಾಡಿಯ ಶರ್ಯತ್ತುನಲ್ಲಿ ಭಾಗವಹಿಸಿದ ವಿಜೇತರಾದ ಸ್ಪರ್ದಾಳುಗಳಿಗೆ ಬಹುಮಾನ ಹಾಗೂ ಟ್ರೋಫಿಯನ್ನು ವಿತರಣೆ ಮಾಡಲಾಯಿತು.
ಈ ಸಮಯದಲ್ಲಿ ಬಾಳು ಹಜಾರೆ ಮಾತನಾಡಿ, ಮಾಜಿ ಸಚಿವರು ಹಾಗೂ ಅಥಣಿ ಶುಗರ್ಸ್‌ನ ಅಧ್ಯಕ್ಷರ ಜನ್ಮದಿನದ ಪ್ರಯುಕ್ತ ಶಿವನೇರಿ ಶುಗರ್ಸ್‌ನ ಅಧ್ಯಕ್ಷ ಸುಶಾಂತ ಶ್ರೀಮಂತ ಪಾಟೀಲ ಅವರು ಶಿವನೇರಿ ಕಿತಾಬ್ ಎಂಬ ಹೆಸರಿನಿಂದ ಭವ್ಯ ಎತ್ತಿನ ಗಾಡಿ ಶರ್ಯತ್ತು ಆಯೋಜನೆ ಮಾಡಿ, ಗಡಿಭಾಗದಲ್ಲಿ ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿ, ಸಾರ್ವಜನಿಕರ ಮೆಚ್ಚುಗೆ ಪಾತ್ರರಾಗಿದ್ದಾರೆ. ಅವರಿಗೆ ನಾವು ಅಭಿನಂದಿಸುತ್ತೇವೆ ಎಂದರು.
ಈ ಸಮಯದಲ್ಲಿ ಶರ್ಯತ್ತುಗಳ ಆಯೋಜಕರಾದ ಅಪ್ಪಾದಾದಾ ಹಜಾರೆ, ಬೀರ್ಪ ಉಗಾರೆ, ಸುಭಾಸ ಅಥಣಿ, ವಿಜಯ ಖನ್ನಿಕುಡೆ, ಅಮಿತ ಪಾಟೀಲ, ಸಿದ್ದಾರ್ಥ ಪಾಟೀಲ, ಮಾರುತಿ ನಿಕ್ಕಂ, ಧನಾಜಿ ಮಾಳಿ, ಮುಖಂಡರಾದ ಕಿರಣ ಯಂದಗೌಡರ, ಉತ್ಕರ್ಷ ಪಾಟೀಲ, ಸಚೀನ ಜಗತಾಪ, ಮಹಾಧವಲ ಯಾದವಾಡೆ, ಏಕನಾಥ ಕಾಳೇಲಿ ಸೇರಿದಂತೆ ಮತ್ತಿತರರ ಮುಖಂಡರು, ಶರ್ಯತ್ತಿನಲ್ಲಿ ವಿಜೇತರಾದ ಸ್ಪರ್ದಾಳುಗಳು, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 